Viral post: ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿಚಾರಗಳು ವೈರಲ್ ಆಗುತ್ತಲೇ ಇರುತ್ತದೆ. ಅಂತೆಯೇ ಇದೀಗ ವಿಚಾರವೊಂದು ಸಖತ್ ವೈರಲ್ (viral post) ಆಗಿದೆ. ಹೌದು, ವಿಚ್ಛೇದನ ಪಡೆದ ಮಹಿಳೆಯೋರ್ವಳು ತನ್ನ ಮದುವೆಗೆ (marriage) ತೆಗೆದು ಫೋಟೋಗಳ ಹಣ ಹಿಂತಿರುಗಿಸುವಂತೆ ಫೋಟೋಗ್ರಾಫರ್ (photographer) ಬೆನ್ನುಬಿದ್ದಿದ್ದಾಳೆ.
ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬರು “ ನಾನು ಈಗ ವಿಚ್ಛೇದನವನ್ನು ಪಡೆದಿದ್ದೇನೆ. ನನ್ನ ಮದುವೆಯ ದಿನದ ಫೋಟೋಗಳು ಇನ್ನು ಮುಂದೆ ನನಗೆ ಮತ್ತು ನನ್ನ ಮಾಜಿ ಪತಿಗೆ ಅಗತ್ಯವಿಲ್ಲ. ಹಾಗಾಗಿ
ನನ್ನ ಮದುವೆಗೆ ತೆಗೆದ ಫೋಟೋಗಳಿಗೆ ನೀಡಿದ ಹಣವನ್ನು
ವಾಪಸ್ ನೀಡಿ. ” ಎಂದು ಮಹಿಳೆ ಜೋಹಾನ್ಸ್ ಬರ್ಗ್ ಮೂಲದ ಫೋಟೋಗ್ರಾಫರ್ ಲ್ಯಾನ್ಸ್ ರೋಮಿಯೋಗೆ ಮೆಸೇಜ್ ಮೂಲಕ ಹೇಳಿದ್ದಾರೆ.
ಫೋಟೋಗ್ರಾಫರ್ ಇದೇನೋ ತಮಾಷೆ ಇರಬೇಕು ಎಂದುಕೊಂಡಿದ್ದಾನೆ. ಆದರೆ, ಮಹಿಳೆ ಗಂಭೀರವಾಗಿಯೇ ಹೇಳಿದ್ದು, ನಂತರ ಪ್ರತಿಕ್ರಿತಿಸಿದ ಫೋಟೋಗ್ರಾಫರ್ “ ನಾವು ಫೋಟೋಗಳನ್ನು ಗ್ರಾಹಕರಿಗೆ ನೀಡಿದ ಬಳಿಕ ಹಣವನ್ನು ಹಿಂತಿರುಗಿಸಲು ಸಾಧ್ಯವಿಲ್ಲ. ಛಾಯಾಗ್ರಹಣವು ಮರುಪಾವತಿಸಲಾಗದ ಸೇವೆಯಾಗಿದೆ” ಎಂದು ರೋಮಿಯೋ ಹೇಳಿದ್ದಾರೆ.
ಒಪ್ಪಂದದಲ್ಲಿ ಯಾವುದೇ ಮರುಪಾವತಿಗಳ ಬಗ್ಗೆ ತಿಳಿಸಿಲ್ಲ. 70% ಗಳಷ್ಟಾದರೂ ಹಣವನ್ನು ಮರಪಾವತಿ ಮಾಡಿರಿ ಎಂದು ಮಹಿಳೆ ಒತ್ತಾಯಿಸಿದ್ದಾರೆ. ಕೊನೆಗೆ ಮಹಿಳೆ ಬೆದರಿಕೆ ಹಾಕಿದ್ದು, ಕೊಡದಿದ್ದರೆ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಬೆದರಿಸಿದ್ದಾಳೆ.
ಸದ್ಯ ಈ ವಾಟ್ಸಪ್ ಮೆಸೇಜ್ ಸಖತ್ ವೈರಲ್ ಆಗಿದೆ.
ಮೆಸೇಜ್ ವೈರಲ್ ಆದ ನಂತರ ಮಹಿಳೆಯ ಮಾಜಿ ಪತಿ ಫೋಟೋಗ್ರಾಪರ್ ರೋಮಿಯೋರನ್ನು ಸಂಪರ್ಕಿಸಿದ್ದು, “ನಾನು ವೈರಲ್ ಸಂದೇಶಗಳನ್ನು ಓದಿದ್ದೇನೆ. ನಾನು ಆಕೆಯ ಪರವಾಗಿ ನಿಮ್ಮ ಬಳಿ ಕ್ಷಮೆಯಾಚಿಸುತ್ತೇನೆ. ಇದು ಮುಜುಗರದ ವಿಚಾರ” ಎಂದು ಹೇಳಿದ್ದಾರೆ.
https://twitter.com/LanceRomeo/status/1645842910514905113?s=20
ಇದನ್ನು ಓದಿ: Baby Born: ಮೂವರ ‘DNA’ ಯಿಂದ ಮಗುವಿನ ಯಶಸ್ವಿ ಜನನ!
