Threat To PM Modi : ಪ್ರಧಾನಿ ಮೋದಿ (Narendra Modi) ಅವರು ಕೇರಳ (Kerala) ಪ್ರವಾಸ ಕೈಗೊಳ್ಳಲಿದ್ದು, ಕೊಚ್ಚಿ ಪ್ರವಾಸ ವೇಳೆ ಆತ್ಮಾಹುತಿ ಬಾಂಬ್ ದಾಳಿ ನಡೆಸೋದಾಗಿ ದುಷ್ಕರ್ಮಿಗಳು ಬಿಜೆಪಿ ಕಛೇರಿಗೆ ಬೆದರಿಕೆ ( Threat To PM Modi)ಹಾಕಿದ್ದಾರೆ.
ಹೌದು, ಇದೇ ಏ.24 ರಂದು ಪ್ರಧಾನಿ ಮೋದಿ (Narendra Modi) ಕೇರಳ (Kerala) ಪ್ರವಾಸ ಕೈಗೊಳ್ಳಲಿದ್ದಾರೆ. ಈ ಧೇಳೆ ಮೋದಿ ಅವರಿಗೆ ಕೊಚ್ಚಿಯಲ್ಲಿ ಆತ್ಮಾಹುತಿ ದಾಳಿ ನಡೆಸೋದಾಗಿ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದು, ಈ ಕುರಿತಂತೆ ಅನಾಮಿಕನೊಬ್ಬ ತಿರುವನಂತಪುರದ ಬಿಜೆಪಿ ಕಛೇರಿಗೆ ಪತ್ರ ರವಾನಿಸಿದ್ದಾನೆ. ಈ ವೇಳೆ ಪ್ರಧಾನಿ ಭದ್ರತೆಗೆ ನಿಯೋಜಿಸಲಾಗಿದ್ದ ವಿವಿಐಪಿ ಭದ್ರತಾ ಯೋಜನೆ ಹಾಗೂ ಸಿಬ್ಬಂದಿಯ ವಿವರವೂ ಸೋರಿಕೆಯಾಗಿದೆ ಎನ್ನಲಾಗಿದೆ.
ಕೊಚ್ಚಿಯಲ್ಲಿರುವ ವ್ಯಕ್ತಿಯೊಬ್ಬರು ಮಲಯಾಳಂ ಭಾಷೆಯಲ್ಲಿ ಬರೆದಿದ್ದಾರೆ ಎನ್ನಲಾದ ಪತ್ರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರ ಕಚೇರಿಯಲ್ಲಿ ಸ್ವೀಕರಿಸಿದ್ದು, ಅವರು ಕಳೆದ ವಾರ ಅದನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಭದ್ರತಾ ಏಜೆನ್ಸಿಗಳು ತನಿಖೆ ಆರಂಭಿಸಿವೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಭವಿಷ್ಯವನ್ನು ಮೋದಿ ಎದುರಿಸಲಿದ್ದಾರೆ. ರಾಜೀವ್ ಗಾಂಧಿಗೆ ಆದ ಗತಿಯೇ ನಿಮಗೂ ಆಗುತ್ತೆ ಎಂದು ಪತ್ರದಲ್ಲಿ ಬರೆಯಲಾಗಿದೆ. ಹೀಗಾಗಿ ಖಾಕಿ ಹೈ ಅಲರ್ಟ್ ಆಗಿದ್ದಾರೆ.
ಪತ್ರದಲ್ಲಿ ವಿಳಾಸ ಹೊಂದಿದ್ದ ಎನ್.ಕೆ.ಜಾನಿ ಎಂಬ ವ್ಯಕ್ತಿಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಕೊಚ್ಚಿ ಮೂಲದ ಜಾನಿ ಪತ್ರ ಬರೆದಿರುವುದನ್ನು ಅಲ್ಲಗಳೆದಿದ್ದಾನೆ. ತನ್ನ ವಿರುದ್ಧ ದ್ವೇಷ ಸಾಧಿಸಿದ ವ್ಯಕ್ತಿಯೇ ಈ ರೀತಿ ಬೆದರಿಕೆ ಪತ್ರ ಬರೆದು ನನ್ನ ಮೇಲೆ ಸಂಶಯ ಬರುವಂತೆ ಮಾಡಿರಬಹುದು ಎಂದು ಪೊಲೀಸರಿಗೆ ಜಾನಿ ತಿಳಿಸಿದ್ದಾನೆ.
ಅಂದಹಾಗೆ ಕಳೆದ ವಾರ ತಿರುವನಂತಪುರಂ ಬಿಜೆಪಿ ಕಚೇರಿಗೆ ಈ ಬೆದರಿಕೆ ಪತ್ರ ಬಂದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್ ಇಲಾಖೆ ಕೇರಳದಾದ್ಯಂತ ಹೈ ಅಲರ್ಟ್ ಘೋಷಿಸಿದ್ದಾರೆ. ರಾಜ್ಯಾದ್ಯಂತ ಬಿಗಿಭದ್ರತೆ ಕೈಗೊಂಡಿದ್ದಾರೆ.
ಇದನ್ನೂ ಓದಿ: Siddaramaiah : ಲಿಂಗಾಯತ ಸಿಎಂ ಅವ್ರೇ ಭ್ರಷ್ಟಾಚಾರ ಮಾಡಿ ರಾಜ್ಯ ಹಾಳು ಮಾಡಿರೋದು! ನಾಲಗೆ ಹರಿಬಿಟ್ಟು ಸಿದ್ದರಾಮಯ್ಯ ಎಡವಟ್ಟು
