Indian Railway : ಭಾರತದ ರೈಲ್ವೆ ಸಂಚಾರವು (Indian Railway) ಹೆಚ್ಚಿನ ಅಭಿವೃದ್ಧಿ (development ) ಹೊಂದಿದ್ದು, ಕೋಟ್ಯಾಂತರ ಜನರು ತಮ್ಮ ದಿನನಿತ್ಯ ಸಾರಿಗೆಯಾಗಿ ರೈಲನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಕಾರಣದಿಂದಲೇ ಇದನ್ನು ಭಾರತದ ಜೀವನ ರೇಖೆ ಎಂದೂ ಕರೆಯುತ್ತಾರೆ.
ಆದರೆ ರೈಲ್ವೆ ಸಂಚಾರ ಬಗೆಗಿನ ಕೆಲವು ವಿಚಾರ ನಮಗೆ ತಿಳಿದಿರುವುದಿಲ್ಲ. ಅಂದರೆ ರೈಲ್ವೇ ನಿಲ್ದಾಣದಲ್ಲಿ ಅನೇಕ ಇಂಟ್ರೆಸ್ಟಿಂಗ್ ಫ್ಯಾಕ್ಟ್ಗಳು ನಡೆಯುತ್ತಿರುತ್ತದೆ. ಬನ್ನಿ ನಾವು ಚಲಿಸುತ್ತಿರುವ ರೈಲಿನ ಹೆಡ್ ಲೈಟ್ಗಳ ಬಣ್ಣಗಳ ಬಗ್ಗೆ ನೋಡೋಣ.
ರೈಲುಗಳಲ್ಲಿ ಎಷ್ಟು ಹೆಡ್ ಲೈಟ್ ಗಳಿವೆ, ಇದರ ಅರ್ಥವೇನು ಎಂಬ ಕುತೂಹಲ ನಿಮಗೆ ಇರಬಹುದು. ಹೌದು, ರೈಲಿನ ಲೋಕೋಮೋಟಿವ್ನಲ್ಲಿ ಮೂರು ವಿಧದ ಲೈಟ್ಗಳಿವೆ. ಈ ದೀಪಗಳಲ್ಲಿ ಮೊದಲ ಬಲ್ಬ್ ರೈಲಿನ ಹೆಡ್ಲೈಟ್ ಆಗಿದ್ದರೆ, ಉಳಿದ ಎರಡು ದೀಪಗಳು ಬಿಳಿ ಮತ್ತು ಇನ್ನೊಂದು ಕೆಂಪು ಬಣ್ಣದಲ್ಲಿದೆ. ಈ ದೀಪಗಳನ್ನು ಲೋಕೋಮೋಟಿವ್ ಸೂಚಕಗಳು ಎಂದು ಕರೆಯಲಾಗುತ್ತದೆ.
ಮೊದಲೆಲ್ಲಾ ರೈಲುಗಳು ಲೋಕೋಮೋಟಿವ್ಗಳಲ್ಲಿ, ಹೆಡ್ಲೈಟ್ಗಳನ್ನು ಮೇಲಕ್ಕೆ ಜೋಡಿಸಲಾಗುತ್ತಿತ್ತು. ಆದರೆ ಈಗಿನ ಹೊಸ ಲೋಕೋಮೋಟಿವ್ಗಳಲ್ಲಿ, ಈ ಹೆಡ್ಲೈಟ್ಗಳನ್ನು ಮಧ್ಯದಲ್ಲಿ ಬದಲಾಯಿಸಲಾಗಿದೆ.
ರೈಲಿನ ಲೊಕೊಮೊಟಿವ್ ಮುಂದಕ್ಕೆ ಚಲಿಸುವ ಬದಲು ದಿಕ್ಕಿನಲ್ಲಿ ಚಲಿಸುವ ಸಿಬ್ಬಂದಿಗೆ ತಿಳಿಸಲು ಕೆಂಪು ದೀಪವನ್ನು ಆನ್ ಮಾಡಲಾಗಿದೆ. ಅದೇ ರೀತಿ ಲೊಕೊಮೊಟಿವ್ ಮುಂದಕ್ಕೆ ಚಲಿಸಿದಾಗ ಬಿಳಿ ಲೈಟ್ ಅನ್ನು ಆನ್ ಮಾಡುತ್ತಾರೆ.
ಇನ್ನು ಲೋಕೋಮೋಟಿವ್ನ ಹೆಡ್ಲೈಟ್ಗಳು 24 V DC ಕರೆಂಟ್ನಿಂದ ಕಾರ್ಯನಿರ್ವಹಿಸುತ್ತದೆ. ಲೊಕೊ ಪೈಲಟ್ಗೆ ಹರಡಿರುವ ಹಳಿಗಳ ನ್ನು ಗಮನಿಸಲು ಸಹಕಾರಿಯಾಗಿದ್ದು, ಇನ್ನು ಈ ದೀಪಗಳು 350 ಮೀಟರ್ ವರೆಗೆ ಫೋಕಸ್ ನೀಡಲಾಗುವುದು. ಆದ್ದರಿಂದ ಲೊಕೊ ಪೈಲಟ್ ರಾತ್ರಿಯಲ್ಲಿ ನಿರ್ದಿಷ್ಟ ದೂರದವರೆಗೆ ಹಳಿಯನ್ನು ನೋಡಬಹುದಾಗಿದೆ.
ಇದನ್ನೂ ಓದಿ:Rakshita Suresh: ವಿದೇಶದಲ್ಲಿ ಭೀಕರ ರಸ್ತೆ ಅಪಘಾತಕ್ಕೊಳಗಾದ ಹೆಸರಾಂತ ಗಾಯಕಿ ರಕ್ಷಿತಾ ಸುರೇಶ್!
