Home » Ramya vs R Ashok: ಬಿಜೆಪಿಗೆ ಬಂದ್ರೆ ಮಂತ್ರಿ ಮಾಡ್ತಿವಿ ಅನ್ನೋ ಆಫರ್ ಬಂದಿತ್ತು :ನಟಿ ರಮ್ಯಾ! ರಮ್ಯಾಳನ್ನು ಬಿಜೆಪಿಗೆ ಕರೆವಷ್ಟು ಪಕ್ಷ ಬರಗೆಟ್ಟಿಲ್ಲ ಎಂದ ಆರ್ ಅಶೋಕ್!

Ramya vs R Ashok: ಬಿಜೆಪಿಗೆ ಬಂದ್ರೆ ಮಂತ್ರಿ ಮಾಡ್ತಿವಿ ಅನ್ನೋ ಆಫರ್ ಬಂದಿತ್ತು :ನಟಿ ರಮ್ಯಾ! ರಮ್ಯಾಳನ್ನು ಬಿಜೆಪಿಗೆ ಕರೆವಷ್ಟು ಪಕ್ಷ ಬರಗೆಟ್ಟಿಲ್ಲ ಎಂದ ಆರ್ ಅಶೋಕ್!

by ಹೊಸಕನ್ನಡ
4 comments
Ramya vs R Ashok

Ramya vs R Ashok: ಕನ್ನಡದ ಖ್ಯಾತ ನಟಿ, ಮಾಜಿ ಸಂಸದೆ, ಮೋಹಕ ತಾರೆ ರಮ್ಯಾ ಅವರನ್ನು ಬಿಜೆಪಿಗೆ ಬನ್ನಿ, ನಿಮ್ಮನ್ನು ಮಂತ್ರಿ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಆಹ್ವಾನಿಸಿದ್ದು ಎಂಬ ಮಾಹಿತಿಯನ್ನು ರಮ್ಯಾ ಬಿಚ್ಚಿಟ್ಟಿದ್ದು ಅದು ಚರ್ಚೆಗೆ ಕಾರಣವಾಗಿತ್ತು. ಆದರೀಗ ರಮ್ಯಾ ಹೇಳಿಕೆಗೆ ಬಿಜೆಪಿ ನಾಯಕ, ಸಚಿವ ಆರ್ ಅಶೋಕ್ ( Ramya vs R Ashok) ಕೌಂಟ್ರು ಕೊಟ್ಟಿದ್ದಾರೆ.

ಹೌದು, ಬಿಜೆಪಿಯಿಂದ ನನಗೆ ಆಫರ್ ಬಂದಿತ್ತು ಎಂಬ ರಮ್ಯಾ ಹೇಳಿಕೆಗೆ ಬೆಂಗಳೂರಿನಲ್ಲಿ (Bengaluru) ಪ್ರತಿಕ್ರಿಯಿಸಿದ ಅವರು, ಚುನಾವಣೆ (Election) ವೇಳೆ ರಮ್ಯಾ ರಾಜಕೀಯ ಹೇಳಿಕೆ ಕೊಟ್ಟಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಎಲ್ಲರೂ ಹೀರೋ ಆಗಲು ಪ್ರಯತ್ನಿಸುತ್ತಾರೆ. ಸೋ ರಮ್ಯಾರನ್ನು (Ramya) ಬಿಜೆಪಿಗೆ (BJP) ಕರೆಯುವಷ್ಟು ನಮ್ಮ ಪಕ್ಷ ಬರಗೆಟ್ಟಿಲ್ಲ. ನಮ್ಮ ಪಕ್ಷದಿಂದ ರಮ್ಯಾ ಅವರಿಗೆ ಆಹ್ವಾನ ಕೊಟ್ಟಿಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ (R.Ashok) ಕೌಂಟರ್ ಕೊಟ್ಟಿದ್ದಾರೆ.

