Home » Actor Darshan: ಅಭಿಮಾನಿಗಳಿಗೆ ಡಿ ಬಾಸ್ ಮಾಡಿದ್ರ ಮೋಸ ?: ಎದೆ ಮೇಲೆ ‘ ದಿ ಸೆಲೆಬ್ರಿಟೀಸ್ ‘ ಹಚ್ಚೆ ಮಾಯ, ಹಚ್ಚೆ ಹಾಕ್ಕೊಂಡದ್ದೆ ಸುಳ್ಳಾ ?!

Actor Darshan: ಅಭಿಮಾನಿಗಳಿಗೆ ಡಿ ಬಾಸ್ ಮಾಡಿದ್ರ ಮೋಸ ?: ಎದೆ ಮೇಲೆ ‘ ದಿ ಸೆಲೆಬ್ರಿಟೀಸ್ ‘ ಹಚ್ಚೆ ಮಾಯ, ಹಚ್ಚೆ ಹಾಕ್ಕೊಂಡದ್ದೆ ಸುಳ್ಳಾ ?!

1 comment
Actor Darshan

Actor Darshan: ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Actor Darshan) ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಸಿನಿಮಾ ಮೂಲಕ ಮಾತ್ರವಲ್ಲದೆ ಇತರೆ ಉತ್ತಮ ಕಾರ್ಯಗಳಿಂದಲೂ ಜನಮನ ಗೆದ್ದಿರುವ ನಟ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅಭಿಮಾನಿಗಳು ತಮ್ಮ ಮೇಲೆ ಇಟ್ಟಿರುವ ಪ್ರೀತಿಗೆ ಪ್ರತೀಕವಾಗಿ ನಟಿ ಈ ಹಿಂದೆ ತಮ್ಮ ಎದೆಯ ಮೇಲೆ ‘ನನ್ನ ಸೆಲೆಬ್ರಿಟೀಸ್‌’ (nanna celebrities) ಎಂದು ಹಚ್ಚೆ ಹಾಕಿಸಿಕೊಂಡಿದ್ದರು. ಇದಕ್ಕೆ ದರ್ಶನ್ ಅಭಿಮಾನಿಗಳು ಭಾರೀ ಖುಷಿಪಟ್ಟು ತಾವೂ ತಮ್ಮ ನೆಚ್ಚಿನ ನಟ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದರು.

ಈ ಹಚ್ಚೆ ವಿಚಾರ ಸಖತ್ ವೈರಲ್ ಆಗಿತ್ತು. ಇದೀಗ ಮತ್ತೆ ದರ್ಶನ್ (Darshan Thoogudeepa) ಹಚ್ಚೆ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಯಾಕಪ್ಪಾ ಚರ್ಚೆ? ಎಂದರೆ, ದರ್ಶನ್ ಅಭಿಮಾನಿಗಳಿಗೆ ಇದು ಶಾಕಿಂಗ್ ನ್ಯೂಸ್ ಆಗಿದೆ. ಹೌದು, ದರ್ಶನ್ ಎದೆ ಮೇಲೆ ಹಾಕಿಸಿದ್ದ ಟ್ಯಾಟೂ (Nanna Celebrities Tattoo) ಮಾಯವಾಗಿದೆ. ಹಾಗಿದ್ದರೆ, ಅಭಿಮಾನಿಗಳಿಗೆ ಡಿ ಬಾಸ್ ಮೋಸ ಮಾಡಿದ್ರ? ಹಚ್ಚೆ ಹಾಕ್ಕೊಂಡದ್ದೆ ಸುಳ್ಳಾ ?! ಎಂಬ ಮಾತು ಕೇಳಿಬರುತ್ತಿದೆ.

