Home » B.Y. Vijayendra: ಬಿಎಸ್‌ವೈ ಉತ್ತರಾಧಿಕಾರಿ ವಿಜಯೇಂದ್ರಗೆ ಹೆಚ್ಚುವರಿ ಜವಾಬ್ದಾರಿ : ವಿಜಯೇಂದ್ರಗೆ ಬಹುಪರಾಕ್ ಎಂದ ಹೈ ಕಮಾಂಡ್

B.Y. Vijayendra: ಬಿಎಸ್‌ವೈ ಉತ್ತರಾಧಿಕಾರಿ ವಿಜಯೇಂದ್ರಗೆ ಹೆಚ್ಚುವರಿ ಜವಾಬ್ದಾರಿ : ವಿಜಯೇಂದ್ರಗೆ ಬಹುಪರಾಕ್ ಎಂದ ಹೈ ಕಮಾಂಡ್

by Praveen Chennavara
1 comment

B.Y. Vijayendra: ಬೆಂಗಳೂರು: ಮಾಜಿ ಮುಖ್ಯಮಂತ್ರಿ ,ಬಿಜೆಪಿಯ ರಾಜಾಹುಲಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ,ಯುವಕರ ಐಕಾನ್ ಬಿ.ವೈ. ವಿಜಯೇಂದ್ರ(B.Y. Vijayendra) ಅವರಿಗೆ ಬಿಜೆಪಿ ಹೈಕಮಾಂಡ್ ಹೆಚ್ಚುವರಿ ಜವಾಬ್ದಾರಿ ನೀಡಿದೆ.

ಯಡಿಯೂರಪ್ಪ ಅವರು ಪ್ರತಿನಿಧಿಸುತ್ತಿದ್ದ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ಬಿ.ವೈ ವಿಜಯೇಂದ್ರ ಅವರಿಗೆ ಹೆಚ್ಚುವರಿ 20 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸುವಂತೆ ಹೈಕಮಾಂಡ್ ತಿಳಿಸಿದೆ.

ಇದಕ್ಕೆಂದೇ ವಿಜಯೇಂದ್ರ ಅವರಿಗೆ ಬಿಜೆಪಿ ವತಿಯಿಂದ ವಿಶೇಷ ಹೆಲಿಕಾಪ್ಟರ್ ವೊಂದನ್ನು ಒದಗಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಬಾಗಲಕೋಟೆ, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ತುಮಕೂರು ಮತ್ತಿತರ ಜಿಲ್ಲೆಗಳಲ್ಲಿ ಪ್ರಚಾರ ನಡೆಸುವಂತೆ ಅವರಿಗೆ ಬಿಜೆಪಿ ಹೈಕಮಾಂಡ್ ನಿರ್ದೇಶನ ನೀಡಿದೆ ಎನ್ನಲಾಗಿದೆ. ಬಿಜೆಪಿ ಪ್ರಕಟಿಸಿರುವ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ವಿಜಯೇಂದ್ರ ಅವರಿಗೆ ಸ್ಥಾನ ಇರಲಿಲ್ಲ,ಕಾರಣ ಅವರೂ ಚುನಾವಣಾ ಕಣದಲ್ಲಿದ್ದಾರೆ.

ಪ್ರಸ್ತುತ ಬಿ.ಎಸ್.ಯಡಿಯೂರಪ್ಪ ಅವರಿಗೆ ಎಲ್ಲಾ ಕಡೆ ಪ್ರಚಾರ ನಡೆಸಲು ಸಾಧ್ಯವಾಗುತ್ತಿಲ್ಲ.ಯಡಿಯೂರಪ್ಪ ಬದಲಾಗಿ ಲಿಂಗಾಯತ ಮುಖವಾಗಿ ವಿಜಯೇಂದ್ರ ಅವರನ್ನು ಪ್ರಚಾರದ ಕಣಕ್ಕಿಳಿಸಲು ಬಿಜೆಪಿ ನಿರ್ಧಾರ ತೆಗೆದುಕೊಂಡಿದೆ. ಬಿಜೆಪಿ ಗೆಲ್ಲಬೇಕಾದರೆ ಯಡಿಯೂರಪ್ಪ ಅವರ ಉಪಸ್ಥಿತಿ ಮುಖ್ಯ.ಅವರ ವಯಸ್ಸಿನ ಕಾರಣದಿಂದ ಎಲ್ಲಾ ಕಡೆ ಪ್ರಚಾರ ಕಷ್ಟವಾದರಿಂದ ಅವರ ಪುತ್ರ ವಿಜಯೇಂದ್ರ ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.

ಇದನ್ನೂ ಓದಿ: ಇಂದು ಈ ರಾಶಿಯವರಿಗೆ ವಾಹನ ಖರೀದಿಯ ಯೋಗ

You may also like

Leave a Comment