Marriage Fight Video: ಮದುವೆ ಮನೆಗೆ ಹೋಗಿ ಊಟ ಮಾಡಿ ಬಂದ ಮೇಲೆ ಆ ಊಟದ ಬಗ್ಗೆ ಎಂದೂ ಕಮೆಂಟ್ ಮಾಡಬೇಡಿ, ಹಂಗಿಸಿ ಮಾತನಾಡಬೇಡಿ ಎಂದೆಲ್ಲಾ ಹೇಳುತ್ತಾರೆ. ಯಾಕೆಂದ್ರೆ ಆ ಊಟದ ವ್ಯವಸ್ಥೆ ಹಿಂದೆ ಒಬ್ಬ ತಂದೆಯ ಶ್ರಮ ಇರುತ್ತದೆ. ಆತ ಬಡವನೋ ಶ್ರೀಮಂತನೋ ಗೊತ್ತಿಲ್ಲ. ಆದರೆ ಅದು ಬೆವರು ಸುರಿಸಿ ಮಗಳ ಅಥವಾ ಮಗನ ಮದವೆಗೆಂದೋ ಕೂಡಿಟ್ಪ ಹಣದ ಫಲ ಆಗಿರುತ್ತೆ. ಆದರೆ ಇಲ್ಲೊಂದೆಡೆ ಇದ್ಯಾವುದನ್ನೂ ಲೆಕ್ಕಿಸದೆ ಮದುವೆ ಮನೆಯಲ್ಲಿ ಕೇವಲ ಪೂರಿ ವಿಚಾರದ ಸಲುವಾಗಿ ಮಾರಾಮಾರಿ ನಡೆದಿದೆ.(Marriage Fight Video)
ಹೌದು, ಜಾರ್ಖಂಡ್ನ ರಾಂಚಿಯಲ್ಲಿ ಕಳೆದ ಮಂಗಳವಾರ ಸಂಜೆ ಮುಫಾಸಿಲ್ ಠಾಣೆ ವ್ಯಾಪ್ತಿಯ ಪಟರೋಡಿ ಪ್ರದೇಶದಲ್ಲಿ ಶಂಕರ್ ಯಾದವ್ ಎಂಬುವವರ ಮದುವೆ ಕಾರ್ಯಕ್ರಮಕ್ಕೆ ತಡರಾತ್ರಿ ಆಗಮಿಸಿದ ಯುವಕರ ಗುಂಪೊಂದು ಆಹಾರದ ವಿಚಾರವಾಗಿ ಗಲಾಟೆ ಮಾಡಿದ್ದು ಇದು ದೊಡ್ಡ ಮಟ್ಟದ ಹೊಡೆದಾಟಕ್ಕೆ ಕಾರಣವಾಗಿದೆ.
ಅಂದಹಾಗೆ ಮದುವೆ ಮನೆಗೆ ತಡವಾಗಿ ನುಗ್ಗಿದ ಯುವಕರ ತಂಡವೊಂದು ಊಟ ಮಾಡುವ ವೇಳೆ ತಮಗೆ ಬಿಸಿ ಬಿಸಿ ಪೂರಿ ಬೇಕು ಎಂದು ಗಲಾಟೆ ತೆಗೆದಿದ್ದಾರೆ. ಮದುವೆ ಮನೆಯಲ್ಲಿ ಇವರ ಮಾತಿಗೆ ಯಾರು ಸೊಪ್ಪು ಹಾಕದ ಕಾರಣ ಪೋನ್ ಮಾಡಿ ಮತ್ತೊಂದು ಗುಂಪನ್ನು ಕರೆಸಿಕೊಂಡಿದ್ದಾರೆ. ಬಳಿಕ ಮದುವೆ ಮನೆಗೆ ಆಗಮಿಸಿದ ಯುವಕರ ತಂಡವೊಂದು ಅಲ್ಲಿ ನೆರದಿದ್ದವರನ್ನು ನಿಂದಿಸಲು ಪ್ರಾರಂಭಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು ಇದರ ಪರಿಣಾಮವಾಗಿ ಮೂರರಿಂದ ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಸ್ಥಳೀಯ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ ಗಾಯಾಳುಗಳನ್ನು ಆಸ್ಪತ್ರಗೆ ದಾಖಲಿಸಿದ್ದಾರೆ. ಅಲ್ಲದೆ ಘಟನೆಗೆ ಕಾರಣವಾದ ಪ್ರಮುಖ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿರುವ ಪೊಲೀಸರು ಉಳಿದವರಿಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಇದನ್ನೂ ಓದಿ: Dr. Bro : ಸದ್ದಿಲ್ಲದೆ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಡಾಕ್ಟರ್ ಬ್ರೋ!
