Home » Karnataka Election 2023: ಬೈಂದೂರು ಬಿಜೆಪಿ ಅಭ್ಯರ್ಥಿ ಪರವಾಗಿ ಮತಬೇಟೆ ನಡೆಸಲು ಬಂದ ಬಿಗ್‌ ಬಾಸ್‌ ವಿನ್ನರ್‌ , ನಟ ಶೈನ್‌ ಶೆಟ್ಟಿ ನಟ ಪ್ರಮೋದ್ ಶೆಟ್ಟಿ!

Karnataka Election 2023: ಬೈಂದೂರು ಬಿಜೆಪಿ ಅಭ್ಯರ್ಥಿ ಪರವಾಗಿ ಮತಬೇಟೆ ನಡೆಸಲು ಬಂದ ಬಿಗ್‌ ಬಾಸ್‌ ವಿನ್ನರ್‌ , ನಟ ಶೈನ್‌ ಶೆಟ್ಟಿ ನಟ ಪ್ರಮೋದ್ ಶೆಟ್ಟಿ!

1 comment
Karnataka election 2023

Karnataka Election 2023: ಉಡುಪಿ : ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Election 2023) ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಮೇ 10 ರಂದು ರಾಜ್ಯದಲ್ಲಿ ಮತದಾನ ನಡೆಯಲಿದೆ. ಮೇ 13 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಹಿನ್ನೆಲೆ ಅಭ್ಯರ್ಥಿಗಳು ಪಕ್ಷದ ಗೆಲುವಿಗಾಗಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಅಭ್ಯರ್ಥಿಗಳಿಗೆ ಸಾಥ್ ಕೊಡಲು ಸಿನಿರಂಗದ ನಟ, ನಟಿಯರು ಜೊತೆಯಾಗಿದ್ದಾರೆ.

ಚುನಾವಣೆ ಹಿನ್ನೆಲೆ ಬೈಂದೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಪರ ಪ್ರಚಾರಕ್ಕೆ ಬಿಗ್’ಬಾಸ್‌ ವಿನ್ನರ್‌ ನಟ ಶೈನ್‌ ಶೆಟ್ಟಿ (Shine Shetty) ಹಾಗೂ ನಟ ಪ್ರಮೋದ್ ಶೆಟ್ಟಿ (Pramod Shetty) ನಿಂತಿದ್ದಾರೆ. ಅಭ್ಯರ್ಥಿ ಪರವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ.

ಉಡುಪಿಯಲ್ಲಿ (Udupi) ನಟ ಶೈನ್ ಶೆಟ್ಟಿ ಹಾಗೂ ನಟ ಪ್ರಮೋದ್ ಶೆಟ್ಟಿಯವರು ಬೈಂದೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಪರವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ‘ ಬೈಂದೂರಿನಲ್ಲಿ ಮತ್ತೆ ಬಿಜೆಪಿ ಗೆಲ್ಲಬೇಕು ಅಧಿಕಾರದ ಪತವನ್ನು ಹಿಡಿಯಬೇಕೆಂದು’ ಜನರಿಗೆ ಮನವಿ ಮಾಡಿದ್ದಾರೆ.

ನಟ ಶೈನ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಸಿ ವಿನ್ನರ್ ಆಗಿ ಹೊರಹೊಮ್ಮಿದರು. ಅಲ್ಲದೆ, ತಮ್ಮದೇ ಅಭಿಮಾನಿ ಬಳಗವನ್ಪೂ ಹೊಂದಿದ್ದಾರೆ. ಇನ್ನೂ ನಟ ಪ್ರಮೋದ್ ಶೆಟ್ಟಿ ಬಗ್ಗೆ ಹೇಳಬೇಕಾದರೆ, ಇವರು ಹಲವು ಸಿನಿಮಾಗಳಲ್ಲಿ ನಟಿಸಿದ್ದು, ಅದರಲ್ಲೂ ‘ಕಾಂತಾರ’ ದಲ್ಲಿ ಅಭಿನಯಿಸಿ ಜನಮನ ಗೆದ್ದಿದ್ದಾರೆ. ಇದೀಗ ಶೆಟ್ರುಗಳು ಉಡುಪಿಯಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ.

 

ಇದನ್ನೂ ಓದಿ:  ಅಬ್ಬಾಬ್ಬಾ ಏನಾಶ್ಚರ್ಯ! ರಾಮೆನ್​ ನೂಡಲ್ಸ್​, ಸೂಪ್​ನಿಂದ ಒಡುತ್ತೆ ಈ ರೈಲು! ಓಡೋಡುತ್ತ ಪರಿಮಳವನ್ನು ಪಸರಿಸುತ್ತೆ!

You may also like

Leave a Comment