Mysore : ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ. ಹೀಗಾಗಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ ರಾಜಕೀಯ ನಾಯಕರು ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಾಯಕರು ಪಣತೊಟ್ಟಿದ್ದಾರೆ. ಹೀಗಾಗಿ ಮೈಸೂರಿಗೆ (mysore)ಪ್ರಧಾನಿ ಮೋದಿ ಆಗಮಿಸಿದ್ದು, ಚುನಾವಣೆ ಪ್ರಚಾರದ ರೋಡ್ ಶೋ ಕೈಗೊಂಡಿದಾರೆ.
ಬೆಳಗ್ಗೆಯಿಂದ ರಾಮನಗರದಿಂದ ಚನ್ನಪಟ್ಟಣದ ನಂತರ ಮೈಸೂರು ಕಡೆ ರೋಡ್ ಶೋ ನಡೆಸುತ್ತಿದ್ದಾರೆ. ಈ ವೇಳೆ ಭದ್ರತಾ ಲೋಪವಾಗಿರುವುದು ಕಂಡುಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಮೈಸೂರು ರೋಡ್ ಶೋ ವೇಳೆ ಮೊಬೈಲ್ ಎಸೆದಿರುವಂತಹ ಘಟನೆ ನಡೆದಿದೆ. ಮೈಸೂರು ಚಿಕ್ಕಗಡಿಯಾರ ಬಳಿ ನಡೆದಿದೆ. ಕಾರ್ಯಕರ್ತರು ಹೂವು ಎಸೆಯುವಾಗ ಮೊಬೈಲ್ ಸಹ ತೂರಿಬಂದಿದೆ. ರೋಡ್ ಶೋ ವಾಹನದ ಮೇಲೆ ಬಿದ್ದು ಮೊಬೈಲ್ ಬಳಿಕ ಕೆಳಗೆ ಬಿದ್ದಿದೆ. ತಮ್ಮ ಎದುರು ಮೊಬೈಲ್ ಬಂದು ಬಿದ್ದಿದ್ದನ್ನು ಮೋದಿ ಕೂಡ ಗಮನಿಸಿದ್ದಾರೆ. ಈ ಹಿನ್ನೆಲೆ ಪ್ರಧಾನಿ ಮೋದಿ ರೋಡ್ ಶೋ ವೇಳೆ ಭದ್ರತಾ ಲೋಪ ಉಂಟಾಗಿದೆ ಎಂದು ಹೇಳಲಾಗಿದೆ.
ಇತ್ತ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ವಿರುದ್ಧ ನೀಡಿದ್ದ ʻವಿಷ ಸರ್ಪʼ ಹೇಳಿಕೆಗೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ. ವಿಧಾನಸಭೆ ಚುನಾವಣೆ ಹಿನ್ನೆಲೆ ಕೋಲಾರದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಖರ್ಗೆ ಹೇಳಿಕೆಯನ್ನು ನಾನು ಸ್ವೀಕಾರ ಮಾಡ್ತೀನಿ. ಭಗವಾನ್ ಶಿವನ ಕೊರಳಿನಲ್ಲಿ ಶೋಭಾಯಮಾನವಾಗಿ ಸುತ್ತಿಕೊಂಡಿರುವುದು ಅದೇ ಸರ್ಪ. ಈ ದೇಶದ ಜನತೆಯೇ ನನಗೆ ಈಶ್ವರ ಸ್ವರೂಪಿ, ನಾನು ಹಾವಾಗಿ ಅವರ ಕೊರಳಲ್ಲಿರಲು ನನಗೇನು ನೋವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: J.P.Nadda: ದಿ.ಪ್ರವೀಣ್ ನೆಟ್ಟಾರು ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ
