Home » White Hair Problem: ಕೂದಲು ಬಿಳಿ ಬಣ್ಣಕ್ಕೆ ತಿರುಗಲು ಕಾರಣವೇನು? ಸಂಪೂರ್ಣ ಮಾಹಿತಿ ಇಲ್ಲಿದೆ

White Hair Problem: ಕೂದಲು ಬಿಳಿ ಬಣ್ಣಕ್ಕೆ ತಿರುಗಲು ಕಾರಣವೇನು? ಸಂಪೂರ್ಣ ಮಾಹಿತಿ ಇಲ್ಲಿದೆ

0 comments
White Hair Problem

White Hair Problem: ವಯಸ್ಸಾದಂತೆ ಕೂದಲು ಬೆಳ್ಳಗಾಗುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಚಿಗುರು ಮೀಸೆಯ ಯುವಕರ ಕೂದಲು ಬೆಳ್ಳಗಾಗುತ್ತಿದೆ. ಹಲವರಲ್ಲಿ ಟೆನ್ಶನ್ ನಿಂದಾಗಿಯೂ ಬಿಳಿ ಕೂದಲಿನ ಸಮಸ್ಯೆ ಉಂಟಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಹೀಗಾಗಿ ಬಿಳಿ ಕೂದಲಿನ ಸಮಸ್ಯೆಯನ್ನು ಹೋಗಲಾಡಿಸಲು ಕಲರಿಂಗ್​ ಪೌಡರ್​ಗಳನ್ನು ಬಳಸುತ್ತಾರೆ. ಅನೇಕರು ಕೂದಲನ್ನು ಕಪ್ಪಗಾಗಿಸಲು ಕೆಮಿಕಲ್​ ಮಿಶ್ರಿತ ಹೇರ್​ ಕಲರ್​ಗಳನ್ನು ತಲೆಗೂದಲಿಗೆ ಬಳಿದುಕೊಳ್ಳುತ್ತಾರೆ. ಆದರೆ ಬಿಳಿ ಕೂದಲಿನ ಸಮಸ್ಯೆ (White Hair Problem) ಯಾಕೆ ಬರುತ್ತದೆ? ಕೂದಲು ಬಿಳಿ ಬಣ್ಣಕ್ಕೆ ತಿರುಗಲು ಕಾರಣವೇನು? ಸಂಪೂರ್ಣ ಮಾಹಿತಿ ಇಲ್ಲಿದೆ.

ಮುಖ್ಯವಾಗಿ ಮೆಲನಿನ್ ಉತ್ಪಾದಿಸುವ ಕಾಂಡಕೋಶಗಳು ಸರಿಯಾಗಿ ಕೆಲಸ ಮಾಡದ ಕಾರಣ ಕೂದಲು ಬೆಳ್ಳಗಾಗುತ್ತದೆ ಎಂದು ಕೆಲವು ಅಧ್ಯಯನಗಳು ಹೇಳುತ್ತವೆ. ಪ್ರೋಟೀನ್ ಕೊರತೆ ಮತ್ತು ಕಬ್ಬಿಣಾಂಶದ ಕೊರತೆಯಿಂದಲೂ ಕೂದಲು ಬೆಳ್ಳಗಾಗುತ್ತವೆ ಎಂದು ಇತರ ಅಧ್ಯಯನಗಳು ಹೇಳಿದೆ.

ವರದಿ ಪ್ರಕಾರ, ಮೆಲನಿನ್‌ನಲ್ಲಿ ಯುಮೆಲನಿನ್ ಮತ್ತು ಫಿಯೋಮೆಲನಿನ್ ಎಂಬ 2 ವಿಧಗಳಿವೆ. ಸಾಮಾನ್ಯವಾಗಿ ಯೂಮೆಲನಿನ್’ನಿಂದಾಗಿ ಕೂದಲಿನ ಬಣ್ಣ ಕಪ್ಪಾಗುತ್ತದೆ. ಯುಮೆಲನಿನ್ ಪ್ರಮಾಣವು ಕಡಿಮೆಯಿದ್ದರೆ ಕೂದಲಿನ ಬಣ್ಣವು ಬದಲಾಗುತ್ತದೆ, ಬಿಳಿಯಾಗುತ್ತದೆ. ವ್ಯಕ್ತಿಯಲ್ಲಿ ಮೆಲನಿನ್ ಮಟ್ಟದಲ್ಲಿನ ಇಳಿಕೆಯಾದ್ರೆ ಕೂದಲಿನ ಬಣ್ಣವೂ ಬದಲಾಗುತ್ತಲೇ ಇರುತ್ತದೆ.

ಇನ್ನು ಕೂದಲಲ್ಲಿ ಮೆಲನಿನ್ ಕಡಿಮೆ ಅಥವಾ ಉತ್ಪಾದನೆಯಾಗದಿರಲು ದೊಡ್ಡ ಕಾರಣ ವಯಸ್ಸು ಹೆಚ್ಚುತ್ತಿರುವುದು. ವಯಸ್ಸಾದಂತೆ ಮೆಲನಿನ್ ಉತ್ಪಾದನೆಯು ಕಡಿಮೆಯಾಗಲು ಪ್ರಾರಂಭಿಸುತ್ತದೆ, ಇದರಿಂದ ಕೂದಲು ಬಿಳಿಯಾಗಲು ಪ್ರಾರಂಭಿಸುತ್ತದೆ.

ವೃದ್ಧಾಪ್ಯ, ಅನುವಂಶಿಕತೆ, ರೋಗ, ಒತ್ತಡ, ಪೌಷ್ಟಿಕಾಂಶದ ಕೊರತೆ, ವಿಟಮಿನ್ ಬಿ-12 ಕೊರತೆ, ದೇಹದಲ್ಲಿ ಹಾರ್ಮೋನ್ ಬದಲಾವಣೆಗಳು, ಹೆಚ್ಚಿನ ದೈಹಿಕ ಅಥವಾ ಮಾನಸಿಕ ಒತ್ತಡ, ಸೂರ್ಯನ ಬೆಳಕು ಅಥವಾ ಧೂಳಿಗೆ ಒಡ್ಡಿಕೊಳ್ಳುವುದು ಮತ್ತು ರಾಸಾಯನಿಕ ಪದಾರ್ಥಗಳಿಂದಲು ಕೂಡ ಕೂದಲು ಬಿಳಿಯಾಗುತ್ತದೆ.

ಅನೇಕ ಜನರು ಆನುವಂಶಿಕ ಕಾರಣಗಳಿಂದ ಬೂದು ಕೂದಲು ಪಡೆಯುತ್ತಾರೆ. ಚಿಕ್ಕ ಮಕ್ಕಳಿಗೂ ಬಿಳಿ ಕೂದಲು ಬರಲಾರಂಭಿಸುತ್ತದೆ. ಆದರೆ, ಇದು ಕ್ವಾಶಿಯೋರ್ಕರ್ ಕಾಯಿಲೆಯಿಂದ ಉಂಟಾಗುತ್ತದೆ. ಹೈಪೋಥೈರಾಯ್ಡಿಸಮ್ ಸಮಸ್ಯೆಯಿಂದ ಬಳಲುತ್ತಿರುವ ಜನರು ಸಹ ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಡೌನ್ ಸಿಂಡ್ರೋಮ್ ಅನೇಕ ಬಿಳಿ ಕೂದಲಿನ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಕಳಪೆ ಆಹಾರ ಮತ್ತು ಮಾಲಿನ್ಯ ಸೇರಿದಂತೆ ಇತರ ಕಾರಣಗಳಿಂದಲೂ ಕೂಡ ಕೂದಲು ಬಿಳಿಯಾಗಲು ಪ್ರಾರಂಭಿಸುತ್ತದೆ. ಕೂದಲು ಬಿಳಿಯಾಗುವುದರಲ್ಲಿ ಅನುವಂಶಿಕತೆಯು ಪಾತ್ರ ವಹಿಸುತ್ತದೆ. ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಕೂದಲು ಬಿಳಿಯಾಗಿದ್ದರೆ, ನಿಮ್ಮ ಕೂದಲು ಕೂಡ ಬಿಳಿಯಾಗಬಹುದು. ಕೆಲವು ರೋಗಗಳು ಅಥವಾ ವೈದ್ಯಕೀಯ ಪರಿಸ್ಥಿತಿಗಳು ಕೂಡ ಕೂದಲು ಬಿಳಿಯಾಗಲು ಕಾರಣವಾಗಿರುತ್ತದೆ.

ಇದನ್ನೂ ಓದಿ :Actress Sai Pallavi Networth: ಸಿಂಪಲ್ ಕ್ವೀನ್ ಸಾಯಿ ಪಲ್ಲವಿ ಆಸ್ತಿ ಮೌಲ್ಯ ಎಷ್ಟು ಗೊತ್ತಾ? ನಟಿ ಪ್ರತಿ ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು?

You may also like

Leave a Comment