Home » Marriage Twist: ತಂಗಿಗೆ ಹಾರ ಹಾಕಿ, ಅಕ್ಕನಿಗೆ ತಾಳಿ ಕಟ್ಟಿದ ವರ! ಮದುವೆ ಮಂಟಪದಲ್ಲಿ ಕಾದಿತ್ತು ಶಾಕ್!

Marriage Twist: ತಂಗಿಗೆ ಹಾರ ಹಾಕಿ, ಅಕ್ಕನಿಗೆ ತಾಳಿ ಕಟ್ಟಿದ ವರ! ಮದುವೆ ಮಂಟಪದಲ್ಲಿ ಕಾದಿತ್ತು ಶಾಕ್!

by ಹೊಸಕನ್ನಡ
0 comments
Marriage Twist

Marriage Twist: ಅಂದು ಎರಡೂ ಮನೆಗಳಲ್ಲೂ ಮದುವೆ ಸಂಭ್ರಮ. ಇನ್ನೇನು ಕೆಲವೇ ಸಮಯದಲ್ಲಿ ಎಲ್ಲವೂ ಸುಸೂತ್ರವಾಗಿ ಮುಗಿದು ಹೋಗುತ್ತದೆ ಎನ್ನುವಾಗ ಮದುವೆ ಮಂಟಪದಲ್ಲೇ ವಿಲಕ್ಷಣ ಘಟನೆಯೊಂದು ನಡೆದೇ ಬಿಟ್ಟಿತು. ಏನಂದ್ರೆ ಮದುವೆ ಆಗಬೇಕಾಗಿದ್ದು ಒಬ್ಬಳಿಗೆ, ಆದರೆ ವರ ತಾಳಿ ಕಟ್ಟಿದ್ದು ಮತ್ತೊಬ್ಬಳಿಗೆ!

ಹೌದು, ಮದುವೆ ಮಂಟಪದಲ್ಲಿ ವರನೊಬ್ಬ ಹಾರ ಬದಲಾಯಿಸಿಕೊಂಡು ಬಳಿಕ ತಾಳಿ ಮಾತ್ರ ಮದುಮಗಳ ಸಹೋದರಿಗೆ ಕಟ್ಟಿದ (Marriage Twist) ವಿಲಕ್ಷಣ ಘಟನೆಯೊಂದು ನಡೆದಿದ್ದು ಎಲ್ಲರೂ ದಂಗಾಗುವಂತೆ ಮಾಡಿದೆ.

ಬಿಹಾರ (Bihar) ದ ಸರನ್(Saran) ಜಿಲ್ಲೆಯ ಛಪ್ರಾ(Chapra) ನಿವಾಸಿ ರಾಜೇಶ್ ಕುಮಾರ್(Rakesh Kumar) ಗೆ, ತನ್ನ ಗೆಳತಿ ಪುತುಲ್(Putul) ಎಂಬಾಕೆಯ ಸಹೋದರಿ ರಿಂಕು ಕುಮಾರಿ(Rinku Kumari) ಎಂಬಾಕೆಯ ಜೊತೆ ಮದುವೆ ನಿಶ್ಚಯವಾಗಿತ್ತು. ಅಂತೆಯೇ ಮದುವೆಗೆ ಎಲ್ಲಾ ತಯಾರಿಗಳು, ಸಂಪ್ರದಾಯಗಳು ನಡೆಯುತ್ತಿದ್ದವು. ಇನ್ನೇನು ಹಾರ ಬದಲಾಯಿಸಿಕೊಂಡು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಒಂದು ಫೋನ್ ಕಾಲ್ ಬಂದು ಇಡೀ ಲೆಕ್ಕಾಚಾರವೇ ತಲೆಕೆಳಗಾಗುವಂತಾಗಿದೆ.

