Home » Sampath Jayaram: ಕನ್ನಡ ಸೀರಿಯಲ್​ ಅಗ್ನಿಸಾಕ್ಷಿ ನಟ ​​ ಆತ್ಮಹತ್ಯೆ, ಕಣ್ಣೀರು ಮಿಡಿದ ತಾರೆಯರು

Sampath Jayaram: ಕನ್ನಡ ಸೀರಿಯಲ್​ ಅಗ್ನಿಸಾಕ್ಷಿ ನಟ ​​ ಆತ್ಮಹತ್ಯೆ, ಕಣ್ಣೀರು ಮಿಡಿದ ತಾರೆಯರು

0 comments
Sampath Jayaram

ಕನ್ನಡದ ನಟ ಸಂಪತ್​ ಜಯರಾಮ್ (Sampath Jayaram) ಶನಿವಾರ (ಏಪ್ರಿಲ್​ 22) ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಸಿನಿಮಾ, ಸಿರಿಯಲ್ ಗಳಲ್ಲಿ ನಟಿಸಿದ್ದ ಸಂಪತ್​ ಜಯರಾಮ್​ ಅಗ್ನಿಸಾಕ್ಷಿ ಮೂಲಕ ಖ್ಯಾತಿ ಹೊಂದಿದ್ದರು. ಇತ್ತೀಚೆಗೆ ಸಂಪತ್ ಸಿನಿಮಾ, ಸೀರಿಯಲ್ ಗಳಲ್ಲಿ ಅವಕಾಶವಿಲ್ಲದೆ ಚಿಂತಿತರಾಗಿದ್ದರು ಎನ್ನಲಾಗಿದೆ. ಸದ್ಯ ತಮ್ಮ ಬದುಕಿಗೆ ವಿದಾಯ ಹೇಳಿದ್ದಾರೆ. ನಟನ ಸಾವಿನ ಸುದ್ದಿ ಎಲ್ಲರಿಗೂ ಆಘಾತ ಉಂಟುಮಾಡಿದೆ.

ಅತ್ಯಂತ ಚಿಕ್ಕವಯಸ್ಸಿಗೆ ಬದುಕು ಅಂತ್ಯಗೊಳಿಸಿದ ಸಂಪತ್ (35 ವರ್ಷ) ಅವರಿಗೆ ಮದುವೆಯಾಗಿ ಕೇವಲ ಒಂದು ವರ್ಷ ಆಗಿತ್ತು ಎಂದು ಹೇಳಲಾಗಿದೆ. ಸದ್ಯ ಪತ್ನಿ, ಕುಟುಂಬಸ್ಥರನ್ನು ಅಗಲಿದ್ದಾರೆ.

ನಟ ನೆಲಮಂಗಲದಲ್ಲಿನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸದ್ಯ ಎನ್ ಆರ್ ಪುರಕ್ಕೆ ಮೃತದೇಹ ರವಾನೆಯಾಗಲಿದೆ ಎಂದು ತಿಳಿದುಬಂದಿದೆ. ಅವಕಾಶಗಳು ಸಿಗದ ಕಾರಣ ಜಯರಾಂ ದುಡುಕಿದರಾ ಅಥವಾ ಸಾವಿಗೆ ಬೇರೇನೋ ಕಾರಣ ಇದೆಯಾ ಎಂದು ತನಿಖೆಯಿಂದ ತಿಳಿದು ಬರಬೇಕಿದೆ.

ಇದನ್ನೂ ಓದಿ: ನಟಿ ಐಶ್ವರ್ಯಾ’ಗೆ ರಾತ್ರಿ ಮೆಸೇಜ್ ಮಾಡಿ, ‘ ಮನೆಗೆ ಬಾ, ರಾತ್ರಿ ಸಿಗ್ತೀಯಾ ? ಸೋಪು ಮಾಡೋಣ

You may also like

Leave a Comment