ಶೃಂಗೇರಿ :ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ನಾನು ಅಭ್ಯರ್ಥಿಯೇ ಅಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ಹೇಳಿದ್ದಾರೆ. ಅವರು ಶ್ರೀಕ್ಷೇತ್ರ ಶೃಂಗೇರಿ ಶಾರದಾ ಪೀಠದಲ್ಲಿ ಚಂಡಿಕಾಯಾಗ ಸಂಕಲ್ಪದಲ್ಲಿ ಭಾಗಿಯಾಗುವುದಕ್ಕೆ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿದರು.
ಪ್ರತಿ ಮನೆಯಲ್ಲೂ ಡಿ.ಕೆ.ಶಿವಕುಮಾರ್ ಇದ್ದಾನೆ ಅವರುಗಳೇ ಅಭ್ಯರ್ಥಿಗಳು, ನಾನು ನಾಮಪತ್ರ ಸಲ್ಲಿಸಿದ್ದೇನೆ ಅಷ್ಟೇ. ಉಳಿದದ್ದೆಲ್ಲ ಅವರೇ ನೋಡಿಕೊಳ್ಳುತ್ತಾರೆ ಎಂದರು. ನಾನು ಕನಕಪುರದವನಾದರೂ ನನ್ನ ಚುನಾವಣಾ ಪ್ರಚಾರ ಶ್ರೀ ಕ್ಷೇತ್ರ ಶೃಂಗೇರಿಯಿಂದ ಪ್ರಾರಂಭ ಮಾಡಿದ್ದೇನೆ ಎಂದರು. ಕುಟುಂಬ ಸಮೇತ ಆಗಮಿಸಿರುವ ಡಿ.ಕೆ.ಶಿವಕುಮಾರ್ ಅವರು ಭಾನುವಾರ ಮಧ್ಯಾಹ್ನದವರೆಗೂ ಶೃಂಗೇರಿಯಲ್ಲೇ ಇದ್ದು ಯಾಗದ ಪೂರ್ಣಾಹುತಿಯಲ್ಲಿ ಭಾಗಿಯಾದರು.
ಇದನ್ನೂ ಓದಿ: Udupi: ಮರುವಾಯಿ ಹೆಕ್ಕಲು ದೋಣಿಯಲ್ಲಿ ಹೋದ 7 ಹುಡುಗರು: ಮೂವರ ಸಾವು, ಇನ್ನೊಬ್ಬ ನಾಪತ್ತೆ !
