Home » Weekend with Ramesh: ಈ ಬಾರಿ ಸಾಧಕರ ಕುರ್ಚಿಯನ್ನು ಯಾರು ಅಲಂಕರಿಸಲಿದ್ದಾರೆ? ಇವರೇ ನೋಡಿ!

Weekend with Ramesh: ಈ ಬಾರಿ ಸಾಧಕರ ಕುರ್ಚಿಯನ್ನು ಯಾರು ಅಲಂಕರಿಸಲಿದ್ದಾರೆ? ಇವರೇ ನೋಡಿ!

2 comments
Weekend with Ramesh

Weekend with Ramesh: ವೀಕೆಂಡ್ ವಿತ್ ರಮೇಶ್ (Weekend With Ramesh) ಐದನೇ ಸೀಸನ್​ ಪ್ರಾರಂಭವಾಗಿ ಕೆಲವು ವಾರಗಳು ಉರುಳಿವೆ. ಈವರೆಗೆ ನಟಿ ರಮ್ಯಾ (Ramya), ಪ್ರಭುದೇವ (Prabhu Deva), ಹೃದ್ರೋಗ ತಜ್ಞ ಡಾ ಮಂಜುನಾಥ್, ಹಿರಿಯ ನಟ ದತ್ತಣ್ಣ, ನಟ ಡಾಲಿ ಧನಂಜಯ್ (Dhananjay) ಅವರುಗಳು ಅತಿಥಿಗಳಾಗಿ ಆಗಮಿಸಿ ಸಾಧಕರ ಕುರ್ಚಿ ಅಲಂಕರಿಸಿದ್ದಾರೆ. ಇದೀಗ ಮುಂದಿನ ವಾರದ ಅತಿಥಿಗಳು ಯಾರು ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ. ಅದಕ್ಕೆ ಉತ್ತರ ಇಲ್ಲಿದೆ. ಮುಂದಿನ ವಾರ ಸಾಧಕರ ಕುರ್ಚಿ ಯಾರು ಅಲಂಕರಿಸಲಿದ್ದಾರೆ? ಎಂಬ ವಿವರ ಇಲ್ಲಿದೆ.

ಈವರೆಗೆ ಸಾಧಕರ ಕುರ್ಚಿಯಲ್ಲಿ ಸಿನಿಮಾ ನಟ, ನಟಿಯರು ಕುಳಿತು ತಮ್ಮ ಜೀವನ ಚರಿತ್ರೆ ಬಿಚ್ಚಿಟ್ಟರು ಇದೀಗ ಈ ಬಾರಿ ವೀಕೆಂಡ್ ವಿತ್ ರಮೇಶ್’ಗೆ ಅತಿಥಿಯಾಗಿ ಕನ್ನಡ ಚಿತ್ರರಂಗದ ಜನಪ್ರಿಯ ನಟ ನೆನಪಿರಲಿ ಪ್ರೇಮ್ (Prem) ಬರಲಿದ್ದಾರೆ. ಹಲವು ಸಿನಿಮಾಗಳ ಮೂಲಕ ಜನಮನಗೆದ್ದಿರುವ ಪ್ರೇಮ್ ಈ ಬಾರಿ ತಮ್ಮ ಮನದ ಮಾತು ಹಂಚಿಕೊಳ್ಳಲು ಪ್ರೇಕ್ಷಕರ ಮುಂದೆ ಬರಲಿದ್ದಾರೆ.

ನಟ ಪ್ರೇಮ್ ಚಿತ್ರರಂಗಕ್ಕೆ ಕಾಲಿಟ್ಟು 19 ವರ್ಷಗಳಾಗಿವೆ. ಪ್ರಾಣ’ ಎನ್ನುವ ಚಿತ್ರದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟು, ಮುಂದೆ ‘ನೆನಪಿರಲಿ’ ಪ್ರೇಮ್‌ ಎಂದೇ ಸ್ಟಾರ್‌ ಪಟ್ಟಕ್ಕೇರಿದರು. 2004ರಲ್ಲಿ ‘ಪ್ರಾಣ’ (prana) ಸಿನಿಮಾದಲ್ಲಿ ಪ್ರೇಮ್ ನಟಿಸಿದ್ದರು. ನಂತರ ನೆನಪಿರಲಿ’ ಸಿನಿಮಾದಲ್ಲಿ ಪ್ರೇಮ್‌ಗೆ ಅವಕಾಶ ದೊರೆಯಿತು. ನೆನಪಿರಲಿ ಸಿನಿಮಾ (nenapirali movie) ಸೂಪರ್ ಹಿಟ್ ಆಯಿತು. ಸಿನಿಮಾದ ಹಾಡುಗಳಂತೂ ಇಂದಿಗೂ ಮಾಸಿಲ್ಲ. ನೆನಪಿರಲಿ ಸಿನಿಮಾದಿಂದ ಪ್ರೇಮ್ ಕನ್ನಡದಲ್ಲಿ ಗಟ್ಟಿಯಾಗಿ ನೆಲೆನಿಲ್ಲುವಂತಾಯಿತು. ಆದರೆ ನಂತರದ ದಿನಗಳಲ್ಲಿ ಸಿನಿಮಾ ಹಿಟ್ ಆಗದೆ ಸತತ ಸೋಲುಗಳನ್ನು ಅನುಭವಿಸಿದರು.

ಪ್ರೇಮ್ ಇಲ್ಲಿವರೆಗೂ 24 ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಪೈಕಿ ನೆನಪಿರಲಿ, ಜೊತೆ ಜೊತೆಯಲಿ (jothe jotheyali), ಪಲ್ಲಕ್ಕಿ, ಚಾರ್‌ಮಿನಾರ್‌, ಮಳೆ, ಚೌಕಾ ಮುಂತಾದ ಚಿತ್ರಗಳು. ಇನ್ನೂ ಶತ್ರು ಹಾಗೂ ದಳಪತಿ ಚಿತ್ರಗಳು ಇವರಿಗೆ ಆ್ಯಕ್ಷನ್‌ ಇಮೇಜ್‌ ನೀಡಿದವು. ಸವಿ ಸವಿ ನೆನಪು, ಐ ಯಾಮ್‌ ಸಾರಿ ಮತ್ತೆ ಬನ್ನಿ ಪ್ರೀತ್ಸೋಣಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ನೆನಪಿರಲಿ, ಚಾರ್‌ಮಿನಾರ್‌ ಚಿತ್ರಗಳು ವೃತ್ತಿ ಬದುಕಿನ ಬಹು ದೊಡ್ಡ ತಿರುವುಗಳಾದವು.

ಇದನ್ನೂ ಓದಿ: ಡಿವೋರ್ಸ್ ಫೋಟೋಶೂಟ್ ಮಾಡಿ ವೈರಲ್ ಆದ ಈ ಶಾಲಿನಿ ಯಾರು ಗೊತ್ತಾ? ಈಕೆ ಮದುವೆ ಆಗಿದ್ದು ಯಾರನ್ನು?

You may also like

Leave a Comment