Pavitra Lokesh: ಕನ್ನಡ ಸೇರಿದಂತೆ ಬಹುಭಾಷಾ ನಟಿ ಪವಿತ್ರಾ ಲೋಕೇಶ್ (Pavitra Lokesh) ಮತ್ತೆ ಮದುವೆಯಾಗುತ್ತಿದ್ದಾರೆ. ಇತ್ತೀಚೆಗೆ ತಾನೇ ತಾವು ಪ್ರೀತಿಸಿ ತೆಲುಗಿನ ಖ್ಯಾತ ನಟ ನರೇಶ್ (Naresh) ಅವರ ಜತೆ ಜೀವಿಸಿ ನಂತರ ಮದುವೆಯನ್ನೂ ಆಗಿದ್ದರು. ಮದುವೆಯ ನಂತರ ಕೈ ಕೈ ಬಿಗಿದುಕೊಂಡು ಹನಿಮೂನ್ (Honeymoon)ಕೂಡಾ ಸವಿದು ಬಂದಿದ್ದರು ಪವಿತ್ರಾ ಲೋಕೇಶ್. ನರೇಶ್ ಮತ್ತು ಪವಿತ್ರಾ ಲೋಕೇಶ್ ಮದುವೆ ಫೋಟೋ ರಿಲೀಸ್ ಆದ ಬೆನ್ನಲ್ಲೇ ಸದ್ದಿಲ್ಲದೇ ದುಬೈಗೆ (Dubai) ಹಾರಿದ್ದರು. ಇದೆಲ್ಲ ಆಯ್ತು, ಪವಿತ್ರಾ ಸೆಟ್ಲ್ ಆದ್ರು ಅಂದುಕೊಳ್ಳುವಾಗ ಮತ್ತೆ ಮರು ಮದುವೆಯ ಸುದ್ದಿ. ಏನಪ್ಪಾ, ಪವಿತ್ರ ಲೋಕೇಶ್ ಅವರು ಫಾಸ್ಟ್ ಅಂತ ಗೊತ್ತಿತ್ತು ಈ ಮಟ್ಟಿಗೆ ಫಾಸ್ಟಾ ಅಂತ ನೀವು ಅಂದುಕೊಳ್ಳುವ ಮೊದಲು ಮುಂದೆ ಓದಿ.
ಹೌದು, ಪವಿತ್ರಾ ಲೋಕೇಶ್ ಅವರು ಮರು ಮದುವೆ ಆಗುತ್ತಿದ್ದಾರೆ. ಅದು ಪಕ್ಕಾಸುದ್ದಿ. ಆದ್ರೆ ಮದುವೆಯಾಗುತ್ತಿರುವುದು ನಿಜ ಜೀವನದಲ್ಲಿ ಅಲ್ಲ. ಅವರು ‘ ಮಳ್ಳಿ ಪೆಳ್ಳಿ ‘ ಎನ್ನುವ ಚಿತ್ರದಲ್ಲಿ ನಡೆಸುತ್ತಿದ್ದು, ಅದರಲ್ಲಿ ನಿಜ ಜೀವನದ ಪತಿಯಾದ ನರೇಶ ಅವರ ಜೊತೆ ನಾಯಕಿಯಾಗಿ ನಡೆಸುತ್ತಿದ್ದಾರೆ.
ಈಗ ಅವರು ‘ಮತ್ತೆ ಮದುವೆ’ ವಿಚಾರವನ್ನು ಹಂಚಿಕೊಂಡಿದ್ದಾರೆ. ನಾಳೆ ಬೆಳಿಗ್ಗೆ 11.11 ಕ್ಕೆ ಮತ್ತೆ ಮದುವೆಗೆ ಮಹೂರ್ತ ಫಿಕ್ಸ್ ಆಗಿದೆ. ಈ ವಿಷಯದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ಹಂಚಿಕೊಂಡಿರುವ ಅವರು ‘ ನಾಳೆ ಮತ್ತೆ ಮದುವೆಯ ಟೀಸರ್ ಬಿಡುಗಡೆಯಾಗಲಿದೆ. ಶುಭ ಹಾರೈಸಿ’ ಎಂದು ಬರೆದುಕೊಂಡಿದ್ದಾರೆ. ಅವರ ‘ ಮಳ್ಳಿ ಪೆಳ್ಳಿ ‘ ಅಂದರೆ ‘ಮತ್ತೆ ಮದುವೆ’ (Matte Maduve) ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿತ್ತು.
ನಿಜ ಜೀವನದ ಪತಿ ನರೇಶ್ ಜೊತೆ ಪವಿತ್ರಾ ಲೋಕೇಶ್ ಜೋಡಿಯಾಗಿ ನಟಿಸಿರುವ ‘ಮತ್ತೆ ಮದುವೆ’ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಚಿತ್ರರಂಗದಲ್ಲಿ ಸಾಕಷ್ಟು ಕ್ಯೂರಿಯಾಸಿಟಿಯನ್ನು ಹುಟ್ಟು ಹಾಕಿದೆ. ಸದ್ಯ ಪವಿತ್ರ ಲೋಕೇಶ್ ಮತ್ತು ನರೇಶ್ ಅವರು ಟ್ರೆಂಡಿಂಗ್ ಸಬ್ಜೆಕ್ಟ್ ಗಳು. ಅವರ ಜನಪ್ರಿಯತೆಯನ್ನು ಬಳಸಿಕೊಂಡು ಮರುಮದುವೆ ಚಿತ್ರ ರೂಪಿಸಲಾಗಿದೆ ಎನ್ನಲಾಗುತ್ತಿದೆ. ಈ ಚಿತ್ರವು ಏಕಕಾಲದಲ್ಲಿ ತೆಲುಗು ಹಾಗೂ ಕನ್ನಡದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಏಪ್ರಿಲ್ ಅಥವಾ ಮೇ ನಲ್ಲಿ ತೆರೆ ಕಾಣಲಿದೆ.
ವಿಜಯ ಕೃಷ್ಣ ಮೂವೀಸ್ ಬ್ಯಾನರ್ ನಡಿ ನರೇಶ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಎಂ. ಎಸ್. ರಾಜು (MS Raju) ಆಕ್ಷನ್ ಕಟ್ ಹೇಳಿದ್ದಾರೆ. ‘ಮತ್ತೆ ಮದುವೆ’ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾವಾಗಿದ್ದು ಎಂ.ಎಸ್. ರಾಜು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣಹಚ್ಚಿದ್ದಾರೆ. ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ ಹಾಗೂ ಮಧೂ ಒಳಗೊಂಡ ಬಹು ದೊಡ್ಡ ತಾರಾಬಳಗ ಚಿತ್ರದಲ್ಲಿದೆ.
ಇದನ್ನು ಓದಿ: IPL 2023: ಅರ್ಜುನ್ ತೆಂಡೂಲ್ಕರ್ ಸಾಧನೆಗೆ ಭರ್ಜರಿ ಗಿಫ್ಟ್ ಕೊಟ್ಟ ಸಚಿನ್ ತೆಂಡೂಲ್ಕರ್!!
