Home » K S Eshwarappa: ಕರ್ನಾಟಕದ ಮುಂದಿನ ಸಿಎಂ ಸಿ.ಟಿ ರವಿ ! ತೀವ್ರ ಕುತೂಹಲ ಕೆರಳಿಸಿದ ಈಶ್ವರಪ್ಪ ಹೇಳಿಕೆ

K S Eshwarappa: ಕರ್ನಾಟಕದ ಮುಂದಿನ ಸಿಎಂ ಸಿ.ಟಿ ರವಿ ! ತೀವ್ರ ಕುತೂಹಲ ಕೆರಳಿಸಿದ ಈಶ್ವರಪ್ಪ ಹೇಳಿಕೆ

by ಹೊಸಕನ್ನಡ
2 comments
K S Eshwarappa

Next CM :ಕರ್ನಾಟಕ ವಿಧಾನಸಭಾ ಚುನಾವಣೆಗೆ(Karnataka Assembly Election) ದಿನಗಣನೆ ಶುರುವಾಗಿದ್ದು, ಎಲ್ಲಾ ಪಕ್ಷಗಳು ಅಬ್ಬರದ ತಯಾರಿ ನಡೆಸುತ್ತಿವೆ. ಈ ನಡುವೆ ಮುಂದಿನ ಸಿಎಂ ವಿಚಾರ ಕೂಡ ಆಗಾಗ ತೊಡಕು ಹಾಕುತ್ತಿರುತ್ತದೆ. ಅಂತೆಯೇ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ(CT Ravi) ಸೋಮವಾರವಷ್ಟೇ ನಾನು ಕೂಡ ಸಿಎಂ(CM) ಸ್ಥಾನದ ಆಕಾಂಕ್ಷಿ ಎಂದಿದ್ದರು. ಇದರ ಬೆನ್ನಲ್ಲೇ ಸಿಟಿ ರವಿ ಅವರು ಕರ್ನಾಟಕದ ಮುಂದಿನ ಸಿಎಂ (Next CM) ಆಗಲಿ ಎಂದು ಕೆಎಸ್‌ ಈಶ್ವರಪ್ಪ(KS Eshwarappa) ಹೇಳಿದ್ದು, ಬಿಜೆಪಿಯಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿದೆ.

ಹೌದು, ಚಿಕ್ಕಮಗಳೂರಿನ(Chikkamagalure) ನಿಡಘಟ್ಟದಲ್ಲಿ(Nidaghatta) ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕೆಎಸ್‌ ಈಶ್ವರಪ್ಪ, ಸಿಟಿ ರವಿ ಅವರನ್ನು ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಿ. ಸಿಟಿ ರವಿ ಕರ್ನಾಟಕದ ಮುಂದಿನ ಸಿಎಂ ಆಗಲಿ ಎಂದು ಆಶಿಸುವೆ ಎಂದು ಹೇಳಿದ್ದಾರೆ. ಈಶ್ವರಪ್ಪ ಅವರ ಈ ಹೇಳಿಕೆ ಬಿಜೆಪಿಯಲ್ಲಿಯೂ ಸಿಎಂ ಸ್ಥಾನದ ಚರ್ಚೆಯನ್ನು ಹುಟ್ಟುಹಾಕಿದೆ.

ಕಡೂರು ತಾಲೂಕಿನ ನಿಡಘಟ್ಟದಲ್ಲಿ ನಡೆಯುತ್ತಿದ್ದ ಬಿಜೆಪಿ (BJP) ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಸಿ.ಟಿ.ರವಿ ಪಡೆದಿರುವುದು ನಮ್ಮ ಪುಣ್ಯ. ತನ್ನ ಕ್ಷೇತ್ರ ಬಿಟ್ಟು ಪೂರ್ಣ ಬಹುಮತದ ಸರ್ಕಾರಕ್ಕೆ ಓಡಾಡುತ್ತಿದ್ದಾರೆ. ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರೋದು ನಮ್ಮ ಹೆಮ್ಮೆ. ಸಿ.ಟಿ.ರವಿ, ಹಿಂದೂ ಹುಲಿ ಎಂದೇ ಖ್ಯಾತಿಯಾಗಿದ್ದಾರೆ. ಚಿಕ್ಕಮಗಳೂರಿನಿಂದ (Chikkamagaluru) ಸಿ.ಟಿ ರವಿ ಅವರನ್ನು ಗೆಲ್ಲಿಸಿ, ಅವರು ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಇಂಗಿತ ವ್ಯಕ್ತಪಡಿಸಿದರು.

