Karnataka PUC Result 2023: ಈ ಬಾರಿಯ 2022-23 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ (Karnataka PUC Result 2023) ಮೌಲ್ಯಮಾಪನ ಪೂರ್ಣಗೊಂಡಿದ್ದು. ಫಲಿತಾಂಶ ಇಂದು (ಎಪ್ರಿಲ್ 21) ಪ್ರಕಟ ಗೊಂಡಿದೆ. ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿ ಪ್ರಥಮ( 95.33%), ದ್ವಿತೀಯ ಉಡುಪಿ ಜಿಲ್ಲೆ(95.24%), ಮೂರನೇಯದಾಗಿ ಕೊಡಗು ಜಿಲ್ಲೆ(90.55%). ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ.
ತಬಸ್ಸುಂ ಶೇಖ್ (NMKRV ಕಾಲೇಜು, ಜಯನಗರ, ಬೆಂಗಳೂರು) 600 ಕ್ಕೆ 593 ಅಂಕ. ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ
ವಾಣಿಜ್ಯ ವಿಭಾಗದಲ್ಲಿ ಅನನ್ಯ ( ಆಳ್ವಾಸ್ ಕಾಲೇಜು, ಮೂಡುಬಿದಿರೆ 600 ಕ್ಕೆ 600 ಅಂಕ) ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ.
ವಿಜ್ಞಾನ ವಿಭಾಗದಲ್ಲಿ ಕೌಶಕ್ 600ಕ್ಕೆ 596 ಅಂಕ ( ಕೋಲಾರ, ಗಂಗೋತ್ರಿ ಕಾಲೇಜು) ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ.
ಈ ಬಾರಿ 74.67 ಶೇಕಡಾ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಈ ಬಾರಿ ದ್ವಿತೀಯ ಪಿಯುಸಿ (Second PUC) ವಿದ್ಯಾರ್ಥಿಗಳಿಗೆ (Students) ಮಾರ್ಚ್ 9 ರಿಂದ ಮಾ.29 ರವರಗೆ ಪರೀಕ್ಷೆ ನಡೆದಿತ್ತು. ರಾಜ್ಯದ 5716 ಕಾಲೇಜುಗಳಿಗೆ 1,109 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆದಿತ್ತು. ರಾಜ್ಯದ ಒಟ್ಟು 3,63,698 ವಿದ್ಯಾರ್ಥಿಗಳು ಮತ್ತು 3,62,497 ವಿದ್ಯಾರ್ಥಿನಿಯರು ಸೇರಿ ಒಟ್ಟು 7,26,195 ಅಭ್ಯರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರು. ಇದರಲ್ಲಿ 6.29 ಲಕ್ಷ ವಿದ್ಯಾರ್ಥಿಗಳು ಹೊಸಬರು, 25,847 ಖಾಸಗಿ ಮತ್ತು 70,589 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದರು.
ಪಿಯುಸಿ ಪರೀಕ್ಷಾ ಫಲಿತಾಂಶ ವೀಕ್ಷಿಸುವುದು ಹೇಗೆ?
* ಅಭ್ಯರ್ಥಿಗಳು ಮೊದಲಿಗೆ www.karresults.nic.in ಲಿಂಕ್ ಕ್ಲಿಕ್ ಮಾಡಿ
* ನಂತರ ಸ್ಕ್ರೀನ್‌ನಲ್ಲಿ ಕಾಣುವ ಸೆಕೆಂಡ್ ಪಿಯುಸಿ ಫಲಿತಾಂಶ 2023 ಗಾಗಿ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
* ನಂತರ ನಿಮ್ಮ ನೊಂದಣಿ ಸಂಖ್ಯೆಯನ್ನು ಎಂಟ್ರಿ ಮಾಡಿ ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಿ, ಫಲಿತಾಂಶ ಲಭ್ಯ.
* ನಂತರ ನಿಮ್ಮ ಅಂಕಪಟ್ಟಿಯನ್ನು ಡೌನ್ಲೋಡ್ ಮಾಡಿ.
ಮರುಮೌಲ್ಯಮಾಪನಕ್ಕಾಗಿ ಇಲ್ಲಿದೆ ವಿವರ!
ಸೆಕೆಂಡ್ ಪಿಯುಸಿ ಫಲಿತಾಂಶ ಪ್ರಕಟವಾದ ನಂತರ ಮರುಪರಿಶೀಲನೆ ಮಾಡಲು ಬಯಸುವ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಹಾಗೂ ಅಲ್ಲಿ ಅರ್ಜಿ ಸಲ್ಲಿಸಬೇಕು. ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವಿವರಗಳಿಗಾಗಿ ಕರ್ನಾಟಕ ಮಂಡಳಿಯ ಅಧಿಕೃತ ವೆಬ್‌ಸೈಟನ್ನು ಪರಿಶೀಲಿಸಬೇಕೆಂದು ಸೂಚಿಸಲಾಗಿದೆ.
ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಲು ಇಂದಿನಿಂದಲೇ ನೋಂದಣಿ ಮಾಡಲು ಅವಕಾಶ ನೀಡಲಾಗಿದೆ. ಎಪ್ರಿಲ್ ಕೊನೆಯ ವಾರದಲ್ಲಿ ಮರು ಪರೀಕ್ಷೆಯ ದಿನಾಂಕ ಪ್ರಕಟಿಸಲಾಗುವುದು. ಈ ಬಗ್ಗೆ ಮಂಡಳಿ ಇಂದು ಹೇಳಿದೆ. ಅಷ್ಟು ಮಾತ್ರವಲ್ಲದೇ, ಈ ಬಾರಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಾರ್ಕ್ಸ್ ಕಮ್ ಅರ್ಜಿ ನೀಡಲಾಗುವುದಿಲ್ಲ, ಬದಲಿಗೆ ಫಲಿತಾಂಶದ ಪಟ್ಟಿ ಆಧರಿಸಿ ಶುಲ್ಕ ಸಂಗ್ರಮ ಸಂಗ್ರಹ ಮಾಡಲಾಗುತ್ತದೆ.
