Home » Intimidation Viral news : ಅಪ್ಪʼಎಣ್ಣೆʼ ಗೆ ಹಣ ನೀಡಿಲ್ಲವೆಂದು ಸಿಟ್ಟುಗೊಂಡ ಮಗರಾಯ! ಕೊನೆಗೆ ಹೈಟೆನ್ಶನ್‌ ವಿದ್ಯುತ್‌ ಕಂಬವೇರಿದ! ಮುಂದೆ…

Intimidation Viral news : ಅಪ್ಪʼಎಣ್ಣೆʼ ಗೆ ಹಣ ನೀಡಿಲ್ಲವೆಂದು ಸಿಟ್ಟುಗೊಂಡ ಮಗರಾಯ! ಕೊನೆಗೆ ಹೈಟೆನ್ಶನ್‌ ವಿದ್ಯುತ್‌ ಕಂಬವೇರಿದ! ಮುಂದೆ…

0 comments
Intimidation Viral news

Intimidation Viral news : ಮಗು ಏನಾದರೂ ಬೇಕೆಂದರೆ ಅತ್ತು ಅತ್ತು ಸುಸ್ತಾದ ನಂತರ ತನ್ನ ಪಾಡಿಗೆ ಆಟ ಆಡುತ್ತೆ ಅಂತಾ ಸುಮ್ಮನಾಗ್ತೀವಿ. ಆದರೆ ಹೆಗಲ ಎತ್ತರಕ್ಕೆ ಬೆಳೆದ ಮಗ ಹಠ ಮಾಡಿದರೆ ಸ್ವಲ್ಪ ಕಷ್ಟವೇ ಬಿಡಿ. ಆದರೆ ಮಗ ಮದುವೆ ಮಾಡಿಸಪ್ಪ ಅಂದರೆ ಸೈ ಅಂತಿದ್ದರೋ ಏನೋ! ಆದರೆ ಈತ ಎಣ್ಣೆ ಹಾಕಲು ದುಡ್ಡಿಗಾಗಿ ಹಠ ಹಿಡಿದ್ದಾನೆ.

ಬರೀ ಹಠ ಮಾಡಿದರೆ ಪರವಾಗಿಲ್ಲ.
ಆದರೆ ಇಲ್ಲೊಬ್ಬ ಮಗ ಅಪ್ಪ ಹಣ ನೀಡಿಲ್ಲ ಎಂದು ಸಿಟ್ಟಿನಲ್ಲಿ ಹೈಟೆನ್ನನ್ ವೈಯರ್ ವುಳ್ಳ ವಿದ್ಯುತ್ ಕಂಬಕ್ಕೇರಿದ ಸುದ್ದಿ ಎಲ್ಲೆಡೆ ವೈರಲ್ (Intimidation Viral news) ಆಗಿದೆ. ಆಮೇಲೆ ಏನಾಯ್ತು!

ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಕತಿ ಖೇಡಾ ಗ್ರಾಮದಲ್ಲಿ ಮಗನೊಬ್ಬ ತನಗೆ ಮದ್ಯ ಕುಡಿಯಲು ಹಣಬೇಕೆಂದು ತನ್ನ ತಂದೆಯ ಬಳಿ 1500 ರೂ ಕೇಳಿದ್ದಾನೆ.

ಆದರೆ ಮಗ ಹೇಳಿದ ಕಾರಣದಿಂದ ತಂದೆ ಯಾವುದೇ ಕಾರಣಕ್ಕೂ ಹಣ ನೀಡಲ್ಲ ಎಂದಿದ್ದಾರೆ. ಇದೇ ಮಾತಿನಿಂದ ಸಿಟ್ಟಾದ ಮಗ ಮನೆಯ ಪಕ್ಕದಲ್ಲಿರುವ ಹೈಟೆನ್ನನ್ ವಿದ್ಯುತ್ ಕಂಬಕ್ಕೇರಿ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆಯನ್ನು ಹಾಕಿದ್ದಾನೆ.

ಅಷ್ಟರಲ್ಲಿ ಈತನ ಈ ವರ್ತನೆ ಕಂಡು ಗ್ರಾಮಸ್ಥರೆಲ್ಲ ಸೇರಿದ್ದು, ನಂತರ ಹೆಚ್ಚಿನ ಅಪಾಯ ಸಂಭವಿಸದಿರಲು ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿತ್ತು.

ನಂತರ ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿ ಯುವಕನ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಬಳಿಕ ಆತನನ್ನು ಬಂಧಿಸಿದ್ದಾರೆ.

 

ಇದನ್ನು ಓದಿ: Akanda Shrinivasa murthy: ಕೊನೆಗೂ ಆ ಪಕ್ಷದಿಂದ ಅಕಾಡಕ್ಕಿಳಿದ ಅಖಂಡ ಶ್ರೀನಿವಾಸ ಮೂರ್ತಿ! ಪುಲಿಕೇಶಿ ನಗರದ ಜನತೆಗೆ ಶಾಕ್!

You may also like

Leave a Comment