Home » EPFO Account : ಇಂಟರ್ನೆಟ್ ಇಲ್ಲದೇ ಇಪಿಎಫ್​ ಬ್ಯಾಲೆನ್ಸ್​ ಈ ರೀತಿ ಚೆಕ್ ಮಾಡಿ!

EPFO Account : ಇಂಟರ್ನೆಟ್ ಇಲ್ಲದೇ ಇಪಿಎಫ್​ ಬ್ಯಾಲೆನ್ಸ್​ ಈ ರೀತಿ ಚೆಕ್ ಮಾಡಿ!

2 comments
EPFO Account

EPFO Account : ಇಪಿಎಫ್ ಖಾತೆಗೆ ವರ್ಷಕ್ಕೊಮ್ಮೆ ಬಡ್ಡಿ ಜಮೆ ಮಾಡಲಾಗುತ್ತದೆ. ಆದಕಾರಣ ಆಗಾಗ ಇಪಿಎಫ್ ಖಾತೆಯಲ್ಲಿ (EPFO Account) ಎಷ್ಟು ಬ್ಯಾಲೆನ್ಸ್ ಇದೆ ಎಂದು ಪರಿಶೀಲಿಸೋದು ಅಗತ್ಯ. ಆದರೆ, ಮನೆಯಲ್ಲೇ ಕುಳಿತು ಇಂಟರ್ನೆಟ್ ಅಗತ್ಯವಿಲ್ಲದೆ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು. ಅದು ಹೇಗೆ ಎಂದು ಇಲ್ಲಿ ಸಂಪೂರ್ಣ ವಿವರ ನೀಡಲಾಗಿದೆ.

ಆದರೆ ನೆನಪಿರಲಿ ಈ ವಿಧಾನದಲ್ಲಿ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಲು ನಿಮ್ಮ UAN ಜೊತೆಗೆ ಬ್ಯಾಂಕ್ ಖಾತೆ (Bank account), ಆಧಾರ್ (Aadhaar), ಪ್ಯಾನ್ ಸಂಖ್ಯೆ (PAN number) ಲಿಂಕ್ (link) ಆಗಿರಬೇಕು.

ಒಬ್ಬ ಉದ್ಯೋಗಿ ತನ್ನ ಮಾಸಿಕ ವೇತನದ ಶೇ.12ರಷ್ಟನ್ನು ಇಪಿಎಫ್​​ಗೆ ಕೊಡುಗೆಯಾಗಿ ನೀಡಬೇಕಾಗುತ್ತದೆ. ಮತ್ತು ಉದ್ಯೋಗದಾತ ಸಂಸ್ಥೆ ಕೂಡ ಇಷ್ಟೇ ಪ್ರಮಾಣದ ಅಂದ್ರೆ ಶೇ.12ರಷ್ಟನ್ನು ಇಪಿಎಫ್​​ಗೆ ಕೊಡುಗೆಯಾಗಿ ನೀಡುತ್ತದೆ. ಈ ಶೇ.12ರಲ್ಲಿ ಶೇ.8.33 ಉದ್ಯೋಗಿಗಳ ಪಿಂಚಣಿ ಯೋಜನೆಗೆ ಹಾಗೂ ಶೇ.3.67ಉದ್ಯೋಗಿಗಳ ಭವಿಷ್ಯ ನಿಧಿಗೆ ಹೋಗುತ್ತದೆ.

ಇಪಿಎಫ್ ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ಎಂದು ಇಂಟರ್ನೆಟ್ ಇಲ್ಲದೆ ಪರಿಶೀಲಿಸಲು ಈ ವಿಧಾನ ಅನುಸರಿಸಿ;

ನಿಮ್ಮ ಮೊಬೈಲ್ ನಲ್ಲಿ “EPFOHO UAN ENG” ಎಂದು ಟೈಪ್ ಮಾಡಿ 7738299899 ಸಂಖ್ಯೆಗೆ ಮೆಸೇಜ್ (Message) ಕಳುಹಿಸಿ. ನಿಮ್ಮ ಪಿಎಫ್​ ಖಾತೆಯಲ್ಲಿರೋ ಬ್ಯಾಲೆನ್ಸ್​ ತಿಳಿದುಕೊಳ್ಳಬಹುದು. ಒಂದು ವೇಳೆ ನಿಮಗೆ ಕನ್ನಡದಲ್ಲಿ ಮಾಹಿತಿ ಬೇಕಿದ್ದರೆ “EPFOHO UAN KAN” ಎಂದು ಟೈಪ್ ಮಾಡಿ ಕಳುಹಿಸಬೇಕು. ಈಗ ನಿಮಗೆ ಪಿಎಫ್ ಖಾತೆಯಲ್ಲಿರುವ ಬ್ಯಾಲೆನ್ಸ್ ವಿವರ ಕೆಲವೇ ಸಮಯದಲ್ಲಿ ಲಭಿಸುತ್ತದೆ.

ಇನ್ನು 9966044425 ಸಂಖ್ಯೆಗೆ ಮಿಸ್ ಕಾಲ್ ನೀಡೋ ಮೂಲಕ ಕೂಡ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು. ಆದರೆ ಇದಕ್ಕೆ ನೀವು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿದ್ರೆ ಮಾತ್ರ ಮಾಹಿತಿ ಲಭಿಸುತ್ತದೆ. ನೀವು ಕರೆ ಮಾಡಿದಾಗ ಎರಡು ರಿಂಗ್ ಆಗಿ ಬಳಿಕ ಕಾಲ್ ಕಡಿತಗೊಳ್ಳುತ್ತದೆ. ಆ ಬಳಿಕ ನಿಮ್ಮ ಮೊಬೈಲ್ ಗೆ ಬ್ಯಾಲೆನ್ಸ್ ಮಾಹಿತಿ ಸಂದೇಶ ರೂಪದಲ್ಲಿ ಬರುತ್ತದೆ. ಈ ಸೇವೆ ಪಡೆಯಲು ಗ್ರಾಹಕರಿಗೆ ಯಾವುದೇ ವೆಚ್ಚ ಮಾಡಬೇಕಾದ ಅಗತ್ಯವೂ ಇಲ್ಲ. ಈ ರೀತಿಯಾಗಿ ಇಂಟರ್ನೆಟ್ ಇಲ್ಲದೆ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಬಡ್ಡಿದರ ಪರಿಶೀಲನೆ ಮಾಡಬಹುದಾಗಿದೆ.

 

ಇದನ್ನು ಓದಿ: Viral Video: ಇಬ್ಬರು ಯುವಕರು ಡೆನಿಮ್ ಸ್ಕರ್ಟ್ ಧರಿಸಿ ಮೆಟ್ರೋ ಹತ್ತುತ್ತಿರುವ ವಿಡಿಯೋ ವೈರಲ್‌ ..! ನೆಟ್ಟಿಗರು ಹೇಳಿದ್ದೇನು? 

You may also like

Leave a Comment