Home » Airport staff undressing two women: ಏರ್‌ಪೋರ್ಟ್‌ ಗೇಟಲ್ಲೇ ಇಬ್ಬರು ಚೆಲುವೆಯರ ಬಟ್ಟೆ ಬಿಚ್ಚಿಸಿದ ಏರ್‌ಲೈನ್ಸ್‌ ಸಿಬ್ಬಂದಿ! ಅಷ್ಟಕ್ಕೂ ಕಾರಣವೇನು ಗೊತ್ತಾ?

Airport staff undressing two women: ಏರ್‌ಪೋರ್ಟ್‌ ಗೇಟಲ್ಲೇ ಇಬ್ಬರು ಚೆಲುವೆಯರ ಬಟ್ಟೆ ಬಿಚ್ಚಿಸಿದ ಏರ್‌ಲೈನ್ಸ್‌ ಸಿಬ್ಬಂದಿ! ಅಷ್ಟಕ್ಕೂ ಕಾರಣವೇನು ಗೊತ್ತಾ?

by ಹೊಸಕನ್ನಡ
0 comments
airport-staff-undressing-two-women

Airport staff undressing two women: ಏರ್‌ಪೋರ್ಟ್‌ ನಲ್ಲಿ ಸುರಕ್ಷತೆ ದೃಷ್ಟಿಯಿಂದ ಪ್ರತಿಯೊಬ್ಬರನ್ನೂ ಪರೀಕ್ಷಿಸುವುದು ಸಾಮಾನ್ಯ. ಕೇವಲ ಪರೀಕ್ಷಿಸಿದ್ದರೆ ಈ ಒಂದು ವಿಷಯ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತಿರಲಿಲ್ಲವೇನೋ. ಆದರೆ ಇಲ್ಲಿ ಏರ್‌ಲೈನ್ಸ್‌ ಸಿಬ್ಬಂದಿ ಏರ್‌ಪೋರ್ಟ್‌ ಗೇಟ್‌ನಲ್ಲೇ ಇಬ್ಬರು ಮಹಿಳೆಯರ ಬಟ್ಟೆ ಬಿಚ್ಚಿಸಿದ್ದಾರೆ(Airport staff undressing two women).

ಹೌದು, ಅಮೇರಿಕಾದ ಲಾಸ್ ವೇಗಾಸ್‌ನ ಹ್ಯಾರಿ ರೀಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೇ 2 ರಂದು ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಕಾಮಿಡಿಯನ್‌ ಕ್ರಿಸ್ಸಿ ಮೇಯ್ರ್‌ ಈ ಕುರಿತು ಟ್ವೀಟ್ ಮಾಡಿ ಏರ್ ಪೋರ್ಟ್ ಸಿಬ್ಬಂದಿ ಮೇಲೆ ಆರೋಪ ಮಾಡಿದ್ದಾರೆ.

ಅಂದಹಾಗೆ ಅಮೆರಿಕನ್ ಏರ್‌ಲೈನ್ಸ್ ಉದ್ಯೋಗಿಯೊಬ್ಬರು ಮಹಿಳಾ ಸಹಚರ ಪ್ರಯಾಣಿಕರಾದ ಕೀನು ಸಿ. ಥಾಂಪ್ಸನ್ ಅವರನ್ನು ವಿಮಾನದ ಬೋರ್ಡಿಂಗ್‌ಗೂ ಮೊದಲು ನೀವೂ ಧರಿಸಿದ್ದ ಉಡುಪು ಹೆಚ್ಚು ಮಾಡರ್ನ್‌ ಆಗಿದೆ ತಮ್ಮ ಪ್ಯಾಂಟ್ ಬದಲಾಯಿಸುವಂತೆ ಒತ್ತಾಯಿಸಿದರು. ಗೇಟ್‌ನಲ್ಲಿ ಬಟ್ಟೆ ಬದಲಿಸಬೇಕಾಯಿತು. ಬಟ್ಟೆ ಬದಲಾಯಿಸಲು ಯಾವುದೇ ಕೊಣೆಯಾಗಲಿ ಇನ್ನಿತರ ವ್ಯವಸ್ಥೆಯಾಗಲಿ ಇರಲಿಲ್ಲ. ನಾವು ಮೊದಲು ಧರಿಸಿದ್ದ ಬಟ್ಟೆಗಳಿಗಿಂತ ನಂತರ ಧರಿಸಿರುವ ಉಡುಪು ಹೆಚ್ಚು ಬಹಿರಂಗವಾಗಿದೆ ಎಂದು ಕಾಮಿಡಿಯನ್‌ ಕ್ರಿಸ್ಸಿ ಮೇಯ್ರ್‌ ಹೇಳಿದ್ದಾರೆ.