ಡಿ ಕಂಪನಿ ಯೂಟ್ಯೂಬ್‌ ಚಾನೆಲ್‌ನಲ್ಲಿ (YouTube channel) ದರ್ಶನ್‌ ವರ್ಕೌಟ್‌ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ದರ್ಶನ್‌ ಜಿಮ್‌ನಲ್ಲಿ ವರ್ಕೌಟ್ (Darshan workout video) ಮಾಡುವ ದೃಶ್ಯ‌ ಸೆರೆಯಾಗಿದೆ. ಅಭಿಮಾನಿಗಳು ಖುಷಿಯಿಂದ ನೆಚ್ಚಿನ ನಟನ ವರ್ಕೌಟ್ ವಿಡಿಯೋ ವೀಕ್ಷಿಸಿದ್ದು, ಮೆಚ್ಚುಗೆ ಸೂಚಿಸಿ ಕಾಮೆಂಟ್ ಮಾಡಿದ್ದಾರೆ.

ಆದರೆ, ಕೆಲ ಅಭಿಮಾನಿಗಳು ದರ್ಶನ್ ಎದೆಯ ಮೇಲಿದ್ದ ಹಚ್ಚೆಯನ್ನು (Darshan Tattoo) ಹುಡುಕಾಡಿದ್ದಾರೆ. ಆದರೆ, ಹಚ್ಚೆ ಇಲ್ಲವೇ ಇಲ್ಲ. ಮಾಯವಾಗಿಬಿಟ್ಟಿದೆ. ಇದರಿಂದ ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದಾರೆ. ಅಲ್ಲದೆ, ಆದಿ ಎಂಬವರು ಈ ವಿಡಿಯೋದ ಸ್ಕ್ರೀನ್‌ ಶಾಟ್‌ ಅನ್ನು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ”ಯಾರಾದರೂ ಗಮನಿಸಿದ್ದೀರಾ? ಕೆಲವು ದಿನಗಳ ಹಿಂದೆ ‘ನನ್ನ ಸೆಲೆಬ್ರಿಟೀಸ್‌’ ಎಂದು ದರ್ಶನ್‌ ಹಾಕಿಸಿಕೊಂಡಿದ್ದ ಟ್ಯಾಟೂ ಏನಾಯ್ತು? ಅವರ ಅಸಲಿ ಮುಖ ಈಗ ಗೊತ್ತಾಗುತ್ತಿದೆ. ಅಭಿಮಾನಿಗಳಿಗೆ ದರ್ಶನ್‌ ಮೋಸ ಮಾಡಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

ಸದ್ಯ ಈತನ ಪೋಸ್ಟ್ ಗೆ ಸಾಕಷ್ಟು ದರ್ಶನ್ ಅಭಿಮಾನಿಗಳು ಕಾಮೆಂಟ್ ಮಾಡಿದ್ದು, ಕೆಲವರು ಟ್ಯಾಟೂ ಎಲ್ಲಿ ಹೋಯ್ತು? ಫೇಕ್‌ ಟ್ಯಾಟೂನಾ? ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನೂ ಕೆಲವರು, ಇದು ದರ್ಶನ್‌ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ರೆಕಾರ್ಡ್‌ ಮಾಡಿರುವ ವಿಡಿಯೋ, ಈಗ ಅಪ್ಲೋಡ್ ಮಾಡಿದ್ದಾರೆ ಅಷ್ಟೇ!! ಎಂದು ಕಾಮೆಂಟ್ ಮಾಡಿದ್ದಾರೆ.

https://twitter.com/TheAadiTweets/status/1652865021565882368?s=20

 

ಇದನ್ನೂ ಓದಿ: ಸಮಂತಾ ದೇವೋ ಭವ ಎನ್ನುತ್ತ ಆಕೆಗೆ ಗುಡಿ ಕಟ್ಟಿದ ಅಭಿಮಾನಿ, ಅದ್ಕೆ ಆತ ಖರ್ಚು ಮಾಡಿದ್ದೆಷ್ಟು ಲಕ್ಷ ಗೊತ್ತಾ ?!

You may also like

Leave a Comment