ಅಂದಹಾಗೆ ಆ ಫೋನ್ ಕಾಲ್, ತಾನು ಮದುವೆ ಆಗುತ್ತಿರೋ ವಧುವಿನ ಅಕ್ಕ, ಅಂದರೆ ತನ್ನ ಗೆಳತಿ ಪುತುಲ್ ನಿಂದ ಬಂದಿದೆ. ಆದರೆ ಅದು ಈ ಕರೆಯು ಬೆದರಿಕೆ ಕರೆಯಾಗಿತ್ತು! ಹೌದು, ನೀನು ತಂಗಿಯನ್ನು ಮದುವೆಯಾದರೆ ನಾನು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪುತುಲ್ ರಾಕೇಶ್ ಗೆ ಬೆದರಿಕೆ ಹಾಕಿದ್ದಾಳೆ.

ಇದನ್ನು ಕೆಳಿದ ರಾಕೇಶ್(Rakesh) ಕೂಡಲೇ ಮದುವೆ ನಿಲ್ಲಿಸಿದ್ದು, ಸ್ಥಳದಿಂದ ತೆರಳಿದ್ದಾನೆ. ವರನ ಈ ನಡೆ ಕಂಡು ಮದುವೆಗೆ ಆಗಮಿಸಿದವರಿಗೆ ಶಾಕ್ ನೀಡಿತ್ತು. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ರಾಜೇಶ್ ಸ್ಪಷ್ಟನೆ ನೀಡಿದ್ದಾನೆ. ಛಾಪ್ರಾದಲ್ಲಿ ನಾನು ಹಾಗೂ ಪುತುಲ್ ಆಗಾಗ ಭೇಟಿಯಾಗುತ್ತಿದ್ದೆವು. ಬಳಿಕ ನಾನು ಆಕೆಯನ್ನು ಪ್ರೀತಿ(Love) ಸುತ್ತಿದ್ದೆ ಎಂದು ತನ್ನ ಕುಟುಂಬಕ್ಕೆ ತಿಳಿಸಿದ್ದಾನೆ. ಇತ್ತ ರಿಂಕು ಜೊತೆ ಮದುವೆ ಫಿಕ್ಸ್ ಆಗುತ್ತಿದ್ದಂತೆಯೇ ಪುತುಲ್ ವಿಚಲಿತಗೊಂಡಿದ್ದಾಳೆ. ಹೀಗಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಳು ಎಂದು ಕೂಡ ತಿಳಿಸಿದ್ದಾನೆ.

ರಾಜೇಶ್ ಈ ರೀತಿ ಹೇಳುತ್ತಿದ್ದಂತೆಯೇ ಎರಡೂ ಕುಟುಂಬಗಳ ನಡುವೆ ಮಾತಿಗೆ ಮಾತು ಬೆಳೆದಿದೆ. ಜಗಳ ಜೋರಾಗುತ್ತಿದ್ದಂತೆಯೇ ಮದುವೆಗೆ ಆಗಮಿಸಿದ ಕೆಲ ಸಂಬಂಧಿಕರು ಕೂಡಲೇ ಪೊಲೀಸರಿ(Police) ಗೆ ಮಾಹಿತಿ ರವಾನಿಸಿ ಸ್ಥಳಕ್ಕೆ ಕರೆಸುವ ಮೂಲಕ ಪರಿಸ್ಥಿತಿ ತಿಳಿಗೊಳಿಸಲು ಮನವಿ ಮಾಡಿದ್ದಾರೆ. ಅಂತೆಯೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಎರಡೂ ಕುಟುಂಬಗಳನ್ನು ಕುಳಿತುಕೊಳ್ಳಿಸಿ ಮಾತುಕತೆ ನಡೆಸಿದ್ದಾರೆ. ಮಾತುಕತೆಯ ಬಳಿಕ ರಾಜೇಶ್, ರಿಂಕು ಬದಲು ಪುತುಲ್ ಗೆ ತಾಳಿ ಕಟ್ಟಿದ್ದಾನೆ. ಈ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.

ಇದನ್ನೂ ಓದಿ: An older brother who killed his menopausal sister : ಮೊದಲ ಬಾರಿ ಪೀರಿಯಡ್ ಆದ ತಂಗಿ! ರಕ್ತ ನೋಡಿ ಅನುಮಾನಿಸಿ, ಬರ್ಬರವಾಗಿ ಕೊಲೆಗೈದ ಪಾಪಿ ಅಣ್ಣ!

You may also like

Leave a Comment