ಅಂದಹಾಗೆ ಮೈಸೂರಿನಲ್ಲಿ ಸೋಮವಾರ ಮಾತನಾಡಿದ್ದ ಅವರು, ನನಗೂ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದೆ, ಮುಖ್ಯಮಂತ್ರಿ ರೇಸ್‌ನಲ್ಲಿ ನಾನೂ ಇದ್ದೀನಿ. ಅದಲ್ಲದೇ ನಾನು ಸಿಎಂ ಆಗಬೇಕೆಂಬ ಕೂಗು ನನ್ನ ಚಿಕ್ಕಮಗಳೂರು ಕ್ಷೇತ್ರದಲ್ಲಿ ಮಾತ್ರ ಕೇಳಿಬರುತ್ತಿದೆ. ರಾಜ್ಯದೆಲ್ಲೆಡೆ ಈ ಕೂಗು ಕೇಳಿಬಂದಾಗ ನನ್ನನ್ನು ಸಿಎಂ ಮಾಡುವಂತೆ ಹೈಕಮಾಂಡ್‌ಗೆ ಕೇಳುತ್ತೇನೆ ಎಂದು ಹೇಳಿದ್ದರು. ಸಿಟಿ ರವಿ ನಾನೂ ಕೂಡ ಸಿಎಂ ಆಕಾಂಕ್ಷಿ ಎಂದು ಹೇಳಿದ ಮರುದಿನವೇ ಕೆಎಸ್‌ ಈಶ್ವರಪ್ಪ ಅವರು ಈ ಹೇಳಿಕೆ ನೀಡಿರುವುದು ಕುತೂಹಲ ಕೆರಳಿಸಿದೆ.

ಇನ್ನು ಸಮಾವೇಶದಲ್ಲಿ ಬಳಿಕ ಮಾತನಾಡಿದ ಈಶ್ವರ ಅವರು ರಾಷ್ಟ್ರದ್ರೋಹಿ ಮುಸ್ಲಿಮರು ಮತ ಬೇಡ ಎಂದು ನಿನ್ನೆ, ಇಂದು, ನಾಳೆಯೂ ಹೇಳುತ್ತೇನೆ. ರಾಷ್ಟ್ರಭಕ್ತ ಮುಸ್ಲಿಮರು ಬಿಜೆಪಿ ಜೊತೆಯೇ ಇದ್ದಾರೆ. ಸಿದ್ದು-ಡಿಕೆಶಿ ಬಿಜೆಪಿಯನ್ನ ಜಾತಿವಾದಿ ಅಂತಾರೆ. ಒಕ್ಕಲಿಗರು ನನ್ನ ಹಿಂದೆ ಬನ್ನಿ ನಾನು ಸಿಎಂ ಆಗುತ್ತೇನೆ ಅಂತಾರೆ ಡಿಕೆಶಿ, ಸಿದ್ದರಾಮಯ್ಯನವರೂ ಅದೇ ರೀತಿ ಮಾತನಾಡುತ್ತಾರೆ. ಸಿದ್ದು-ಡಿಕೆಶಿ ನೇರವಾಗಿ ಜಾತಿ ರಾಜಕಾರಣ ಮಾಡ್ತಿದ್ದಾರೆ. ಬಿಜೆಪಿಗೆ ಕೋಮುವಾದಿ ರಾಜಕಾರಣ ಅಂತಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ: Anita Kumaraswamy : ಈ ನನ್ನ ಗಂಡ ಮಕ್ಕಳಂತೆ ಹಠ ಮಾಡ್ತಾರೆ, ಹೇಳಿದ್ದೇನು ಕೇಳಲ್ಲ! ಆಸ್ಪತ್ರೆ ಸೇರಿದ ಬೆನ್ನಲ್ಲೇ ಎಚ್ಡಿಕೆ ಮೇಲೆ ಅನಿತಾ ಕುಮಾರಸ್ವಾಮಿ ಆರೋಪ!

You may also like

Leave a Comment