Home » Four Pregnant Sisters: ಒಂದೇ ಸಮಯದಲ್ಲಿ ಗರ್ಭಿಣಿಯರಾದ ನಾಲ್ವರು ಸಹೋದರಿಯರು! ಈ ಬಗ್ಗೆ ನಾಲ್ವರು ಏನಂತಾರೆ?

Four Pregnant Sisters: ಒಂದೇ ಸಮಯದಲ್ಲಿ ಗರ್ಭಿಣಿಯರಾದ ನಾಲ್ವರು ಸಹೋದರಿಯರು! ಈ ಬಗ್ಗೆ ನಾಲ್ವರು ಏನಂತಾರೆ?

1 comment
Four Pregnant Sisters

Four Pregnant Sisters: ಪ್ರಪಂಚದಲ್ಲಿ ಅದೆಷ್ಟೋ ಮಹಿಳೆಯರು (women) ಒಂದೇ ದಿನ ಗರ್ಭಿಣಿಯಾಗುತ್ತಾರೆ. ಅಲ್ಲದೇ ಲಕ್ಷಾಂತರ ಮಕ್ಕಳು ಒಂದೇ ದಿನ ಜನಿಸುತ್ತಾರೆ. ಆದರೆ ಸಹೋದರಿಯರು ಒಂದೇ ಸಮಯದಲ್ಲಿ ಗರ್ಭಿಣಿಯಾಗೋದು (Four Pregnant Sisters) ಎಲ್ಲಾದರೂ ಕೇಳಿದ್ದೀರಾ? ಇಲ್ಲ ಅಲ್ವಾ!! ಸದ್ಯ ಒಂದೇ ಬಾರಿಗೆ ನಾಲ್ವರು ಸಹೋದರಿಯರು ಗರ್ಭಿಣಿಯರಾದ ಅಪರೂಪದ ಘಟನೆ ಬೆಳಕಿಗೆ ಬಂದಿದೆ.

ಆ ನಾಲ್ವರು ಸಹೋದರಿಯರ ಹೆಸರು, ಕೇಲೀ ಸ್ಟೀವರ್ಟ್, ಜೇ ಗುಡ್‌ವಿಲ್ಲಿ, ಕೆರ್ರಿ-ಆನ್ ಥಾಮ್ಸನ್, ಮತ್ತು ಆಮಿ ಗುಡ್ವಿಲ್ಲಿ. ಇವರು ಒಟ್ಟಿಗೆ ಗರ್ಭಿಣಿಯರಾಗಿದ್ದಾರೆ (pregnant). ಕೇಳಲು ಆಶ್ಚರ್ಯಕರ ಹಾಗೂ ವಿಸ್ಮಯ ಎನಿಸಿದರೂ ಸತ್ಯ!. ಆದರೆ ಇವರ ಹೆರಿಗೆ ದಿನಾಂಕ ಮಾತ್ರ ಬೇರೆ ಬೇರೆ ಆಗಿದೆ. ಒಟ್ಟಿಗೆ ಗರ್ಭಿಣಿಯರಾಗಿರುವ ವಿಚಾರ ಕುಟುಂಬಸ್ಥರಿಗೆ ಆಶ್ಚರ್ಯದ ಜೊತೆಗೆ ಸಂತೋಷವನ್ನುಂಟು ಮಾಡಿದೆ.

ಈ ಬಗ್ಗೆ ಸಹೋದರಿಯರ ತಾಯಿ ಖುಷಿಯಿಂದ ಮಾತನಾಡಿದ್ದು, “ಜನಿಸುತ್ತಿರುವ ಎಲ್ಲಾ ಮಕ್ಕಳು ಒಂದೇ ವಯಸ್ಸಿನ ಸೋದರಸಂಬಂಧಿಗಳನ್ನು ಹೊಂದಿರುತ್ತಾರೆ. ಈ ವರ್ಷ ಇನ್ನೂ ನಾಲ್ಕು ಮಕ್ಕಳು ನಮ್ಮ ಕುಟುಂಬಕ್ಕೆ ಬರಲಿದೆ. ಈ ವಿಚಾರವಾಗಿ ನಾವು ತುಂಬಾ ಸಂತೋಷವಾಗಿದ್ದೇವೆ” ಎಂದು ಹೇಳಿದರು.

ನಾಲ್ವರು ಗರ್ಭಿಣಿ ಸಹೋದರಿಯರು “ ನಾವು ನಾಲ್ವರು ಸಹೋದರಿಯರು ಹತ್ತಿರದಲ್ಲಿ ವಾಸಿಸುತ್ತೇವೆ. ಪ್ರತಿದಿನ ಐದು ನಿಮಿಷಗಳ ಕಾಲ ನಡೆಯುತ್ತೇವೆ. ನಮ್ಮ ಅಮ್ಮ ತುಂಬಾ ಉತ್ಸುಕರಾಗಿದ್ದಾರೆ. ಮಕ್ಕಳು ನರ್ಸರಿ ಮತ್ತು ಶಾಲೆಗೆ ಹೋದ ನಂತರ ಎಲ್ಲರೂ ಒಟ್ಟಿಗೆ ಒಂದೇ ತರಗತಿಯಲ್ಲಿರುತ್ತಾರೆ ಎಂಬ ವಿಚಾರ ಖುಷಿಕೊಡುತ್ತದೆ” ಎಂದು ಹೇಳಿಕೊಂಡಿದ್ದಾರೆ. ಇನ್ನು ಈ ನಾಲ್ವರು ಸಹೋದರಿಯರಲ್ಲಿ ಕೇಲೀ ಮತ್ತು ಜೇ ಗಂಡುಮಕ್ಕಳ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಿದರು.

ಸದ್ಯ ಈ ವಿಚಾರ ವಿಸ್ಮಯವೆನಿಸಿದರೂ ಕುಟುಂಬಸ್ಥರಿಗೆ ಖುಷಿ ಉಂಟುಮಾಡಿದೆ. ನಾಲ್ವರು ಮಕ್ಕಳು ಒಟ್ಟಿಗೆ ಬೆಳೆಯುತ್ತಾರೆ. ಸ್ನೇಹಿತರ ಅವಶ್ಯಕತೆ ಇರುವುದಿಲ್ಲ. ಎಲ್ಲೇ ಹೋದರು ಜೊತೆಗೆ 3 ಜನರಿರುತ್ತಾರೆ. ಈ ವಿಚಾರಗಳು ನಾಲ್ವರು ಸಹೋದರಿಯರಿಗೆ ಖುಷಿ ನೀಡಿದೆ.

ಇದನ್ನೂ ಓದಿ:Indian Railway: ರೈಲಿನ ಇಂಜಿನ್‌ನಲ್ಲಿ ಹಲವಾರು ಬಣ್ಣದ ಹೆಡ್‌ಲೈಟ್‌ ಏಕಿದೆ? ಇವುಗಳ ಅರ್ಥವೇನು?

You may also like

Leave a Comment