Home » Shocking news : ಸಾಂಬಾರ್​ಗೆ​ ಉಪ್ಪು ಜಾಸ್ತಿಯಾಯ್ತೆಂದು ತನಗೆ ತಾನೇ ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಯುವಕ!

Shocking news : ಸಾಂಬಾರ್​ಗೆ​ ಉಪ್ಪು ಜಾಸ್ತಿಯಾಯ್ತೆಂದು ತನಗೆ ತಾನೇ ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಯುವಕ!

by ಹೊಸಕನ್ನಡ
1 comment
Salt

Salt :ಮನೆಯಲ್ಲಿ ಅಮ್ಮನೋ, ಅಕ್ಕ-ತಂಗಿಯೋ ಅಥವಾ ಹೆಂಡತಿಯೋ ಯಾರಾದರೂ ರುಚಿ ರುಚಿಯಾದ ಅಡುಗೆ ಮಾಡಿ ಬಡಿಸುತ್ತಿದ್ದು, ಎಂದಾದರು ಒಂದು ಅಡುಗೆಗೆ ಉಪ್ಪೋ,(Salt) ಹುಳಿಯೋ, ಖಾರವೋ ಏನಾದರು ಹೆಚ್ಚು ಕಮ್ಮಿ ಆದರೆ ಹೇಳಿ ಸರಿ ಪಡಿಸುತ್ತೇವೆ. ಆದರೆ ಇಲ್ಲೊಬ್ಬ ಯುವಕ ತನ್ನ ಮನೆಯಲ್ಲಿ ಮಾಡಿರುವ ಅಡುಗಗೆ ಉಪ್ಪಿನ ಅಂಶ ಹೆಚ್ಚಾಯಿತೆಂದು ಸಿಟ್ಟಿಗೆದ್ದು ತನ್ನನ್ನು ತಾನೇ ಶೂಟ್ ಮಾಡಿಕೊಂಡಿರೋ ವಿಚಿತ್ರ ಘಟನೆ ನಡೆದಿದೆ.

ಹೌದು, ಉತ್ತರ ಪ್ರದೇಶದ ನೀಲಮಠ ಪ್ರದೇಶದ ಪುರನ್ ಶಂಕರ್ ದುಬೆ (22) ಎಂಬಾತ ಶನಿವಾರ (ಏಪ್ರಿಲ್ 29) ರಾತ್ರಿ ಕುಟುಂಬ ಸದಸ್ಯರೊಂದಿಗೆ ಈ ರೀತಿಯ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಗುಂಡು ಹಾರಿಸಿಕೊಂಡು ತನ್ನನ್ನು ತಾನೇ ಕೊಂದುಕೊಂಡು ದುರಂತ ಅಂತ್ಯ ಕಂಡಿದ್ದಾನೆ.

ಅಂದಹಾಗೆ ಯುವಕ ಪೈಲ್ಸ್‌ನಿಂದ ಬಳಲುತ್ತಿದ್ದನು. ಹೀಗಾಗಿ ಹೆಚ್ಚು ಉಪ್ಪು ಮತ್ತು ಮಸಾಲೆಯುಕ್ತ ಆಹಾರವನ್ನು ತ್ಯಜಿಸಿದ್ದ. ಶನಿವಾರ ರಾತ್ರಿ ಪಾನಮತ್ತನಾಗಿ ಮನೆಗೆ ಬಂದಿದ್ದನು. ಈ ವೇಳೆ ಉಪ್ಪು ಹೆಚ್ಚಿದ ಸಾಂಬಾರ್​​ ರುಚಿ ನೋಡಿದ ಬಳಿಕ ಗಲಾಟೆ ಮಾಡಿದ್ದಾನೆ. ಗಲಾಟೆ ತಾರಕಕ್ಕೇರಿ ಪುರನ್ ತನ್ನ ಕೋಣೆಯೊಳಗೆ ತೆರಳಿ ತನ್ನ ಎದೆಗೆ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾನೆ. ಆದರೆ ಪುರನ್​ಗೆ ಈ ಗನ್ ಎಲ್ಲಿ ಸಿಕ್ಕಿತ್ತು ಎಂಬುದರ ಬಗ್ಗೆ ತನಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ಈ ಕುರಿತು ಮಾತನಾಡಿದ ಯುವಕನ ತಂದೆ “ಗನ್​ ಸದ್ದು ಕೇಳಿ ಕೂಡಲೇ ನಾವೆಲ್ಲ ಆತನ ರೂಮಿಗೆ ಓಡಿದೆವು. ಈ ವೇಳೆ ಆತನ ರಕ್ತದ ಮಡುವಿನಲ್ಲಿ ಬಿದ್ದಿದ್ದನು. ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ ಆತ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಎಂದು ಹೇಳಿದ್ದಾರೆ.

ಇದನ್ನೂ ಓದಿ:ಬಿಕನಿ ಹುಡುಗಿ ಬೆನ್ನಲ್ಲೇ ಸ್ಕರ್ಟ್​ ಧರಿಸಿ ದೆಹಲಿ ಮೆಟ್ರೋ ಹತ್ತಿದ ಹುಡುಗರು! ವಿಡಿಯೋ ವೈರಲ್​

You may also like

Leave a Comment