Home » Mangalore: ಬಾಲಕನ ತಲೆಯ ಮೇಲೆ ಕಾರು ಹರಿದು ಸಾವು, ರಂಜಾನ್ ಹಬ್ಬದ ಸಂದರ್ಭ ನಡೆದ ಭೀಕರ ಅಪಘಾತ

Mangalore: ಬಾಲಕನ ತಲೆಯ ಮೇಲೆ ಕಾರು ಹರಿದು ಸಾವು, ರಂಜಾನ್ ಹಬ್ಬದ ಸಂದರ್ಭ ನಡೆದ ಭೀಕರ ಅಪಘಾತ

0 comments

Mangalore Accident: ಭೀಕರ ರಸ್ತೆ ಅಪಘಾತಕ್ಕೆ ಬಾಲಕನೋರ್ವ ದಾರುಣವಾಗಿ ಮೃತಪಟ್ಟ ಘಟನೆಯೊಂದು ಎ.22 ರಂದು ನಡೆದಿದೆ. ಈ ಘಟನೆ ಸೂರಿಂಜೆ ಎಂಬಲ್ಲಿ ಸಂಭವಿಸಿದೆ.

ಮೃತಪಟ್ಟ ಬಾಲಕನನ್ನು ಮಹಮ್ಮದ್‌ ಮುಸ್ಲಿಯಾರ್‌ ಮಗ ಎಂದು ಗುರುತಿಸಲಾಗಿದೆ. ಈ ಬಾಲಕ ವಯಸ್ಸು ಹದಿನಾರು ಎಂದು ವರದಿಯಾಗಿದೆ. ಈದುಲ್‌ ಫಿತ್ರ್‌ ಹಬ್ಬದ ಖುಷಿಯಲ್ಲಿದ ಬಾಲಕ ಸಂಜೆ ತನ್ನ ಗೆಳೆಯನ ಜೊತೆ ದ್ವಿಚಕ್ತ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ.

ಸ್ಕೂಟರ್‌ ಸ್ಕಿಡ್‌ ಆಗಿದ್ದರಿಂದ ಬಾಲಕ ರಸ್ತೆಗೆ ಎಸೆಯಲ್ಪಟ್ಟಿದ್ದಾನೆ. ಅದೇ ಸಂದರ್ಭ ಹಿಂಬದಿಯಿಂದ ಬಂದ ಕಾರೊಂದು ಬಾಲಕ ತಲೆಯ ಮೇಲೆ ಹರಿದು ಬಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಸಹಸವಾರ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.

You may also like

Leave a Comment