Robert De Niro: ಬೆಳ್ಳಿ ಪರದೆಯ ಮೇಲೆ ಅಚ್ಚರಿಗಳು ನಡೆಯೋದು ಸಹಜ. ಆದರೆ, ಅದರಲ್ಲಿ ನಟಿಸೋ ನಟ ನಟಿಯರ ನಿಜ ಜೀವನದಲ್ಲೂ ಕೆಲವೊಮ್ಮೆ ಅಂಥ ಅಚ್ಚರಿಗಳು ನಡೆದು ಆಗಾಗ ಸಾಕಷ್ಟು ಸುದ್ದಿಯಾಗುತ್ತಾರೆ. ಅಂತೆಯೇ ಇದೀಗ ಹಾಲಿವುಡ್(Hollywood) ನಟ ರಾಬರ್ಡ್ ಡಿನೆರೋ( Robert De Niro) ಅವರ ಜೀವನದಲ್ಲೂ ಅಂತದ್ದೇ ಒಂದು ಘಟನೆ ನಡೆದಿದ್ದು, ಅವರು ತಮ್ಮ 79ನೇ ವಯಸ್ಸಿನಲ್ಲಿ ಏಳನೇ ಮಗುವಿಗೆ ತಂದೆಯಾಗಿದ್ದಾರೆ.
ಹೌದು, ಹಾಲಿವುಡ್(Hollywood) ನಟ ರಾಬರ್ಡ್ ಡಿನೆರೋ (Robert De Niro) ಅವರಿಗೆ ಈಗ 79 ವರ್ಷ. ಈ ವಯಸ್ಸಿನಲ್ಲೂ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗೋದ್ರು ಜೊತೆಗೆ ಕುಟುಂಬ ವಿಸ್ತರಣೆ ಬಗ್ಗೆಯೂ ಗಮನ ಹರಿಸುತ್ತಿದ್ದಾರೆ! ಅವರು ಇತ್ತೀಚೆಗೆ ಏಳನೇ ಮಗುವಿಗೆ ತಂದೆ ಆಗಿದ್ದಾರಂತೆ. ಈ ವಿಚಾರವನ್ನು ರಾಬರ್ಡ್ ಅವರೇ ಬಹಿರಂಗಪಡಿಸಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಇತ್ತೀಚೆಗೆ ಸಿನಿಮಾ ಒಂದರ ಪ್ರಮೋಷನ್ನಲ್ಲಿ ಅವರು ಪಾಲ್ಗೊಂಡಿದ್ದರು. ಆಗ ಅವರು ಏಳನೇ ಮಗುವಿನ ವಿಚಾರ ರಿವೀಲ್ ಮಾಡಿದ್ದಾರೆ. ‘ನಿಮಗೆ ಆರು ಮಕ್ಕಳಲ್ಲವೇ’ ಎಂದು ಸಂದರ್ಶಕ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ರಾಬರ್ಟ್ ಡಿನೆರೋ ಅವರು ಯಾವುದೇ ಮುಜುಗರ ಇಲ್ಲದೆ ‘ನನಗೆ ಏಳು ಮಕ್ಕಳು. ಇತ್ತೀಚೆಗೆ ಏಳನೇ ಮಗು ಜನಿಸಿದೆ’ ಎಂಬುದನ್ನು ಅವರು ಖಚಿತಪಡಿಸಿದ್ದಾರೆ.
ಅಂದಹಾಗೆ ರಾಬರ್ಟ್ ಡಿನೆರೋಗೆ ಇಬ್ಬರು ಪತ್ನಿಯರು ಹಾಗೂ ಮಾಡೆಲ್(Model) ವೊಬ್ಬರ ಜೊತೆ ಲಿವ್ ಇನ್ ರಿಲೇಶನ್(Live in relation) ಶಿಪ್ ನಲ್ಲಿದ್ದಾರೆ. ಇಬ್ಬರು ಪತ್ನಿಯರಿಗೆ ತಲಾ ಎರಡು ಮಕ್ಕಳು. ಮಾಡೆಲ್ ಜೊತೆ ಅವಳಿ ಮಕ್ಕಳಿಗೆ ತಂದೆಯಾಗಿದ್ದಾರೆ. ಅಲ್ಲದೇ, ಇದೀಗ ತನಗೆ ಆರಲ್ಲ, ಏಳು ಮಕ್ಕಳು ಎಂದು ಎಲ್ಲರನ್ನೂ ಅಚ್ಚರಿಪಡಿಸಿದ್ದು, ಆ ಏಳನೇ ಮಗುವಿನ ತಾಯಿ ಯಾರು ಎನ್ನುವುದನ್ನು ಅವರು ಬಹಿರಂಗ ಪಡಿಸಿಲ್ಲ. ಇಬ್ಬರು ಪತ್ನಿಯರಿಗೆ ವಿಚ್ಚೇದನ ನೀಡಿದ್ದ ಅವರು ಮಾಡೆಲ್ ಜೊತೆ ಸಹಜೀವನ ನಡೆಸುತ್ತಿದ್ದರು.
ಇನ್ನು ರಾಬರ್ಟ್ ಡಿನೆರೋ ಅವರು 60ರ ದಶಕದಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. ಸದ್ಯ ಅವರು ‘ಕಿಲ್ಲಿಂಗ್ ಆಫ್ ದಿ ಫ್ಲವರ್ ಮೂನ್’, ‘ಅಬೌಟ್ ಮೈ ಫಾದರ್’, ‘ವೈಸ್ ಗಯ್ಸ್’ ಮೊದಲಾದ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.