ರಮ್ಯಾ ಯಾವತ್ತಿದ್ದರೂ ಕಾಂಗ್ರೆಸ್‌ನವರು. ಇವರಿಗೆ ಯಾವುದೇ ಆಹ್ವಾನ ಕೊಟ್ಟಿಲ್ಲ. ಯಾವ ಸೀಟೂ ಕೊಡುವುದಿಲ್ಲ. ಯಾವ ಮಂತ್ರಿ ಹುದ್ದೆನೂ ಕೊಡುವುದಿಲ್ಲ. ಅವರು ಸಿನಿಮಾದಲ್ಲಿದ್ದಾರೆ. ಅಲ್ಲೇ ಇರಲಿ ಎಂದು ಟಕ್ಕರ್ ಕೊಟ್ಟಿದ್ದಾರೆ.

ಅಂದಹಾಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಮೋಹಕ ಬೆಡಗಿ, ನಟಿ ರಮ್ಯಾ ಬಿಜೆಪಿಗೆ ಬನ್ನಿ ನಾಳೆಯೇ ನಿಮ್ಮನ್ನು ಮಂತ್ರಿ ಮಾಡ್ತೀವಿ ಎಂದು ಬಿಜೆಪಿಯ ನಾಯಕರೊಬ್ಬರು ಆಫರ್ ಕೊಟ್ಟಿದ್ದರು. ಆದರೆ ನಾನು ಬರಲ್ಲ ಎಂದು ಹೇಳಿದೆ. ನನಗೆ ಬಿಜೆಪಿ ಮೇಲೆ ದ್ವೇಷ ಇಲ್ಲ. ಆದರೆ, ಅವರ ಕೆಲವೊಂದು ಸಿದ್ಧಾಂತಗಳಿಗೆ ನನ್ನ ವಿರೋಧವಿದೆ ಎಂದು ಹೇಳಿದ್ದಾರೆ.

ಅಲ್ಲದೆ ಸ್ಟಾರ್ ಪ್ರಚಾರಕರ ಕುರಿತು ಮಾತನಾಡಿದ ಅವರು “ಜನರನ್ನು ಸೇರಿಸಲು ಹಣ ನೀಡಬೇಕಾಗುತ್ತದೆ, ಅದರ ಬದಲು ಸ್ಟಾರ್ ನಟ-ನಟಿಯರನ್ನು ಕರೆತಂದರೆ ಜನರು ತಾವಾಗಿಯೇ ಬರುತ್ತಾರೆ. ನೆರೆದ ಜನರಿಗೆ ಅಭ್ಯರ್ಥಿ ಹೇಗೆ ತನ್ನ ವಿಷಯ ಮುಟ್ಟಿಸುತ್ತಾನೆ ಎಂಬುದು ಮುಖ್ಯ. ನಟ ಅಥವಾ ನಟಿಯರು ಹೇಳಿದ ಮಾತ್ರಕ್ಕೆ ಜನರು ಮತ ಹಾಕುವುದಿಲ್ಲ. ಜನ ಸೇರಿಸಲು ಮಾತ್ರ ಸಿನಿಮಾ ತಾರೆಯರು ನೆರವಾಗುತ್ತಾರೆ,” ಎಂದು ಅಭಿಪ್ರಾಯಪಟ್ಟರು.

ನಟಿ ರಮ್ಯಾನ ಮನೆ ತುಂಬಿಸ್ಕೊಳ್ಳುವಷ್ಟು ನಮ್ಮ   ಬರಗೆಟ್ಟಿಲ್ಲ, ಬಿಜೆಪಿಯಿಂದ ತನಗೆ ಮಂತ್ರಿ ಆಫರ್ ಬಂದಿತ್ತು – ರಮ್ಯಾ ಹೇಳಿಕೆ ಹಿನ್ನೆಲೆ ಗರಂ ಆದ ಆರ್. ಅಶೋಕ್

ಇದನ್ನೂ ಓದಿ: Actress Ramya: ದುಡ್ಡು ಕೊಟ್ಟು ಜನ ಸೇರಿಸೋ ಬದಲು, ನಮ್ಮನ್ನು ಸ್ಟಾರ್ ಪ್ರಚಾರಕರನ್ನಾಗಿ ಮಾಡಿ ಜನ ಸೇರಿಸುತ್ತಾರೆ ಅಷ್ಟೆ ! ವೈರಲ್ ಆಯ್ತು ನಟಿ ರಮ್ಯಾ ಹೇಳಿಕೆ!

You may also like

Leave a Comment