Home » Bengaluru: ಕಾರಿನ ಮೇಲೆ ಗಾಲ್ಫ್ ಬಾಲ್ ಬಿದ್ದು ಗಾಜು ಪುಡಿ, ಚಾಲಕನಿಗೆ ಗಾಯ ; ಗಾಲ್ಫ್ ಕ್ಲಬ್ ವಿರುದ್ಧ ಎಫ್ ಐಆರ್ ದಾಖಲು!!!

Bengaluru: ಕಾರಿನ ಮೇಲೆ ಗಾಲ್ಫ್ ಬಾಲ್ ಬಿದ್ದು ಗಾಜು ಪುಡಿ, ಚಾಲಕನಿಗೆ ಗಾಯ ; ಗಾಲ್ಫ್ ಕ್ಲಬ್ ವಿರುದ್ಧ ಎಫ್ ಐಆರ್ ದಾಖಲು!!!

2 comments
Bengaluru

Bengaluru golf club: ಚಲಿಸುತ್ತಿದ್ದ ಕಾರಿನ (car) ಮೇಲೆ ಗಾಲ್ಫ್ ಬಾಲ್ (Golf ball) ಬಿದ್ದಿದ್ದು, ಘಟನೆ ಪರಿಣಾಮ ಚಾಲಕನಿಗೆ ಗಾಯವಾಗಿದ್ದು, ಜೊತೆಗೆ ಕಾರಿನ ಮುಂಭಾಗದ ಗಾಜು ಒಡೆದಿರುವ ಘಟನೆ ಇಲ್ಲಿನ (Bengaluru) ಓಲ್ಡ್ ಹೈಗ್ರೌಂಡ್ಸ್ ಜಂಕ್ಷನ್ ಬಳಿ ನಡೆದಿದೆ.

ಏಪ್ರಿಲ್ 20ರಂದು (ನಿನ್ನೆ) ಬೆಳಗ್ಗೆ 10.42ರ ವೇಳೆ ಘಟನೆ ನಡೆದಿದ್ದು, ವ್ಯಕ್ತಿ ಕಾರಿನಲ್ಲಿ ಸ್ಯಾಂಕಿ ರಸ್ತೆಯ ಓಲ್ಡ್ ಹೈಗೌಂಡ್ ಜಂಕ್ಷನ್ ಬಳಿ ತೆರಳುತ್ತಿದ್ದ ವೇಳೆ ಏಕಾಏಕಿ ಕಾರಿನ ಮುಂಭಾಗಕ್ಕೆ ಗಾಲ್ಫ್ ಬಾಲ್ ಬಂದು ಬಿದ್ದಿದ್ದು, ಪರಿಣಾಮ ಗ್ಲಾಸ್ ಒಡೆದಿದ್ದು, ಜೊತೆಗೆ ಚಾಲಕನ ಎಡಗೈ ಬೆರಳು ಗಾಯವಾಗಿದೆ.

ಈ ಬಗ್ಗೆ ಕಾರಿನ ಮಾಲಿಕ ವಕೀಲ ಗಿರೀಶ್, ಗಾಲ್ಫ್ ಕ್ಲಬ್ ಆಡಳಿತ ಮಂಡಳಿ ಮತ್ತು ಆಟಗಾರನ ವಿರುದ್ಧ ಪೊಲೀಸ್ ಠಾಣೆಗೆ (Police Station) ದೂರು ನೀಡಿದ್ದು, ದೂರಿನ ಮೇರೆಗೆ ಪೊಲೀಸರು ಬೆಂಗಳೂರು ಗಾಲ್ಫ್ ಕ್ಲಬ್ (Bengaluru Golf Club) ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಇದನ್ನೂ ಓದಿ: Karnataka 2nd PUC Supplementary Exam 2023: ಅನುತ್ತೀರ್ಣಗೊಂಡ ವಿದ್ಯಾರ್ಥಿಗಳೇ ನಿರಾಶರಾಗಬೇಡಿ! ನಿಮಗೊಂದು ಮಾಹಿತಿ ಇಲ್ಲಿದೆ, ಓದಿ!!

You may also like

Leave a Comment