Home » Vizal Stuck in Child Throat : ಅಪ್ಪ ತಂದ ವಿಜಿಲ್ ನುಂಗಿದ 4 ವರ್ಷದ ಬಾಲಕ! ಈ ಮಗು ಬದುಕಿದ್ದೇ ಬಹಳ ರೋಚಕ!

Vizal Stuck in Child Throat : ಅಪ್ಪ ತಂದ ವಿಜಿಲ್ ನುಂಗಿದ 4 ವರ್ಷದ ಬಾಲಕ! ಈ ಮಗು ಬದುಕಿದ್ದೇ ಬಹಳ ರೋಚಕ!

1 comment
Vizal stuck in child throat

Vizal Stuck in Child Throat : ಮಕ್ಕಳನ್ನು ನೋಡಿಕೊಳ್ಳುವಲ್ಲಿ ಯಾರೇ ಆಗಲಿ ಸ್ವಲ್ಪ ಎಚ್ಚರ ತಪ್ಪಿದರು ಏನಾದರೂ ಎಡವಟ್ಟು ಮಾಡಿಕೊಳ್ಳುತ್ತಾರೆ. ಮಕ್ಕಳು ಏನೇ ಎಡವಟ್ಟು ಮಾಡಿದರೂ ಅದಕ್ಕೆ ಪೋಷಕರು ಕಾರಣ. ಹೌದು ಏಕೆಂದರೆ ತಿಳುವಳಿಕೆ ಇಲ್ಲದ ಮಕ್ಕಳು ತಮಗೆ ಗೊತ್ತಿಲ್ಲದೆ ಅನಾಹುತ ಮಾಡಿಕೊಳ್ಳೋದೆ ಹೆಚ್ಚು. ಹಾಗೆಯೇ ಇಲ್ಲೊಂದು ಮಗು ವಿಜಲ್ ನುಂಗಿದ (vizal Stuck in Child Throat) ಘಟನೆ ನಡೆದಿದೆ.

ಹರಿಯಾಣ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ತನ್ನ ತಂದೆ ತಂದಿದ್ದ ಚಪ್ಪಲಿಯಲ್ಲಿ ಆಟವಾಡುತ್ತಾ ಇರೋವಾಗ ಅದರಲ್ಲಿ ಇದ್ದ ವಿಜಲ್ ಅನ್ನು ಮಗು ನುಂಗಿ ಬಿಟ್ಟಿದೆ. ಬಳಿಕ ತಕ್ಷಣವೇ ಮಗುವನ್ನ ಆಸ್ಪತ್ರೆಗೆ ಸೇರಿಸಿದ್ದಾರೆ.

ಏಮ್ಸ್ ಆಸ್ಪತ್ರೆಯ ವೈದ್ಯರು ಹರಸಾಹಸ ಪಟ್ಟು 4 ವರ್ಷದ ಮಗುವಿನ ಗಂಟಲಲ್ಲಿ ಸಿಲುಕಿದ್ದ ವಿಜಲ್ ಅನ್ನು ಎಂಡೋಸ್ಕೋಪಿ ಮೂಲಕ ಯಶಸ್ವಿಯಾಗಿ ಹೊರತೆಗೆದಿದ್ದು, ಮಗುವಿನ ಜೀವ ಉಳಿಸಿದ್ದಾರೆ.

ಈ ಘಟನೆ ಕುರಿತಂತೆ ಏಮ್ಸ್ ನಿರ್ದೇಶಕ ಡಾ.ಎಂ ಶ್ರೀನಿವಾಸ್ ಅವರು, ಸಣ್ಣ ಮಕ್ಕಳಲ್ಲಿ ಮೀನು, ಕಡಲೆಕಾಯಿ, ಬಾದಾಮಿ, ಮಣಿಗಳು, ಸೇಫ್ಟಿ ಪಿನ್, ಅಂಗಿ ಗುಂಡಿ, ಬ್ಯಾಟರಿ, ಇನ್ನಿತರ ಸಣ್ಣ ಸಣ್ಣ ಅಪಾಯಕಾರಿ ವಸ್ತು ನುಂಗಿದ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ.

ಒಂದು ವರ್ಷದಲ್ಲಿ ಇಂತಹ 100 ಪ್ರಕರಣಗಳು ಬೆಳಕಿಗಳು ಬರುತ್ತಿದ್ದು, ಇಂತಹ ಪ್ರಕರಣಕ್ಕೆ ಒಳಗಾದ 5-7 ವರ್ಷದ ಮಕ್ಕಳ ಆಸ್ಪತ್ರೆಗೆ ದಾಖಲಾಗುತ್ತಾರೆ. ದಯವಿಟ್ಟು ಮಕ್ಕಳನ್ನು ನೋಡಿಕೊಳ್ಳುವವರು ಅಥವಾ ಪೋಷಕರು ಪ್ರತೀ ಕ್ಷಣ ಜಾಗೃತ ವಾಗಿರಲು ಸೂಚಿಸಿದ್ದಾರೆ.

ಒಟ್ಟಿನಲ್ಲಿ ಅದೃಷ್ಟವಶಾತ್ ದೇವರಂತೆ ಕಂಡ ವೈದ್ಯರೇ ಈ ಮಗುವಿನ ಜೀವ ಉಳಿಸಿದ್ದು, ಪೋಷಕರು ನಿಟ್ಟುಸಿರು ಬಿಡುವಂತಾಗಿದೆ.

 

ಇದನ್ನು ಓದಿ: Indian Navy jobs: ಭಾರತೀಯ ನೌಕಾಪಡೆಯಲ್ಲಿ ಉದ್ಯೋಗ : ಒಟ್ಟು ಹುದ್ದೆ-242, ಅರ್ಜಿ ಸಲ್ಲಿಸಲು ಕೊನೆ ದಿನ-ಮೇ.14!! 

You may also like

Leave a Comment