Home » Shivajinagar JDS candidate: ಜೆಡಿಎಸ್ ಗೆ ಆರಂಭದಲ್ಲೇ ಆಘಾತ! ಶಿವಾಜಿನಗರ ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಜಫರ್ ಅಲಿ ನಾಮಪತ್ರ ತಿರಸ್ಕೃತ!!!

Shivajinagar JDS candidate: ಜೆಡಿಎಸ್ ಗೆ ಆರಂಭದಲ್ಲೇ ಆಘಾತ! ಶಿವಾಜಿನಗರ ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಜಫರ್ ಅಲಿ ನಾಮಪತ್ರ ತಿರಸ್ಕೃತ!!!

0 comments
Shivajinagar JDS candidate

Shivajinagar JDS candidate : ಈಗಾಗಲೇ ರಾಜ್ಯದ 220 ಕ್ಷೇತ್ರಗಳ ನಾಮಪತ್ರ ಪರಿಶೀಲನೆ ಶುಕ್ರವಾರ ಪೂರ್ಣಗೊಂಡಿದೆ. ಆದರೆ ಸರಿಯಾದ ದಾಖಲೆ ಇಲ್ಲದೆ ಗೊಂದಲ ಮತ್ತು ತಕರಾರುಗಳಿದ್ದ ಕಾರಣ ಶಿವಾಜಿನಗರ, ಸವದತ್ತಿ ಹಾಗೂ ಹಾವೇರಿ ಕ್ಷೇತ್ರಗಳ ನಾಮಪತ್ರಗಳ ಪರಿಶೀಲನೆ ಬಾಕಿ ಉಳಿದಿತ್ತು. ಸದ್ಯ ತಕರಾರು ಕುರಿತು ವಿಚಾರಣೆ ನಡೆಸಿದ ಚುನಾವಣಾ ಅಧಿಕಾರಿಗಳು ಶಿವಾಜಿನಗರ ಜೆಡಿಎಸ್ ಅಭ್ಯರ್ಥಿಯ ನಾಮಪತ್ರವನ್ನು ತಿರಸ್ಕರಿಸಿದ್ದಾರೆ.

ಹೌದು, ಜೆಡಿಎಸ್ ಪಕ್ಷ ಗೆಲುವು ಕಾಣುವ ತುಸು ಹುಮ್ಮಸ್ಸಿನಲ್ಲಿ ಇರುವ ಸಂದರ್ಭದಲ್ಲೇ ಇದೀಗ ಶಿವಾಜಿ ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ (Shivajinagar JDS candidate) ‌ಅಬ್ದುಲ್ ಜಫರ್ ಅಲಿ ಅವರ ನಾಮಪತ್ರ ತಿರಸ್ಕೃತಗೊಂಡಿದ್ದು, ಜೆಡಿಎಸ್​ಗೆ ಆರಂಭದಲ್ಲೇ ಆಘಾತ ಎದುರಾಗಿದೆ.

ಶಿವಾಜಿ ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ‌ಅಬ್ದುಲ್ ಜಫರ್ ಅಲಿ ಅವರ ನಾಮಪತ್ರ ತಿರಸ್ಕೃತಗೊಳ್ಳಲು ಕಾರಣ ಏನೆಂದು ತಿಳಿದರೆ ಆಶ್ಚರ್ಯ ಪಡುವುದರಲ್ಲಿ ಎರಡು ಮಾತಿಲ್ಲ. ಯಾಕೆಂದರೆ ಹಲವು ವರ್ಷಗಳ ಕಾಲ ವಿದೇಶದಲ್ಲಿದ್ದ ಜಾಫರ್ ಅಲಿ ಹೆಸರು ಮತದಾರರ ಪಟ್ಟಿಯಲ್ಲೇ ಇಲ್ಲದಿರುವುದರಿಂದ ನಾಮಪತ್ರವನ್ನು ತಿರಸ್ಕರಿಸಲಾಗಿದೆ.

ಜೆಡಿಎಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡ ನಂತರ ಶಿವಾಜಿನಗರ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್​ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್​ನಿಂದ ಹಾಲಿ ಶಾಸಕ ರಿಜ್ವಾನ್ ಅರ್ಷದ್ ಅವರು ಸ್ಪರ್ಧಿಸಲಿದ್ದು, ಬಿಜೆಪಿಯಿಂದ ಎನ್ ಚಂದ್ರ ಅವರು ಸ್ಪರ್ಧಿಸಲಿದ್ದಾರೆ.

ಸದ್ಯ ಜೆಡಿಎಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತ ಆಗಿರುವುದನ್ನು ಶಿವಾಜಿನಗರ ಆರ್‌ಓ ಬಸವರಾಜ್ ಸೋಮಣ್ಣನವರು ದೃಢಪಡಿಸಿದ್ದಾರೆ.

ಇದನ್ನೂ ಓದಿ: Kitchen Tips: ಪಾತ್ರೆ ತೊಳೆಯೋ ಟೆನ್ಶನ್ ಇನ್ನು ಹೆಣ್ಮಕ್ಕಳಿಗೆ ಇಲ್ವೇ ಇಲ್ಲ! ಈ ಬ್ರಷ್ ಮಾಡುತ್ತೆ ಈ ಕೆಲಸ!!!

You may also like

Leave a Comment