ಇನ್ನು, ಆ ಮಹಿಳೆ ತಾವು ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಧರಿಸಿದ್ದ ಬಟ್ಟೆಯ ಫೋಟೋವನ್ನು ಟ್ವೀಟ್‌ ಮಾಡಿದ್ದಾರೆ. ಅಲ್ಲದೆ, ಈ ಫೋಟೋ ಜತೆಗೆ ಬೋರ್ಡಿಂಗ್‌ಗೆ ಮೊದಲು ಬದಲಾಯಿಸಲು ಹೇಳಲಾಗಿದೆ ಎಂಬ ಉಡುಪಿನ ಫೋಟೋವನ್ನೂ ಕಾಮಿಡಿಯನ್‌ ಕ್ರಿಸ್ಸಿ ಮೇಯ್ರ್‌ ಪೋಸ್ಟ್‌ ಮಾಡಿದ್ದಾರೆ. ಈ ಇಬ್ಬರ ಮೊದಲಿನ ಬಟ್ಟೆಗಳು ಮ್ಯಾಕ್ಸಿ ಸ್ಕರ್ಟ್ ಮತ್ತು ಪ್ಯಾಂಟ್ ಅನ್ನು ಒಳಗೊಂಡಿವೆ ಎಂದು ಫೋಟೋ ತೋರಿಸುತ್ತದೆ.

ಇನ್ನು, ಅಮೆರಿಕನ್ ಏರ್‌ಲೈನ್ಸ್‌ನ ಸಾಮಾಜಿಕ ಮಾಧ್ಯಮ ಖಾತೆಯು ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದು ಹೆಚ್ಚಿನ ವಿವರಗಳನ್ನು ಕಳುಹಿಸಲು ಕ್ರಿಸ್ಸಿ ಮೇಯ್ರ್‌ಗೆ ಕೇಳಿದೆ. “ನಿಮ್ಮ ಕಾಮೆಂಟ್‌ಗಳು ನಮಗೆ ಸಂಬಂಧಿಸಿವೆ. ದಯವಿಟ್ಟು DM ಮೂಲಕ ನಮ್ಮ ಜತೆ ಜಾಯಿನ್‌ ಆಗಿ, ನಾವು ಇಲ್ಲಿದ್ದೇವೆ ಮತ್ತು ನಿಮ್ಮ ತೊಂದರೆ ಕೇಳಲು ಸಿದ್ಧರಾಗಿದ್ದೇವೆ” ಎಂದು ಏರ್‌ಲೈನ್ ಹೇಳಿದೆ. ಬಳಿಕ ಉತ್ತರಿಸಿದ ಕಾಮಿಡಿಯನ್‌ ಕ್ರಿಸ್ಸಿ ಮೇಯ್ರ್‌ “ಇದು ನಿಜವಾಗಿಯೂ ಅವಮಾನಕರವಾಗಿದೆ ಮತ್ತು ನಾನು ನಿಮಗೆ ತುಂಬಾ ನಿಷ್ಠನಾಗಿದ್ದೇನೆ, ನನ್ನ ಬಳಿ ಕ್ರೆಡಿಟ್ ಕಾರ್ಡ್ ಮತ್ತು ಎಲ್ಲವೂ ಇದೆ” ಎಂದು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ಭಾರತೀಯರು ಯಾವ ರೀತಿಯ ಸುದ್ದಿಗಳನ್ನು ಓದಲು ಬಯಸುತ್ತಾರೆ?

You may also like

Leave a Comment