Train runs from ramen noodles: ರೈಲು(Train) ಗಳು ಯಾವುದರಿಂದ ಓಡುತ್ತವೆ ಎಂದು ಕೇಳಿದ್ರೆ ಸಾಮಾನ್ಯವಾಗಿ ಬರೋ ಉತ್ತರ ಕಲ್ಲಿದ್ದಲು, ಡಿಸೇಲ್ ಅಥವಾ ಕರೆಂಟ್ ಎಂದು ಥಟ್ಟನೆ ನೀವು ಉತ್ತರಿಸಬಹುದು. ಆದರೆ ಸೂಪ್, ನ್ಯೂಡಲ್ಸ್ ಗಳಿಂದ ಏನಾದರೂ ರೈಲು ಓಡೋದನ್ನು ನೀವು ನೋಡಿದ್ದೀರಾ?
ರಾಮೆನ್(Ramen)! ಜಪಾನಿ ನೂಡಲ್ಸ್(Japan Nudels), ಸೂಪ್ ಸವಿಯದವರು ಯಾರಿಲ್ಲ? ಜಪಾನಿನಲ್ಲಂತೂ ರಾಮೆನ್ ಇಲ್ಲದೆ ರಾತ್ರಿ, ಬೆಳಗ್ಗೆಗಳು ಆಗುವುದೇ ಇಲ್ಲ ಅನ್ನಬಹುದು. ಆದರೆ ನಾವೆಲ್ಲರೂ ತಿನ್ನೋ ಈ ಆಹಾರ ಪದಾರ್ಥ, ರೈಲುಗಾಡಿಗಳಿಗೂ ಆಹಾರ ಆಗುತ್ತೆ ಅಂದ್ರೆ ನೀವು ನಂಬ್ತೀರಾ? ಹೌದು, ಇದೇ ರಾಮೆನ್ ನೂಡಲ್ಸ್, ಸೂಪ್ ನಿಂದ ರೈಲೂ ಓಡುತ್ತದೆ(train runs from ramen noodle) ಎಂಬ ಹೊಸ ವಿಷಯ ನಿಮಗೆ ಗೊತ್ತೆ? ಅರೆ, ರಾಮೆನ್ಗೂ ರೈಲಿಗೂ ಎಲ್ಲಿಂದೆಲ್ಲಿಂದ ಸಂಬಂಧ ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ನೋಡಿ ಕುತೂಹಲಕಾರಿ ಮಾಹಿತಿ.
ಅಂದಹಾಗೆ ಜಪಾನಿನ ವಿಶೇಷ ಪ್ರವಾಸದ ರೈಲಿನಲ್ಲಿ ಈ ಪ್ರಯೋಗ ಶುರುವಾಗಿದೆ. ಇಲ್ಲಿಯ ಸಾರಿಗೆ ಸಂಸ್ಥೆ ನಿಶಿದಾ ಲಾಜಿಸ್ಟಿಕ್ಸ್ (Nishida Logistics) ಈ ಪರ್ಯಾಯ ಇಂಧನವನ್ನು ಕಂಡುಹಿಡಿದಿದೆ. ನೂಡಲ್ಸ್ ರಸ, ಸೂಪ್ನಂಥ ದ್ರವಾಹಾರವನ್ನು ಸ್ಥಳೀಯ ರೆಸ್ಟೋರೆಂಟ್ಗಳಿಂದ ಸಂಗ್ರಹಿಸಲಾಗುತ್ತದೆ. ಇದು ಶೇ. 90 ರಷ್ಟು ಟೆಂಪುರಾ ಎಣ್ಣೆ ಮತ್ತು ಶೇ. 10 ರಷ್ಟು ರಾಮೆನ್ ಸೂಪ್ ಅನ್ನು ಒಳಗೊಂಡಿರುತ್ತದೆ. ನಂತರ ಅದನ್ನು ಸಂಸ್ಕರಿಸಿ ಇಂಧನವನ್ನಾಗಿ ಪರಿವರ್ತಿಸಲಾಗುತ್ತದೆ.
ಈ ಜೈವಿಕ ಇಂಧನ(Biofuels)ವು ಇತರೇ ಇಂಧನಗಳಂತೆ ಪರಿಸರಕ್ಕೆ ಮಾರಕವಲ್ಲ. ಪರಿಸರ ಸ್ನೇಹಿಯೂ ಹೌದು ಹಾಗೆಯೇ ರೈಲು ಚಲಿಸುತ್ತಿರುವಂತೆ ವಿಶೇಷ ಪರಿಮಳವನ್ನು ಪಸರಿಸುತ್ತದೆ. ಆಗ ಪ್ರಯಾಣಿಕರು, ಆಹಾ ಹತ್ತಿರದಲ್ಲಿ ರಾಮೆನ್ ರೆಸ್ಟೋರೆಂಟ್ ಇದೆ ಎಂದು ಮೂಗರಳಿಸಿದಲ್ಲಿ ಅಚ್ಚರಿಯೇನಲ್ಲ.
