Home » Samantha English: ಇಂಗ್ಲೆಂಡ್​ ಜನರ ಥರ ಇಂಗ್ಲಿಷ್​ ಉದುರಿಸಲು ಹೋಗಿ ಟ್ರೋಲ್​ ಆದ ಸಮಂತಾ: Viral Video!!

Samantha English: ಇಂಗ್ಲೆಂಡ್​ ಜನರ ಥರ ಇಂಗ್ಲಿಷ್​ ಉದುರಿಸಲು ಹೋಗಿ ಟ್ರೋಲ್​ ಆದ ಸಮಂತಾ: Viral Video!!

2 comments
Samantha English

Samantha English: ಲಂಡನ್​ಗೆ ತೆರಳಿದ ಸಮಂತಾ ಅವರು ಅಲ್ಲಿನ ಮಾಧ್ಯಮಗಳ ಜೊತೆ ಮಾತಾಡಿದ್ದಾರೆ. ಉಚ್ಚಾರಣೆಯಲ್ಲಿ ಇಂಗ್ಲಿಷ್​ ಮಂದಿಯನ್ನು(Samantha English) ಅವರು ಅನುಕರಣೆ ಮಾಡಿದ್ದಕ್ಕೆ ಟೀಕೆಗೆ ಒಳಗಾಗಿದ್ದಾರೆ.

ಜನರು ಸೆಲೆಬ್ರಿಟಿಗಳನ್ನು ತುಂಬಾ ಸೂಕ್ಷ್ಮವಾಗಿ ತಮ್ಮ ಹದ್ದಿನ ಕಣ್ಣುಗಳಿಂದ ಗಮನಿಸುತ್ತಿರುತ್ತಾರೆ. ಅಲ್ಲಿ ಏನಾದ್ರೂ ಸಣ್ಣ ಪುಟ್ಟ ವ್ಯತ್ಯಾಸವಾದರೂ ಅದನ್ನು ದೊಡ್ಡ ಮಾಗ್ನಿಫೈಯಿಂಗ್ ಭೂತ ಗ್ಲಾಸಿನಲ್ಲಿ ನೋಡಿ ಜನರು ಕಮೆಂಟ್ ಮಾಡುತ್ತಾರೆ. ತಾವೇಷ್ಟು ತಮ್ಮ ಅಭಿಮಾನಿಗಳನ್ನು ಪ್ರೀತಿಸುತ್ತಾರೋ ಅಷ್ಟೇ ಟೀಕೆಯನ್ನು ಕೆಲವೊಂದು ಸಾರಿ ಮಾಡಿಬಿಡುತ್ತಾರೆ. ಈಗ ಇಂತಹದೇ ಒಂದು ಕಾರಣಕ್ಕಾಗಿ ನಟಿ ಸಮಂತಾ ರುತ್​ ಪ್ರಭು (Samantha Ruth Prabhu) ಅವರು ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​ ಆಗುತ್ತಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಅವರು ಉದುರಿಸಿದ ಇಂಗ್ಲಿಷ್​ !! ಉಚ್ಛಾರ (Accent).

ಸಮಂತಾ ರುತ್ ಪ್ರಭು ಇತ್ತೀಚೆಗೆ ‘ಸಿಟಾಡೆಲ್​’ (Citadel) ವೆಬ್​ ಸರಣಿಯ ಪ್ರೀಮಿಯರ್​ ಶೋ ಸಲುವಾಗಿ ಲಂಡನ್​ಗೆ ತೆರಳಿದ್ದರು. ಅಲ್ಲಿ ವರುಣ್​ ಧವನ್​ ಮತ್ತು ಸಮಂತಾ ಅವರು ವಿದೇಶಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಈ ವೇಳೆ ಅವರು ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ ಉಚ್ಚಾರಣೆಯಲ್ಲಿ ಇಂಗ್ಲಿಷ್​ ಮಂದಿಯನ್ನು ಅವರು ಅನುಕರಣೆ ಮಾಡಿರುವುದು ಅಭಿಮಾನಿಗಳಿಗೆ ಯಾಕೋ ಸರಿ ಕಂಡಿಲ್ಲ. ಅವರದನ್ನು ಹಾಸ್ಯಾಸ್ಪದ ಎಂದು ಟ್ರೋಲ್​ ಮಾಡುತ್ತಿದ್ದಾರೆ.

