Home » Difference of Restroom, Bathroom and Washroom: ಬಾತ್ ರೂಮ್, ರೆಸ್ಟ್ ರೂಮ್ ಮತ್ತು ವಾಶ್ ರೂಮ್ ಇವುಗಳ ವ್ಯತ್ಯಾಸ ಗೊತ್ತಾ?

Difference of Restroom, Bathroom and Washroom: ಬಾತ್ ರೂಮ್, ರೆಸ್ಟ್ ರೂಮ್ ಮತ್ತು ವಾಶ್ ರೂಮ್ ಇವುಗಳ ವ್ಯತ್ಯಾಸ ಗೊತ್ತಾ?

1 comment
Bathroom and Washroom

Bathroom and Washroom: ಕೆಲವರಿಗೆ ರೆಸ್ಟ್ ರೂಮ್ (Rest room), ಬಾತ್ ರೂಮ್ (bathroom) ಮತ್ತು ವಾಶ್ ರೂಮ್ ಗಳು (wash room) ಅಂದ್ರೆ ಏನು ಅಂತ‌ ಗೊತ್ತಿರಲ್ಲ. ಗೊತ್ತಿರಲ್ಲ ಅನ್ನೋದಕ್ಕಿಂತ ಅವುಗಳ ಬಗ್ಗೆ ಕನ್ಫ್ಯೂ ಷನ್ ಹೆಚ್ಚಿರುತ್ತದೆ. ಹಾಗಿದ್ದರೆ, ರೆಸ್ಟ್ ರೂಮ್, ಬಾತ್ ರೂಮ್ ಮತ್ತು ವಾಶ್ ರೂಮ್ ನಡುವಿನ ವ್ಯತ್ಯಾಸವೇನು? ( Bathroom and Washroom) ಎಂದು ತಿಳಿಯೋಣ.

ರೆಸ್ಟ್‌ರೂಮ್‌ ಅಂದ್ರೆ, ಹೆಸರಲ್ಲೇ ಇದೆ, ವಿಶ್ರಾಂತಿ ಪಡೆಯಲು ಇರುವ ಸ್ಥಳವೆಂದು. ಆದರೆ ಹೆಸರಲ್ಲಿರುವಂತೆ ಇದು ರೆಸ್ಟ್ ಮಾಡಲು ಇರುವ ಸ್ಥಳವಲ್ಲ. ಅಮೇರಿಕನ್ ಇಂಗ್ಲಿಷ್‌ನಲ್ಲಿ ವಾಶ್‌ರೂಮ್ ಅನ್ನು ರೆಸ್ಟ್ ರೂಂ ಎಂದೂ ಕರೆಯಲಾಗುತ್ತದೆ. ಇದು ನಿಮಗೆ ತಿಳಿದಿರಲಿ. ರೆಸ್ಟ್ ರೂಮ್ ಎಂದರೆ ವಾಶ್‌ರೂಮ್ ಎಂದೇ ಅರ್ಥ. ರೆಸ್ಟ್‌ರೂಮ್‌ ನಲ್ಲಿ
ಟಾಯ್ಲೆಟ್ ಸೀಟ್ ಹಾಗೂ ಸಿಂಕ್ ಇರುತ್ತದೆ.

ಬಾತ್ ರೂಮ್ ಎಂದರೆ ಹೆಸರಲ್ಲೇ ಇದೆ. ಸ್ನಾನಗೃಹ. ಸ್ನಾನ ಮಾಡುವ ಸ್ಥಳ. ಶವರ್ (shower), ಬಕೆಟ್ (bucket) , ಟಾಪ್ ಇತ್ಯಾದಿ ಸ್ನಾನಕ್ಕೆ ಬೇಕಾಗುವ ವ್ಯವಸ್ಥೆ ಇರುವ ಸ್ಥಳವೇ ಬಾತ್ ರೂಮ್ . ಇದು ಹೆಚ್ಚಾಗಿ ಎಲ್ಲರಿಗೂ ತಿಳಿದಿರುವಂತದ್ದೇ. ಕೆಲವೊಂದು ಕಡೆಗಳಲ್ಲಿ ಬಾತ್ ರೂಮ್ ನಲ್ಲೇ ಶೌಚಾಲಯವನ್ನೂ ನಿರ್ಮಿಸುತ್ತಾರೆ.

ವಾಶ್‌ರೂಮ್ ಎಂದರೆ ಸಿಂಕ್ (sink) ಮತ್ತು ಟಾಯ್ಲೆಟ್ (toilet) ಸೀಟ್ ಎರಡೂ ಇರುವ ಸ್ಥಳ. ವಾಶ್ ರೂಮ್ ಗೆ ಹೋದವರು ಹೊರಗಡೆ ಬಂದು ಕೈ‌ ತೊಳೆದು ಮುಖ ನೋಡಿಕೊಳ್ಳಲು, ಫೇಸ್ ವಾಶ್ ಮಾಡಲು ಸಿಂಕ್ ಇರುತ್ತದೆ. ಮೇಕಪ್ (makeup) ಮಾಡಿಕೊಳ್ಳಲು ಕನ್ನಡಿ ಇರುತ್ತದೆ. ಇದುವೇ ವಾಶ್ ರೂಮ್ . ಇಲ್ಲಿ ಸ್ನಾನ ಮಾಡಲು ಮತ್ತು ಬಟ್ಟೆ ಬದಲಾಯಿಸಲು ಜಾಗವಿರಲ್ಲ. ಮೊದಲು ವಾಶ್‌ರೂಮ್‌ ಅನ್ನು ಲ್ಯಾವೆಟರಿ ಎಂದು ಕರೆಯುತ್ತಿದ್ದರು.

 

ಇದನ್ನು ಓದಿ: Canara Bank: ಪದವಿ ಪಾಸಾದವರಿಗೆ ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗ! ಈ ಕೂಡಲೇ ಅರ್ಜಿ ಸಲ್ಲಿಸಿ 

You may also like

Leave a Comment