Home » Viral video: ಬಿಕನಿ ಹುಡುಗಿ ಬೆನ್ನಲ್ಲೇ ಸ್ಕರ್ಟ್​ ಧರಿಸಿ ದೆಹಲಿ ಮೆಟ್ರೋ ಹತ್ತಿದ ಹುಡುಗರು! ವಿಡಿಯೋ ವೈರಲ್​

Viral video: ಬಿಕನಿ ಹುಡುಗಿ ಬೆನ್ನಲ್ಲೇ ಸ್ಕರ್ಟ್​ ಧರಿಸಿ ದೆಹಲಿ ಮೆಟ್ರೋ ಹತ್ತಿದ ಹುಡುಗರು! ವಿಡಿಯೋ ವೈರಲ್​

by ಹೊಸಕನ್ನಡ
1 comment
Viral video

Viral video:ಅದೇನೋ ಗೊತ್ತಿಲ್ಲ, ಇತ್ತೀಚೆಗಂತೂ ಜನರಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಫೇಮಸ್ಸಾಗೋದು, ವೈರಲ್ ಆಗೋದು ಅಂದ್ರೇನೆ ಒಂದು ಕ್ರೇಜ್ ಆಗಿಬಿಟ್ಟಿದೆ. ಇದಕ್ಕಾಗಿ ಏನು ಬೇಕಾದ್ರೂ ಮಾಡಿಯಾರು. ಇದೀಗ ಯುವಕರಿಬ್ಬರು ದೆಹಲಿ ಮೆಟ್ರೋದಲ್ಲಿ ಯುವತಿಯರು ತೊಡುವ ʼಡೆನಿಮ್ ಸ್ಕರ್ಟ್ʼ ಧರಿಸಿ ಪ್ರಯಾಣ ಮಾಡಿರುವ ವಿಡಿಯೋ ಒಂದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್‌ ವೈರಲ್‌(viral video) ಆಗುತ್ತಿದೆ.

ಇಂದು ಉಡುಗೆಯ ವಿಚಾರವಾಗಿ ಯುವಕರಿಬ್ಬರು ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆಯೊಂದನ್ನು ಹುಟ್ಟು ಹಾಕಿದ್ದಾರೆ. ಯಾಕಂದ್ರೆ ಇವರು ಮಾಮೂಲಾಗಿ ಎಂದಿನಂತೆ ಉಡುಗೆ ತೊಟ್ಟೋ, ಪ್ಯಾಂಟ್ ಶರ್ಟ್ ಧರಿಸಿಯೋ ಬಂದಿದ್ದರೆ ಅಷ್ಟು ಸುದ್ಧಿಯಾಗ್ತಿರ್ಲಿಲ್ಲ. ಸುದ್ದಿಯಾಗಲ್ಲ. ಆದರೆ ಇವರು ತೊಟ್ಟದ್ದು ಹುಡುಗಿಯರ ಸ್ಕರ್ಟ್ ಅನ್ನು. ಹೌದು ದೆಹಲಿ ಮೆಟ್ರೋದಲ್ಲಿ ಸ್ಕರ್ಟ್ ಧರಿಸಿ ಇಬ್ಬರು ಪುರುಷರು ಪ್ರಯಾಣಿಸುತ್ತಿರುವ ವೀಡಿಯೋ ಭಾರಿ ವೈರೆಲ್ ಆಗಿದ್ದು ಇನ್ಸ್ಟಾಗ್ರಾಮ್ ಬಳಕೆದಾರರಾದ ಸಮೀರ್ ಖಾನ್ ಇದನ್ನು ಹಂಚಿಕೊಂಡಿದ್ದಾರೆ.