ಮನೆಯಲ್ಲಿ ಎಷ್ಟೇ ಲೆಕ್ಕ ಹಾಕಿ ಮಾಡಿದರೂ ಮಾಡಿದ ಅಡುಗೆ ಉಳಿಯುವುದೇ ಅಲ್ಲವೆ? ಉಳಿದದ್ದನ್ನು ಹೇಗೆ ಕೆಡಿಸುವುದು, ಹಾಗಂತ ತಂಗಳನ್ನು ತಿನ್ನುವುದು ಎಷ್ಟು ಆರೋಗ್ಯಕರ ಎಂಬ ಪ್ರಶ್ನೆ ಕಾಡುತ್ತದೆ. ಈ ದ್ವಂದ್ವದಲ್ಲಿಯೇ ಅಡುಗೆ ಕಸದಬುಟ್ಟಿ ಸೇರಿಯಾಗಿರುತ್ತದೆ. ಆದರೀಗ ಜಪಾನ್ನ ರೈಲೊಂದು ತಂಗಳು ರಾಮೆನ್ ನೂಡಲ್ಸ್ನ ಸಾರ ಮತ್ತು ಸೂಪ್ ಅನ್ನು ಜೈವಿಕ ಇಂಧನವನ್ನಾಗಿ ಪರಿವರ್ತಿಸಿದ್ದು ಒಂದು ಉತ್ತಮವಾದ ಆಲೋಚನೆ ಎಂದು ಹೇಳಬಹುದು.
ಅಮಟೆರಾಸು (Amaterasu) ಎಂಬ ಹೆಸರಿರುವ ಈ ರೈಲ್ವೆಯು 2005 ರಲ್ಲಿ ಟೈಫೂನ್‌ನಿಂದ ಉಂಟಾದ ಹಾನಿಯ ನಂತರ ಪ್ರಯಾಣಿಕರ ಸೇವೆಗಳನ್ನು ನಿಲ್ಲಿಸಿತು , ಒಂದು ವಿಭಾಗವನ್ನು ಪ್ರವಾಸಿ ಆಕರ್ಷಣೆಯಾಗಿ ಪುನಃ ತೆರೆಯಲಾಗಿದೆ. 5-ಕಿಲೋಮೀಟರ್ ಪ್ರಯಾಣದಲ್ಲಿ ಮೊದಲ 30 ನಿಮಿಷಗಳ ಸಮಯದಲ್ಲಿ ಸುಂದರ ಭೂದೃಶ್ಯವನ್ನು ತೋರಿಸಲಾಗುತ್ತದೆ. ಇದು ಸುಮಾರು 60 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದೆ. 30 ನಿಮಿಷಗಳ ಈ ಓಪನ್ ರೈಲುಪ್ರಯಾಣದ ಮೂಲಕ ಹಳ್ಳಿಪರಿಸರವನ್ನು ಆನಂದಿಸಬಹುದಾಗಿದೆ. 344 ಅಡಿ ಎತ್ತರದಲ್ಲಿರುವ ಸೇತುವೆಯ ಮೇಲೆ ಇದು ಚಲಿಸುವುದರಿಂದ ಸುಂದರ ಭೂದೃಶ್ಯವನ್ನು ನೋಡಬಹುದಾಗಿದೆ ಹಾಗೆಯೇ ಸುರಂಗ ಮಾರ್ಗದ ಅದ್ಭುತ ಅನುಭವವನ್ನು ಪ್ರಯಾಣಿಕರು ಹೊಂದಬಹುದಾಗಿದೆ.
ಇನ್ನು ವೆನೆಷಿಯನ್ ರೆಸ್ಟೊರೆಂಟ್ (Venetian Restaurant) ಮಾಲೀಕರು ಬೆಲೆಬಾಳುವ ದ್ರವವನ್ನು ಬದಿಗಿಟ್ಟು ಆವಿಗಳು ತಮ್ಮ ಮಾಲಿನ್ಯಕಾರಕ ಹೊರಸೂಸುವಿಕೆಯನ್ನು 15% ರಿಂದ 40% ರಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತಾರೆ. ಅಂತೆಯೇ, ಫ್ರಾನ್ಸ್‌ನಲ್ಲಿ, ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಫ್ರಾನ್ಸ್ ಈಗಾಗಲೇ ಅಡುಗೆ ಎಣ್ಣೆಯಿಂದ ಕೂಡಿದ ಸುಸ್ಥಿರ ಇಂಧನವನ್ನು ಬಳಸಿಕೊಂಡು ವಿಮಾನವನ್ನು ಹಾರಿಸುವಲ್ಲಿ ಯಶಸ್ವಿಯಾಗಿದೆ. ಮತ್ತು ಜಪಾನ್‌ನಲ್ಲಿರುವಂತೆಯೇ, ಟ್ರೋಜನ್-ಲೆಸ್-ಬೈನ್ಸ್‌ನಲ್ಲಿನ ಸಣ್ಣ ಪ್ರವಾಸಿ ರೈಲು, ಪಶ್ಚಿಮ ಚಾರೆಂಟೆ-ಮೆರಿಟೈಮ್ ಪ್ರದೇಶದಲ್ಲಿ ಸಹ ಬಳಸಿದ ಅಡುಗೆ ಎಣ್ಣೆಯಿಂದ ಚಲಿಸುತ್ತದೆ .
ಇದನ್ನೂ ಓದಿ: ಗ್ರಾಹಕರಿಗೆ ಖುಷಿಯ ಸುದ್ದಿ! ‘ಖಾದ್ಯ ತೈಲ’ ಬೆಲೆಯಲ್ಲಿ ಭಾರೀ ಇಳಿಕೆ
