Beauty Queen: ಮನುಷ್ಯ ಯಾವಾಗಲೂ ತನ್ನ ಅಂದವನ್ನು ಕಾಪಾಡಿಕೊಳ್ಳಲು ಹರಸಾಹಸ ಪಡುತ್ತಾನೆ. ಇನ್ನು ವಯಸ್ಸಿಗಿಂತ ಕಿರಿಯರಾಗಿ ಕಾಣುವುದು ಬಹಳ ಕಷ್ಟದ ಕೆಲಸ. ಆದರೆ ಈ ಫೋಟೋ ದಲ್ಲಿ ಕಾಣುವ ಬ್ಯೂಟಿ ಕ್ವೀನ್ (Beauty Queen) ಬಗ್ಗೆ ಕೇಳಿದರೆ ನೀವು ಅಚ್ಚರಿ ಪಡುತ್ತೀರಾ!
ಹೌದು, ಇಲ್ಲೊಬ್ಬಳು 55 ವರ್ಷ ವಯಸ್ಸಿನ ಮಹಿಳೆ ತನ್ನ ಫಿಟ್‌ನೆಸ್ ಕಾಪಾಡಿಕೊಂಡಿದ್ದು, ತಮ್ಮ ನಿಜವಾದ ವಯಸ್ಸಿಗಿಂತ ಸುಮಾರು 20 ವರ್ಷ ಚಿಕ್ಕವಳಾಗಿ ಕಾಣಿಸುತ್ತಾರೆ.
ಕೆನಡಾದ ನಿನೆಟ್ಟೆ ಲಾಂಗ್‌ವರ್ತ್ ಎಂಬ ಮಹಿಳೆ ಫಿಟ್‌ನೆಸ್ ತರಬೇತುದಾರರಾಗಿರುವ ಇವರು ಇನ್ಸ್ಟಾಗ್ರಾಮ್ (Instagram) ನಲ್ಲಿ ಸಾವಿರಾರು ಫಾಲೋವರ್ಸ್ ಮತ್ತು ಅವರ ವ್ಯಾಯಾಮದ ವೀಡಿಯೊಗಳು ಮತ್ತು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಆಕೆಯ ಪ್ರಕಾರ “ನನ್ನ ವಯಸ್ಸು ಎಷ್ಟು ಎಂದು ಜನರು ಯಾವಾಗಲೂ ಆಶ್ಚರ್ಯಪಡುತ್ತಾರೆ. ನಾನು ನನ್ನ ಮಕ್ಕಳೊಂದಿಗೆ ಇರುವಾಗ, ಅವರು ನಮ್ಮನ್ನು ಗೊಂದಲದಿಂದ
ನೋಡುತ್ತಾರೆ. ನಾನು ಅವರ ಅಮ್ಮನಾಗುವಷ್ಟು ವಯಸ್ಸಾಗಿ ಕಾಣುತ್ತಿಲ್ಲ.” ಎಂದು ಹೇಳಿದ್ದಾರೆ.
ನಿನೆಟ್ಟೆ ಲಾಂಗ್‌ವರ್ತ್ ಅವರು ವಾರದಲ್ಲಿ ಸುಮಾರು ಆರು ಗಂಟೆಗಳ ಕಾಲ ಜಿಮ್ನಲ್ಲಿ ಕಳೆಯುತ್ತಾರೆ, ವ್ಯಾಯಾಮ ಮತ್ತು ತೂಕವನ್ನು ಎತ್ತುತ್ತಾರೆ. ಆಕೆಯ ಹೆಸರಿನಲ್ಲಿ ಕೆಲವು ಪವರ್‌ಲಿಫ್ಟಿಂಗ್ ದಾಖಲೆಗಳು ಕೂಡ ಇವೆ . ಮುಖ್ಯವಾಗಿ ಇವಳ ಶಾಶ್ವತ ಯೌವನದ ರಹಸ್ಯವೆಂದರೆ ಅವಳ ಜೀವನಶೈಲಿ ಎಂದು ಸ್ವತಃ ಹೇಳಿಕೊಂಡಿದ್ದಾರೆ.
ಇದನ್ನು ಓದಿ: Vistara- Air India: ವಿಸ್ತಾರ-ಏರ್ ಇಂಡಿಯಾ ಮಧ್ಯೆ ಒಪ್ಪಂದ! ಯಾತ್ರಿಕರಿಗೇನು ಲಾಭ?