ಅಲ್ಲಿ, ಅಲ್ಲಿನ ಜನರ ರೀತಿಯಲ್ಲಿ ಮಾತನಾಡಲು ಯಾಕೆ ಸಾಕಷ್ಟು ಪ್ರಯತ್ನಿಸಿದ್ದಾಳೆ. ಆದರೆ ಆಕೆಯ ಈ ಪ್ರಯತ್ನ ಯಾಕೋ ನೋಡುವವರಿಗೆ ಸರಿ ಅನಿಸಿಲ್ಲ. ಹಾಗಾಗಿ ಸಮಂತಾರನ್ನು ನಮ್ಮದಲ್ಲದ ಇಂಗ್ಲೀಷನ್ನು ನಮ್ಮದಲ್ಲದ ಶೈಲಿಯಲ್ಲಿ ಮಾತಾಡಲು ಹೋದ ಕಾರಣಕ್ಕಾಗಿ ಟೀಕೆ ಮಾಡಲಾಗುತ್ತಿದೆ. ಇಂಗ್ಲೆಂಡ್ ಮಂದಿಯ ರೀತಿ ಸಮಂತಾ ಇಂಗ್ಲಿಷ್​ ಮಾತನಾಡಿರುವ ವಿಡಿಯೋ ಈಗ ವೈರಲ್​ ಆಗಿದೆ. ಓದುಗರ ಟ್ರೋಲ್ ಗೆ ಸಮಂತಾ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಈ ಹಿಂದೆ ನಟ ತೆಲುಗಿನ ಜೂನಿಯರ್​ ಎನ್​ಟಿಆರ್​ ಕೂಡ ಲಾಸ್​ ಏಂಜಲಿಸ್​ನಲ್ಲಿ ಇಂಗ್ಲಿಷ್ ಮಾತನಾಡಲು ಹೋಗಿ ಟ್ರೋಲ್​ ಆಗಿದ್ದರು.

‘ಸಿಟಾಡೆಲ್​’ ವೆಬ್​ ಸರಣಿ ಶೀಘ್ರ ಬಿಡುಗಡೆ ಆಗಲಿದೆ. ಇದರಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್​ ಮ್ಯಾಡನ್​ ಅವರು ಜೋಡಿಯಾಗಿ ನಟಿಸಿದ್ದಾರೆ. ಇದರ ಇಂಡಿಯನ್​ ವರ್ಷನ್​ನಲ್ಲಿ ಸಮಂತಾ ರುತ್​ ಪ್ರಭು ಮತ್ತು ವರುಣ್​ ಧವನ್​ ನಟಿಸಿದ್ದಾರೆ. ಹಾಗಾಗಿ ಅವರು ಕೂಡ ಪ್ರೀಮಿಯರ್​ ಶೋ ಸಲುವಾಗಿ ಇಂಗ್ಲೆಂಡ್​ಗೆ ತೆರಳಿದ್ದರು. ಏಪ್ರಿಲ್​ 28 ರಂದು ಈ ವೆಬ್​ ಸರಣಿಯ ಇಂಗ್ಲಿಷ್ ವರ್ಷನ್ ಬಿತ್ತರವಾಗಲಿದೆ.

 

 

https://t.co/WGJmElk2WC

 

 

 

ಇದನ್ನು ಓದಿ: Palm fruit: ಬೇಸಿಗೆಯಲ್ಲಿ ಉಂಟಾಗುವ ಯಾವುದೇ ಆರೋಗ್ಯ ಸಮಸ್ಯೆಗೆ ತಾಳೆಹಣ್ಣು ರಾಮಬಾಣ..! ಇಲ್ಲಿದೆ ಅದ್ಬುತ ಮಾಹಿತಿ 

You may also like

Leave a Comment