CUK Recruitment 2023 : ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ (CUK Recruitment 2023) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಆನ್‌ಲೈನ್ (online) ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಯ ವಿವರ : ಒಟ್ಟು 18 ಪ್ರೊಫೆಸರ್ ಹುದ್ದೆ ಹಾಗೂ 32 ಅಸೋಸಿಯೇಟ್ ಪ್ರೊಫೆಸರ್ ಹುದ್ದೆ ಖಾಲಿ ಇದೆ. ವಾಣಿಜ್ಯಶಾಸ್ತ್ರ, ಇಲೆಕ್ಟ್ರಾನಿಕ್ಸ್ ಅಂಡ್ ಕಂಮ್ಯುನಿಕೇಷನ್ ಇಂಜಿನಿಯರಿಂಗ್, ಇಲೆಕ್ಟ್ರಿಕಲ್ ಇಂಜಿನಿಯರಿಂಗ್, ಮ್ಯೂಸಿಕ್ ಮತ್ತು ಫೈನ್ ಆರ್ಟ್ಸ್, ಶಿಕ್ಷಣ, ಪ್ರವಾಸ ಮತ್ತು ಹೋಟೆಲ್ ಮ್ಯಾನೇಜ್ಮೆಂಟ್, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸೇರಿದಂತೆ ವಿವಿಧ ವಿಷಯಗಳಲ್ಲಿ ನೇಮಕ ಮಾಡಲಾಗುತ್ತದೆ.
ಪ್ರಮುಖ ದಿನಾಂಕ:
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-05-2023
ಹಾರ್ಡ್‌ಕಾಪಿಗಳನ್ನು ತಲುಪಿಸಲು ಕೊನೆಯ ದಿನಾಂಕ : 23-05-2023
ಅರ್ಹತೆಗಳು:
• ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಪಿಹೆಚ್‌ಡಿ ಪದವಿ ಪಡೆದಿರಬೇಕು. ಸ್ನಾತಕೋತ್ತರ ಪದವಿಯನ್ನು ಶೇ.55 ಅಂಕಗಳೊಂದಿಗೆ ಪಾಸ್ ಮಾಡಿರಬೇಕು. 65 ವರ್ಷ ವಯೋಮಿತಿ ದಾಟಿರಬಾರದು. ಸರ್ಕಾರದ ನಿಯಮಾನುಸಾರ ಮತ್ತು ಯುಜಿಸಿ ನಡಾವಳಿಗಳ ಪ್ರಕಾರ ಆಯಾ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.
• ಪ್ರೊಫೆಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಪಿ.ಹೆಚ್‌ಡಿ ಪದವಿಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಡೆದಿರಬೇಕು. ರಿಸರ್ಚ್ ಚಟುವಟಿಕೆಯುಳ್ಳವರಾಗಿರಬೇಕು.
ವಿಶ್ವವಿದ್ಯಾಲಯ ಅಥವಾ ರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆಗಳಲ್ಲಿ ಕನಿಷ್ಟ 10 ವರ್ಷ ಸಹಾಯಕ ಪ್ರಾಧ್ಯಾಪಕ / ಅಸೋಸಿಯೇಟ್ ಪ್ರೊಫೆಸರ್ / ಪ್ರೊಫೆಸರ್ ಹುದ್ದೆಯಲ್ಲಿ ಅನುಭವ ಹೊಂದಿರಬೇಕು.
ಅರ್ಜಿ ಶುಲ್ಕ : ಅರ್ಜಿ ಶುಲ್ಕ ರೂ.1500. ಇರಲಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗಿವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ಇದೆ. ಆನ್‌ಲೈನ್ ಮೂಲಕ ನೆಟ್‌ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಬಳಸಿ ಶುಲ್ಕ ಪಾವತಿಸಬಹುದು.
ಅರ್ಜಿ ಸಲ್ಲಿಕೆ: ಅಧಿಕೃತ ವೆಬ್‌ಸೈಟ್ www.cuk.ac.in ಗೆ ಭೇಟಿ ನೀಡಿ. ಅಥವಾ https://cukrec.samarth.edu.in/ ಗೆ ಭೇಟಿ ನೀಡಿ. ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಹಾರ್ಡ್ ಕಾಪಿ ತಲುಪಿಸಲು ವಿಳಾಸ :
The Registrar,
Central University of Karnataka,
kadaganchi, Aland Road
Kalaburagi District -585 367.
ಇದನ್ನೂ ಓದಿ: ಸಿದ್ದರಾಮಯ್ಯ ಪರವಾಗಿ ನಟ ಶಿವರಾಜ್ ಕುಮಾರ್ ಚುನಾವಣಾ ಪ್ರಚಾರದ ಕಿಡಿ- ಹ್ಯಾಟ್ರಿಕ್ ಹೀರೋ ಶಿವಣ್ಣ ನೀಡಿದ್ರು ಸ್ಪಷ್ಟನೆ
