Home » Child death: ಜೆಮ್ಸ್ ಸಿಹಿ ತಿಂಡಿಯ ಬಾಟಲಿ ಗಂಟಲಲ್ಲಿ ಸಿಲುಕಿ 3 ವರ್ಷದ ಮಗು ಮೃತ್ಯು !

Child death: ಜೆಮ್ಸ್ ಸಿಹಿ ತಿಂಡಿಯ ಬಾಟಲಿ ಗಂಟಲಲ್ಲಿ ಸಿಲುಕಿ 3 ವರ್ಷದ ಮಗು ಮೃತ್ಯು !

626 comments
Child death

Child death: ಸಿಹಿ ತಿನಿಸು ತಿನ್ನುವ ಆಸೆಗೆ ಮೂರು ವರ್ಷದ ಬಾಲಕ ಬಲಿಯಾಗಿದ್ದಾನೆ. ಹೆಬ್ಬೆರೆಳು ಗಾತ್ರದ ಜೆಮ್ಸ್ ತುಂಬಿರುವ ಗಾಜಿನ ಬಾಟಲಿ ಮಗುವಿನ ಗಂಟಲಲ್ಲಿ‌ ಸಿಲುಕಿ (Child death) ಸಾವೀಗೀಡಾದ ಹೃದಯವಿದ್ರಾವಕ ಘಟನೆ ಕುಷ್ಟಗಿ ಪಟ್ಟಣದಲ್ಲಿ ನಡೆದಿದೆ.

ಕುಷ್ಟಗಿಯ ಮದಿನಾ ಗಲ್ಲಿಯ ನಿವಾಸಿ ರಬ್ಬಾನಿ ಬಾಗೇವಾಡಿ ಎಂಬವರ ಮಗ ಮಹ್ಮದ್ ಅಹ್ಮದ್ ರಬ್ಬಾನಿ ಬಾಗೇವಾಡಿ ಎಂಬವನೆ ಈ ಮೂರು ವರ್ಷದ ನತದೃಷ್ಟ ಮಗು.

ಈ ಬಾಲಕ 1 ರೂಪಾಯಿಗೆ ಸಿಗುವ ಜೆಮ್ಸ್ ಸ್ವೀಟ್ ಬಾಟಲಿ ಖರೀದಿಸಿದ್ದು ಅದರ ಮುಚ್ಚಳ ಬಾಯಿಂದ ತೆಗೆಯಲು ಯತ್ನಿಸಿದ್ದ. ಆ ಸಂದರ್ಭ ಗಂಟಲಿನ ಒಳಗೆ ಅನ್ನನಾಳದಲ್ಲಿ ಹೆಬ್ಬೆರಳು ಗಾತ್ರದ ಬಾಟಲ್ ಅಡ್ಡಡ್ಡ ಸಿಲುಕಿ ಆತ ಉಸಿರಾಡಲು ಕಷ್ಟಪಟ್ಟಿದ್ದ. ಹೀಗೆ ಮಗು ಅಸ್ವಸ್ಥಗೊಂಡದ್ದು ಪಾಲಕರ ಗಮನಕ್ಕೆ ಬರುತ್ತಿದ್ದಂತೆ ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದ್ದಾರೆ. ಆದರೆ ಆತ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ. ಪೋಷಕರ ರೋದನ ಮುಗಿಲು ಮುಟ್ಟಿದೆ.

ಮಕ್ಕಳಿಗೆ ಹೀಗೆ ಸುರಕ್ಷತಾ ವಲ್ಲದ ಪರಿಕರಗಳಲ್ಲಿ ಸಿಹಿ ತಿನಿಸು ತುಂಬಿ ಕೊಡುತ್ತಿರುವುದು, ಘಟನೆಗೆ ಮೂಲಕ ಮೂಲ ಕಾರಣ ಎನ್ನಲಾಗಿದೆ.

 

ಇದನ್ನು ಓದಿ: Modi road show: ಬೆಂಗಳೂರಿಗೆ ಮೋದಿ ರೋಡ್‌ ಶೋ ಎಫೆಕ್ಟ್‌ : ಕಳಸ ಹಿಡಿದು ಬೈಕ್ ನಲ್ಲಿ ಕಲ್ಯಾಣ ಮಂಟಪಕ್ಕೆ ತೆರಳಿದ ವಧು 

You may also like

Leave a Comment