Home » DK Shivakumar -Amit Shah: ಅಮಿತ್ ಷಾ ತಂಗಿದ್ದ ಹೋಟೆಲ್ ಒಳಕ್ಕೆ ಹೋದ ಡಿಕೆ ಶಿವಕುಮಾರ್ !

DK Shivakumar -Amit Shah: ಅಮಿತ್ ಷಾ ತಂಗಿದ್ದ ಹೋಟೆಲ್ ಒಳಕ್ಕೆ ಹೋದ ಡಿಕೆ ಶಿವಕುಮಾರ್ !

1 comment
DK Shivakumar -Amit Shah

DK Shivakumar -Amit Shah: ಬಿಜೆಪಿ-ಕಾಂಗ್ರೆಸ್ (BJP-Congress) ಮಧ್ಯೆ ವೈರತ್ವ ಅನ್ನೋದು ಸದಾ ಇರುತ್ತದೆ. ಎರಡೂ ಪಕ್ಷಗಳಿಗೂ ಆಗಿ ಬರೋದೇ ಇಲ್ಲ. ಇನ್ನು ಒಟ್ಟಿಗೆ ಕುಳಿತು ಮಾತನಾಡುವ ಪ್ರಶ್ನೆಯೇ ಇಲ್ಲ. ಆದರೆ, ಬಿಜೆಪಿ ರಾಷ್ಟ್ರೀಯ ನಾಯಕ ಅಮಿತ್ ಶಾ (Amit Shah) ತಂಗಿದ್ದ ಹೋಟೆಲ್ ಒಳಕ್ಕೆ ಡಿಕೆ ಶಿವಕುಮಾರ್ (DK Shivakumar) ಹೋಗಿದ್ದಾರೆ ಎನ್ನಲಾಗಿದ್ದು, ಸದ್ಯ ಈ ವಿಚಾರ ಅಚ್ಚರಿ ಮೂಡಿಸಿದೆ. ಹಾಗಿದ್ದರೆ, ಡಿಕೆಶಿ ಶಾ (DK Shivakumar -Amit Shah) ತಂಗಿದ್ದ ಹೋಟೆಲ್ ಗೆ ಹೋಗಿದ್ದಾದರೂ ಯಾಕೆ?

ಏಪ್ರಿಲ್ 21 ರಂದು ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿದ್ದಾರೆ. ಶಾ ಬೆಂಗಳೂರಿನ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ವಿಜಯಪುರದಲ್ಲಿ ರೋಡ್ ಶೋನಲ್ಲಿ ಭಾಗವಹಿಸಲು ಆಗಮಿಸಿದ್ದರು. ಆದರೆ, ಮಳೆಯ ಕಾರಣ ರೋಡ್ ​ಶೋ ರದ್ದುಮಾಡಲಾಯಿತು.

ನಂತರ ಬೆಂಗಳೂರಿನ ತಾಜ್‌ವೆಸ್ಟ್​ ಎಂಡ್​​​ ಹೋಟೆಲ್‌ಗೆ ತೆರಳಿದ
ಅಮಿತ್​ ಶಾ ಅವರು ಶುಕ್ರವಾರ ರಾತ್ರಿ 8 ರಿಂದ 9 ಗಂಟೆಯವರೆಗೆ
ಬಿಜೆಪಿಯ ಪ್ರಮುಖ ನಾಯಕರ ಜೊತೆಗೆ ಸಭೆ ನಡೆಸಿದರು. ಸಭೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (B. S. Yediyurappa), ರಾಜ್ಯ ಚುನಾವಣಾ ಉಸ್ತುವಾರಿ ಕೆ. ಅಣ್ಣಾಮಲೈ (K. Annamalai), ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಹಲವು ಪ್ರಮುಖ ನಾಯಕರು ಆಗಮಿಸಿದ್ದರು.

ಅಚ್ಚರಿಯ ವಿಷಯವೆಂದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಮಿತ್ ಷಾ ತಂಗಿದ್ದ ಹೋಟೆಲ್ ಒಳಕ್ಕೆ ಹೋಗಿದ್ದಾರೆ. ಅಷ್ಟಕ್ಕೂ ಡಿಕೆಶಿ ಆ ಹೊಟೇಲ್ ಗೆ ಹೋಗಿದ್ದು ಯಾಕೆ? ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ (Randeep Surjewala) ಕೂಡ ಶಾ ಇರುವ ತಾಜ್‌ವೆಸ್ಟ್​ ಎಂಡ್​​​ ಹೋಟೆಲ್‌ನಲ್ಲಿ ತಂಗಿದ್ದರು. ಹಾಗಾಗಿ ಅವರನ್ನು ಭೇಟಿಯಾಗುವ ಸಲುವಾಗಿ ಡಿ.ಕೆ. ಶಿವಕುಮಾರ್ ಹೋಟೆಲ್ ಒಳಹೋದರು ಎನ್ನಲಾಗಿದೆ.

ಇದನ್ನೂ ಓದಿ: RTE Application: ಆರ್ ಟಿಇ ದಾಖಲಾತಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ!

You may also like

Leave a Comment