Rashmika mandanna: ಕೊನೆಗೂ ರಶ್ಮಿಕ ಮಂದಣ್ಣ (Rashmika mandanna) ಎಂಬ ನ್ಯಾಷನಲ್ ಕ್ಲಾಸ್ ನಾಮಾಂಕಿತ ಹುಡುಗಿಯ ಕ್ರಶ್ ಯಾರು ಅಂತ ರಿವೀಲ್ ಆಗಿದೆ. ಆತ ಹೈದರಾಬಾದಿನ ದೇವರಕೊಂಡನೂ ಅಲ್ಲ, ಸುಳ್ಯದ ಸದಾನಂದ ದೇವರಗುಂಡ ಕೂಡಾ ಅಲ್ಲ ! ಹಾಗಾದ್ರೆ ಆತ ಯಾರು ಎಂಬ ಗಿರಿಯಾಸಿಟಿ ನಿಮಗೆ ಇದ್ದರೆ ಈ ಪೋಸ್ಟ್ ನಿಮಗಾಗಿ !
ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್ ಟೂರ್ನಿಯಲ್ಲಿ ಆರ್ಸಿಬಿ (RCB) ತಂಡಕ್ಕೆ ಸಾಕಷ್ಟು ಟ್ರೆಂಡ್ ಇದೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಇಲ್ಲಿಯವರೆಗೂ ಒಂದೇ ಒಂದು ಬಾರಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದೇ ಇದ್ದರೂ, ಇವತ್ತಿಗೂ ಇತರೆ ಎಲ್ಲಾ ತಂಡಗಳಿಗಿಂತಲೂ ಅತ್ಯಂತ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದೆ ಮತ್ತು ಇತರ ತಂಡಗಳಿಗಿಂತ ಹೆಚ್ಚು ಕ್ರೇಜ್ ಉಳ್ಳ ಜನರು ಆರ್ಸಿಬಿ ಜೊತೆ ಇದ್ದಾರೆ. ಆರ್ಸಿಬಿಗೆ ಹಲವು ಸೋಶಿಯಲ್ ಮೀಡಿಯಾಗಳ ಮೂಲಕ ಕೋಟ್ಯಂತರ ಫಾಲೋವರ್ಸ್ ಇದ್ದಾರೆ. ಪಂದ್ಯ ಗೆದ್ದರೂ, ಸೋತರೂ ಕಡೆಗೆ ಆಡದೆ ಇದ್ದರೂ ರ್ಸಿಬಿಗೆ ಅಭಿಮಾನಿಗಳ ಸಂಖ್ಯೆಯಲ್ಲಿ ಕೊರತೆ ಇಲ್ಲ. ಕಳೆದ 15 ಆವೃತ್ತಿಗಳಲ್ಲಿ ಒಮ್ಮೆಯೂ ಆರ್ಸಿಬಿ ಪ್ರಶಸ್ತಿ ಗೆದ್ದಿಲ್ಲವಾದರೂ ಅಭಿಮಾನಿಗಳ ಪ್ರೀತಿ, ಬಲ, ನಂಬಿಕೆ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಅದಕ್ಕೆ ಒಂದು ಕಾರಣ ಆತ ಕೂಡ ಎನ್ನಲಾಗುತ್ತಿದೆ. ಒಂದಲ್ಲ ಒಂದು ದಿನ ಆರ್ಸಿಬಿ ಕಪ್ ಗೆದ್ದೇ ಗೆಲ್ಲುತ್ತೆ ಎಂಬ ವಿಶ್ವಾಸದೊಂದಿಗೆ ಅಭಿಮಾನಿಗಳು ಸ್ಟೇಡಿಯಂ ಗೆ ಬಂದು ಪ್ರೀಮಿಯಂ ಬೆಲೆ ಕೊಟ್ಟು ಟಿಕೆಟ್ ಕೊಂಡು ಆರ್ಸಿಬಿಯನ್ನು ಪ್ರತಿ ಬಾರಿ ಬೆಂಬಲಿಸುತ್ತಾ ಬಂದಿದ್ದಾರೆ. ಹಾಗಾದರೆ ರಶ್ಮಿಕಾ ಮಂದಣ್ಣ ಅವರ ಕ್ರಶ್ ಯಾರು ? ಆರ್ಸಿಬಿ ತಂಡವೇ ಆಕೆಯ ಕ್ರಷ್ ? ಎನ್ನುವ ಅನುಮಾನ ನಿಮಗೆ ಕಾಡದಿರದು. ಅದ್ಯಾವುದೂ ಅಲ್ಲ ನ್ಯಾಷನಲ್ ಅವರಿಗೆ ಒಂದು ದೊಡ್ಡ ಕ್ರಶ್ ಇದೆ !!
ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ (Rashmika Mandanna) ಸಹ ಆರ್ಸಿಬಿ ಆಟಗಾರರಿಗೆ ಫ್ಯಾನ್ ಆಗಿದ್ದಾರೆ. ಈ ಕುರಿತು ರಶ್ಮಿಕಾ ಮಂದಣ್ಣ ಮಾತನಾಡಿರುವ ವೀಡಿಯೋ ತುಣುಕನ್ನು ಸ್ಟಾರ್ಸ್ಪೋಟ್ಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ” ನಾನು ಬೆಂಗಳೂರಿನ ಹುಡುಗಿ, ಕರ್ನಾಟಕದ ಹುಡುಗಿ, ಈ ಸಲ ಕಪ್ ನಮ್ದೆ ಎಂಬ ಘೋಷಣೆ ಕೇಳುತ್ತಲೇ ಇದ್ದೇನೆ. ನನ್ನ ನೆಚ್ಚಿನ ತಂಡ ಸಹ ಆರ್ಸಿಬಿ, ಈ ಬಾರಿಯಾದರು ಕಪ್ ಗೆಲ್ಲಬೇಕೆಂಬುದು ನಮ್ಮೆಲ್ಲರ ಆಸೆ. ಹಾಗೆಯೇ ವಿರಾಟ್ ಕೊಹ್ಲಿ (Virat Kohli) ಸರ್ ನನ್ನ ಫೇವರಿಟ್ ” ಎಂದು ಕೈಯಲುಗಿಸಿ, ಭುಜ ಕುಣಿಸಿ, ಇಂಗ್ಲಿಷ್ ಅಸೆಂಟ್ ಬದಲಿಸಿ ಹೇಳಿಕೊಂಡಿದ್ದಾರೆ ರಶ್ಮಿಕಾ.

