Home » Mahesh Tilekhar: ಕರೀನಾ ಕಪೂರ್ ದುರಹಂಕಾರಿ ಎಂದು ಹೇಳಿ ಆಕೆಯ ಅಸಲಿ ಮುಖ ಬಿಚ್ಚಿಟ್ಟ ನಿರ್ಮಾಪಕ ಮಹೇಶ್ ತಿಲೇಕರ್!

Mahesh Tilekhar: ಕರೀನಾ ಕಪೂರ್ ದುರಹಂಕಾರಿ ಎಂದು ಹೇಳಿ ಆಕೆಯ ಅಸಲಿ ಮುಖ ಬಿಚ್ಚಿಟ್ಟ ನಿರ್ಮಾಪಕ ಮಹೇಶ್ ತಿಲೇಕರ್!

0 comments
Mahesh Tilekhar

Mahesh Tilekhar: ಬಾಲಿವುಡ್​ ನಟಿ ಕರೀನಾ ಕಪೂರ್​ (Kareena Kapoor) ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದು, ಸಾಕಷ್ಟು ಅಭಿಮಾನಿ ಬಳಗವನ್ನು ಗಳಿಸಿದ್ದಾರೆ. ಎರಡು ಮಕ್ಕಳ ತಾಯಿಯಾದರೂ ಸಿನಿಮಾರಂಗದಲ್ಲಿ ಕರೀನಾಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ಸದ್ಯ ವೈರಲ್ ಆಗಿರುವ ವಿಚಾರ ಏನೆಂದರೆ,
ಮರಾಠಿ ಚಿತ್ರಗಳ ನಿರ್ಮಾಪಕ ಮಹೇಶ್ ತಿಲೇಕರ್ (Mahesh Tilekhar) ಅವರು ಕರೀನಾ ತಮ್ಮ ಅಭಿಮಾನಿಗಳನ್ನು ಕಡೆಗಣಿಸುತ್ತಾರೆ ಮತ್ತು ಸಹ ನಟರನ್ನು ನಿರ್ಲಕ್ಷಿಸುತ್ತಾರೆ. ಆಕೆ ದುರಹಂಕಾರಿ, ಆಕೆಯ ಅಸಲಿ ಮುಖ ಬೇರೆನೇ ಇದೆ ಎಂದು ಹೇಳುವ ಮೂಲಕ ಕರೀನಾ ಕಪೂರ್ ಅಸಲಿ ಮುಖದ ಗುಟ್ಟು ಬಿಚ್ಚಿಟ್ಟಿದ್ದಾರೆ.

ಮಹೇಶ್ ತಿಲೇಕರ್ ಕರೀನಾ ಕಪೂರ್ ನಡವಳಿಕೆ ಬಗ್ಗೆ ಹೇಳಿದ್ದು, “ಇತ್ತೀಚೆಗೆ, ನಾನು ಇನ್ಫೋಸಿಸ್ (Infosys) ಸಂಸ್ಥಾಪಕ ನಾರಾಯಣ ಮೂರ್ತಿ (Narayana murthi) ಅವರ ಸಂದರ್ಶನವನ್ನು ನೋಡುತ್ತಿದ್ದೆ, ಅದರಲ್ಲಿ ಅವರು ಲಂಡನ್‌ನಿಂದ ಭಾರತಕ್ಕೆ (India) ಹಿಂತಿರುಗುವಾಗ ತಾವು ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ನೋಡಿರುವುದಾಗಿ ಹೇಳಿಕೊಂಡರು. ಆದರೆ ಅವರು ಈ ಮಾತನ್ನು ತುಂಬಾ ನೋವಿನಿಂದ ಹೇಳಿದ್ದರು. ಯಾಕೆಂದರೆ, ವಿಮಾನದಲ್ಲಿ ಅವರು ನಟಿ ಕರೀನಾ ಅವರನ್ನು ನೋಡಿದ್ದರು. ಕರೀನಾ ಕಪೂರ್ ನಾರಾಯಣ ಮೂರ್ತಿ ಅವರ ಮುಂದೆ ಕುಳಿತಿದ್ದರು. ಈ ವೇಳೆ, ನಾರಾಯಣ ಮೂರ್ತಿ ಅವರನ್ನು ಭೇಟಿ ಮಾಡಲು ಅನೇಕ ಜನರು ಬಂದರು. ಅವರ ಜೊತೆ ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಕರೀನಾ ಮಾತ್ರ ತಮ್ಮ ಬಳಿ ಬಂದ ಎಲ್ಲಾ ಅಭಿಮಾನಿಗಳನ್ನು ನಿರ್ಲಕ್ಷಿಸಿದ್ದರು, ಅವರನ್ನು ಕಡೆಗಣಿಸಿದ್ದರು ಎಂದು ನಾರಾಯಣ ಮೂರ್ತಿ (Narayana Murthy) ಬೇಸರಿಸಿಕೊಂಡು ಹೇಳಿದ್ದರು ಎಂದು ಮಹೇಶ್​ ತಿಲೇಕರ್​ ಹೇಳಿದರು. ಅಲ್ಲದೆ, ಅಂತಹ ದುರಹಂಕಾರದಿಂದ ಏನು ಪ್ರಯೋಜನ? ಎಂದು ಪ್ರಶ್ನೆಯೂ ಮಾಡಿದರು”.

