Home » Karnataka Election 2023: ಬೆಂಗಳೂರಲ್ಲಿ ಪ್ರಿಯಾಂಕಾ ಗಾಂಧಿ ರೋಡ್ ಶೋ, ಈ ಸ್ಥಳಗಳಲ್ಲಿ ವಾಹನ ಸಂಚಾರ ನಿರ್ಬಂಧ!

Karnataka Election 2023: ಬೆಂಗಳೂರಲ್ಲಿ ಪ್ರಿಯಾಂಕಾ ಗಾಂಧಿ ರೋಡ್ ಶೋ, ಈ ಸ್ಥಳಗಳಲ್ಲಿ ವಾಹನ ಸಂಚಾರ ನಿರ್ಬಂಧ!

2 comments
Karnataka Election 2023

Priyanka Gandhi Vadra roadshow: ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Election 2023) ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಮೇ 10 ರಂದು ರಾಜ್ಯದಲ್ಲಿ ಮತದಾನ ನಡೆಯಲಿದೆ. ಮೇ 13 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಹಿನ್ನೆಲೆ ಅಭ್ಯರ್ಥಿಗಳು ಪಕ್ಷದ ಗೆಲುವಿಗಾಗಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಅಂತೆಯೇ ಬೆಂಗಳೂರಲ್ಲಿಂದು (Bengaluru) ಚುನಾವಣೆ ಹಿನ್ನೆಲೆ ಪ್ರಿಯಾಂಕಾ ಗಾಂಧಿ (Priyanka Gandhi Vadra roadshow) ರೋಡ್ ಶೋ ನಡೆಸಲಿದ್ದಾರೆ. ಹಾಗಾಗಿ ಹಲವೆಡೆ ವಾಹನ ಸಂಚಾರ ನಿರ್ಬಂಧವಾಗಲಿದೆ.

ಪ್ರಿಯಾಂಕ ಗಾಂಧಿ ರೋಡ್ ಶೋ ನಡೆಸಲಿದ್ದು, ರಾಹುಲ್ ಗಾಂಧಿ (Rahul Gandhi) ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ಮೂಲಕ ಇವರು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿ, ಮತ ಯಾಚನೆ ಮಾಡಲಿದ್ದಾರೆ. ಪ್ರಿಯಾಂಕಾ ಗಾಂಧಿ ಬೆಂಗಳೂರಿನ ಹಲವೆಡೆ ಪ್ರಚಾರ ನಡೆಸಲಿದ್ದಾರೆ. ಮೊದಲು ಮೂಡಬಿದಿರೆಯಲ್ಲಿ ಸಮಾವೇಶ ನಡೆಸುತ್ತಾರೆ ನಂತರ ಅವರು ಸಂಜೆ 5.30 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ರೋಡ್ ಶೋ ಬಳಿಕ ಶಿವಾಜಿನಗರ ಕ್ಷೇತ್ರದಲ್ಲಿ ರಾಹುಗಾಂಧಿ ಅವರೊಂದಿಗೆ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸುತ್ತಾರೆ.

ಪ್ರಿಯಾಂಕ ಗಾಂಧಿರವರ ರೋಡ್ ಶೋ ಹಾಗೂ ಸಾರ್ವಜನಿಕ ಸಭೆಗಳ ಹಿನ್ನೆಲೆಯಲ್ಲಿ ವಾಹನ ಸವಾರರ ಗಮನಕ್ಕೆ ಮಹತ್ವದ ಮಾಹಿತಿ ಇಲ್ಲಿದೆ. ಮೋಟಾರು ವಾಹನದಲ್ಲಿ ಪ್ರಯಾಣಿಸುವವರು ಹಾಗೂ ವಾಹನಗಳಲ್ಲಿ ಪ್ರತಿದಿನ ಸಂಚರಿಸುವ ನಾಗರೀಕರು ಕೆಲವು ರಸ್ತೆಗಳಲ್ಲಿ ಸಂಚರಿಸೇಡಿ. ಬೇರೆ ಮಾರ್ಗ ಉಪಯೋಗಿಸಿ ಎಂದು ತಿಳಿಸಲಾಗಿದೆ. ಯಾವೆಲ್ಲಾ ರಸ್ತೆಗಳಲ್ಲಿ ಸಂಚರಿಸಬಾರದು ಎಂಬುದರ ಮಾಹಿತಿ ಇಲ್ಲಿದೆ.

ಹಳೆ ವಿಮಾನ ನಿಲ್ದಾಣ ರಸ್ತೆ, ಸುರಂಜನ್ಹಾಸ್ ರಸ್ತೆ, ಮಹದೇವಪುರ ಮುಖ್ಯರಸ್ತೆ , ಮಾರತ್ತಹಳ್ಳಿ ಮುಖ್ಯರಸ್ತೆ ವರ್ತೂರು ಕೋಡಿಯಲ್ಲಿ ಸಂಜೆ 05.00 ರಿಂದ 07.00 ವರೆಗೆ ವಾಹನಗಳು ಸಂಚರಿಸುವಂತಿಲ್ಲ. ಹಾಗೆಯೇ ಸಂಜೆ 07.00 ರಿಂದ 09.00 ವರೆಗೆ
ಹೊಂಗಸಂದ್ರ, ಬೊಮ್ಮನಹಳ್ಳಿ ಮುಖ್ಯರಸ್ತೆ, ಬೇಗೂರು ರಸ್ತೆ, ಹೊಸೂರು ರಸ್ತೆಗಳಲ್ಲಿ ಸಂಚಾರ ನಿರ್ಬಂಧವಿರಲಿದೆ. ರಸಲ್ ಮಾರ್ಕೆಟ್ ಸ್ಟೇರ್ ಶಿವಾಜಿನಗರ, ಪೆರಿಯಾರ್ ವೃತ್ತ – ಪೆರಿಯಾರ್ ವೃತ್ತ- ಟ್ಯಾನರಿ ರಸ್ತೆಗಳಲ್ಲಿ ಸಂಜೆ 06.00 ರಿಂದ ರಾತ್ರಿ 10.00 ರವರೆಗೆ ಸಂಚರಿಸುವಂತಿಲ್ಲ.

ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಗುಂಡು ಹಾರಿಸಿ ರೌಡಿಶೀಟರ್‌ ಮರ್ಡರ್‌; ಕುಟುಂಬಸ್ಥರ ಆಕ್ರಂದನ

You may also like

Leave a Comment