ದೆಹಲಿ(Dehli) ಮೂಲದ ಯುವಕರಾದ ಸಮೀರ್​ ಖಾನ್​(Sameer Khan) ಹಾಗೂ ಭವ್ಯ ಕುಮಾರ್​(Bhavya Kumar) ಎಂಬ ಇಬ್ಬರು ಯುವರಕು ಟಿ-ಶರ್ಟ್​ ಹಾಗೂ ಡೆನಿಮ್​ ಸ್ಕರ್ಟ್​ ಧರಿಸಿ ದೆಹಲಿ ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಈ ಘಟನೆಯು ಕೆಲವು ಚರ್ಚೆಗಳಿಗೆ ಕಾರಣ ಆದ್ರೆ ಇನ್ನು ಸಮಾನತೆಯ ದೃಷ್ಟಿಯಿಂದ ವ್ಯಾಪಕವಾಗಿ ಮೆಚ್ಚುಗೆ ಪಾತ್ರವಾಗಿದೆ. ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಈ ಇಬ್ಬರು ಯುವಕರು ದೆಹಲಿ ಮೆಟ್ರೋ ರೈಲಿನನ್ನು ಹತ್ತಿಕೊಳ್ಳುವುದು ಕಂಡು ಬರುತ್ತದೆ. ಇವರನ್ನು ನೋಡಿದ ಸಹ ಪ್ರಯಾಣಿಕರು ನಿಬ್ಬೆರಗಾಗಿ ನೋಡುತ್ತಿರುವುದು ಕಂಡು ಬರುತ್ತದೆ.

ಅಂದಹಾಗೆ ಉಡುಪುಗಳು ಲಿಂಗಕ್ಕೆ ಬದ್ಧವಾಗಿರಬೇಕಾಗಿಲ್ಲ ಎಂಬ ಕಲ್ಪನೆ ಇಂದಿನದಲ್ಲ. ಆದರೆ ಸಮಾಜದಲ್ಲಿ ಅವರವರಿಗೆ ಸೀಮಿತವಾದ ಉಡುಗೆಗಳಿವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಹುಡುಗಿಯರು ಹುಡುಗರ ಬಟ್ಟೆ ಹಾಕಿಕೊಳ್ಳುವುದಾದರೇ, ಹುಡುಗರು ಹುಡುಗಿಯರ ಬಟ್ಟೆ ಯಾಕೆ ತೊಟ್ಟುಕೊಳ್ಳಬಾರದು ಎಂದು ದೂರುತ್ತಿದ್ದವರಿಗೆ ಈ ಘಟನೆ ಪೂರಕ ಎಂಬಂತಿದೆ.

ಈ ವಿಡಿಯೋವನ್ನು ಪೋಸ್ಟ್ ಮಾಡಿದಾಗಿನಿಂದ, ಏಳು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದ್ದು ಈ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅಲ್ಲದೆ ಈ ವೀಡಿಯೋ 69,000 ಲೈಕ್ ಪಡೆದಿದೆ. ವೀಡಿಯೋಗೆ ಪ್ರತಿಕ್ರಿಯಿಸುವಾಗ ಜನರು ವಿವಿಧ ಕಾಮೆಂಟ್ ಗಳನ್ನು ಪೋಸ್ಟ್ ಮಾಡಿದ್ದಾರೆ. ನೆಟ್ಟಿಗರು ಸಕರಾತ್ಮಕವಾಗಿ ಪ್ರತಿಕ್ರಿಯಿಸಿದ್ದು ಅವರ ಆತ್ಮಸ್ಥೈರ್ಯ ಹಾಗೂ ಪ್ರಜ್ಞೆಯನ್ನು ಹಾಡಿ ಹೊಗಳಿದ್ದಾರೆ. ಇದು ಧರಿಸಲು ಅರಾಮಾದಾಯಕವಾಗಿದ್ದು ನೋಡಲು ಸೊಗಸಾಗಿದೆ. ಹುಡುಗರು ನಮಗೆ ಶರ್ಟ್​, ಪ್ಯಾಂಟ್​ ಬಿಟ್ಟರೆ ಬೇರೆ ಆಯ್ಕೆ ಇಲ್ಲ ಎಂದು ಹೇಳುವವರು ಇದನ್ನು ಒಮ್ಮೆ ಪ್ರಯೋಗಿಸಿ ಎಂದು ಕಮೆಂಟ್​ ಹಾಕಿದ್ದಾರೆ.

ಇದನ್ನೂ ಓದಿ: ಸ್ವಿಚ್ ಬೋರ್ಡ್​ ಕ್ಲೀನ್ ಮಾಡಲು ಪರ್ಫೆಕ್ಟ್ ಐಡಿಯಾ ಇಲ್ಲಿದೆ! ಹಾಲಿನಂತೆ ಬೆಳ್ಳಗೆ ಹೊಳೆಯುವುದರಲ್ಲಿ ಸಂಶಯವೇ ಇಲ್ಲ!

You may also like

Leave a Comment