“ಎಂಟು ವರ್ಷಗಳ ಹಿಂದೆ, ನಾವು ವಿಮಾನ ನಿಲ್ದಾಣದಲ್ಲಿ ಚೆಕ್ -ಇನ್ ಲೈನ್‌ನಲ್ಲಿ ಕಾಯುತ್ತಿದ್ದೆವು, ಆ ವೇಳೆ ನಮ್ಮ ಕಾರ್ಯಕ್ರಮದ ನಟಿಯೊಬ್ಬರ ಪಕ್ಕದಲ್ಲಿ ಕರೀನಾ ನಿಂತಿದ್ದರು. ಆ ನಟಿ ಕರೀನಾ ಅವರನ್ನು ಕಂಡು ಖುಷಿಯಿಂದ ಆಕೆಯನ್ನು ಭೇಟಿಯಾಗಲು, ಸೆಲ್ಫಿ ತೆಗೆಯಲು ಹೋದರು. ಆದರೆ, ಕರೀನಾ ನಟಿಯನ್ನು ನಿರ್ಲಕ್ಷಿಸಿದರು, ಸೆಲ್ಫಿ ಗೆ ನಿರಾಕರಿಸಿದರು. ಕರೀನಾ ಅವರ ಈ ವರ್ತನೆಯಿಂದ ನಟಿ ಬೇಸರಗೊಂಡರು. ಅವರೇನು ಸಾಮಾನ್ಯ ಯುವತಿಯಲ್ಲ, ಕರೀನಾ ಕಪೂರ್ ಅವರಂತೆಯೇ ಅವರೂ ಕೂಡ ಜನಪ್ರಿಯ ಚಿತ್ರದಲ್ಲಿ ಕೆಲಸ ಮಾಡಿದ ನಟಿ. ಆದರೆ ಕರೀನಾ ಮಾತ್ರ ಅವರತ್ತ ತಿರುಗಿಯೂ ನೋಡಲಿಲ್ಲ” ಎಂದು ಮಹೇಶ್​ ಕಿಡಿಕಾರಿದರು.

ಸೆಲೆಬ್ರಿಟಿಗಳಿಗೆ ತಮ್ಮ ಸಿನಿಮಾದ ಪ್ರಚಾರದ ವೇಳೆ ಅಭಿಮಾನಿಗಳನ್ನು ಭೇಟಿ ಮಾಡಲು ಯಾವುದೇ ಸಮಸ್ಯೆಯಿಲ್ಲ. ಫ್ಯಾನ್ಸ್ ಜೊತೆ ಬೇಕಾದಷ್ಟು ಸೆಲ್ಫಿ ಕ್ಲಿಕ್ಕಿಸುತ್ತಾರೆ, ಮಾತನಾಡುತ್ತಾರೆ.
ಆದರೆ, ಉಳಿದ ಸಮಯದಲ್ಲಿ ಅಭಿಮಾನಿಗಳನ್ನು ಕಡೆಗಣಿಸುತ್ತಾರೆ. ಕರೀನಾ ಕಪೂರ್ ಕೂಡ ಅಂತಹ ನಟಿಯರಲ್ಲಿ ಒಬ್ಬರು ಎಂದು ಮಹೇಶ್ ಹೇಳಿದರು.

 

ಇದನ್ನು ಓದಿ: Karnataka Assembly Election 2023: ಮತದಾನ ಮಾಡುವವರಿಗೆ ಉಚಿತ ಹೋಟೆಲ್‌ ಊಟದ 

You may also like

Leave a Comment