Cooking oil price decreased: ದುಬಾರಿ ಖಾದ್ಯ ತೈಲ (cooking oil price decreased) ಬೆಲೆಗಳಿಂದ ಶೀಘ್ರವೇ ಪರಿಹಾರ ಸಿಗಲಿದೆ. ಹೌದು, ಹಣದುಬ್ಬರದಿಂದ ಕೊಂಚ ರಿಲೀಫ್ ನೀಡಲು ಅಡುಗೆ ಎಣ್ಣೆ ಬೆಲೆಯನ್ನು ಕಡಿತಗೊಳಿಸುವಂತೆ ಆಹಾರ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯವು ಖಾದ್ಯ ತೈಲ ತಯಾರಿಸುವ ಕಂಪನಿಗಳಿಗೆ ಸೂಚಿಸಿದೆ. ಇದೀಗ ಸರ್ಕಾರದ ಮನವಿಯ ಬಳಿಕ ಖಾದ್ಯ ತೈಲ ಉತ್ಪಾದನಾ ಕಂಪನಿಗಳ ಬೆಲೆಗಳಲ್ಲಿ ಭಾರೀ ಇಳಿಕೆಯಾಗಿದೆ.
ಇನ್ನು ಜಾಗತಿಕ ಖಾದ್ಯ ತೈಲ ಬೆಲೆಗಳ ಕುಸಿತದ ಮಧ್ಯೆ, ಮದರ್ ಡೈರಿ ‘ಧಾರಾ’ ಬ್ರಾಂಡ್ ಅಡಿಯಲ್ಲಿ ಮಾರಾಟವಾಗುವ ಖಾದ್ಯ ತೈಲಗಳ ಗರಿಷ್ಠ ಚಿಲ್ಲರೆ ಬೆಲೆಯ (MRP) ಲೀಟರ್‌ಗೆ 15-20 ರೂ.ಗಳನ್ನು ಕಡಿತಗೊಳಿಸಲಾಗಿದೆ. ಅದಲ್ಲದೆ ಇನ್ನು ಫಾರ್ಚೂನ್, ಜೆಮಿನಿಯಂತಹ ತೈಲ ಬ್ರಾಂಡ್‌ಗಳ ತೈಲ ಬೆಲೆಗಳನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ.
ಅದಲ್ಲದೆ ಧಾರಾ ಸೋಯಾಬೀನ್ ಎಣ್ಣೆ, ರೈಸ್ಟ್ರಾನ್ ಎಣ್ಣೆ, ಸೂರ್ಯಕಾಂತಿ ಎಣ್ಣೆ ಮತ್ತು ನೆಲಗಡಲೆ ಎಣ್ಣೆಯನ್ನ ಕಡಿತಗೊಳಿಸಲಾಗುತ್ತದೆ. ಬೆಲೆ ಕಡಿತದ ನಂತರ, ಸಂಸ್ಕರಿಸಿದ ಸೋಯಾಬೀನ್ ಎಣ್ಣೆಯ (ಒಂದು ಲೀಟರ್ ಪ್ಯಾಕ್) ಬೆಲೆ 170 ರೂ.ಗಳಿಂದ 150 ರೂ.ಗೆ ಇಳಿದಿದೆ.
ಧಾರಾ ಸಂಸ್ಕರಿಸಿದ ಅಕ್ಕಿ ಹೊಟ್ಟು ಬೆಲೆ ಪ್ರತಿ ಲೀಟರ್’ಗೆ 190 ರೂ.ಗಳಿಂದ 170 ರೂ.ಗೆ ಇಳಿದಿದೆ. ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯ ಬೆಲೆ ಪ್ರತಿ ಲೀಟರ್‌ಗೆ 175 ರೂ.ಗಳಿಂದ
160 ರೂ.ಗೆ ಇಳಿದಿದೆ. ಅದೇ ರೀತಿ, ನೆಲಗಡಲೆ ಎಣ್ಣೆಯ ಬೆಲೆಯನ್ನು ಲೀಟರ್‌ಗೆ 255 ರೂ.ಗಳಿಂದ 240 ರೂ.ಗೆ ಇಳಿಸಲಾಗಿದೆ.
ಗ್ರಾಹಕ ವ್ಯವಹಾರಗಳ ಅಂಕಿಅಂಶಗಳ ಪ್ರಕಾರ, ಮೇ 2 ರಂದು, ನೆಲಗಡಲೆಎಣ್ಣೆ ಪ್ರತಿ ಲೀಟರ್‌ಗೆ 189.95 ರೂ., ಸಾಸಿವೆ ಎಣ್ಣೆ ಪ್ರತಿ ಲೀಟರ್‌ಗೆ 151.26ರೂ., ಸೋಯಾ ಎಣ್ಣೆ ಪ್ರತಿ ಲೀಟರ್‌ಗೆ 137.38 ರೂ., ಸೂರ್ಯಕಾಂತಿ ಎಣ್ಣೆ ಪ್ರತಿ ಲೀಟರ್‌ಗೆ 145.12 ರೂ.
ಅದಲ್ಲದೆ ಇತರ ಕೆಲವು ಕಂಪನಿಗಳು ಸಹ ಬೆಲೆಗಳನ್ನು ಕಡಿಮೆ ಮಾಡಿವೆ. ತೈಲ ಬ್ರಾಂಡ್‌ಗಳಾದ ಫಾರ್ಚೂನ್ ಕೀ ಮತ್ತು ಜೆಮಿನಿ ಎಡಿಬಲ್ ಮತ್ತು ಫ್ಯಾಟ್ಸ್ ಇಂಡಿಯಾ ತಮ್ಮ ತೈಲ ಬ್ರಾಂಡ್ ಜೆಮಿನಿಯ ಬೆಲೆಯನ್ನು ಲೀಟರ್‌ಗೆ 5 ರಿಂದ 10 ರೂ.ಗೆ ಇಳಿಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ಸರಕಾರಿ ನೌಕರರೇ ಇತ್ತ ಗಮನಿಸಿ, ಈ ಬಾರಿ ಡಿಎ ಹೆಚ್ಚಳ ಎಷ್ಟು ? ಇಲ್ಲಿದೆ ಮಾಹಿತಿ!
