Home » Megha Shetty: ‘ಜೊತೆಜೊತೆಯಲಿ’ ಸೀರಿಯಲ್‌ಗೆ ಮೇಘಾ ಶೆಟ್ಟಿ ವಿದಾಯ!

Megha Shetty: ‘ಜೊತೆಜೊತೆಯಲಿ’ ಸೀರಿಯಲ್‌ಗೆ ಮೇಘಾ ಶೆಟ್ಟಿ ವಿದಾಯ!

0 comments
Megha Shetty

Megha Shetty: ಆರೂರ್ ಜಗದೀಶ್ ನಿರ್ದೇಶನದ ಕೌಟುಂಬಿಕ ಧಾರಾವಾಹಿಯಾದ ಜೊತೆ ಜೊತೆಯಲಿ ಧಾರವಾಹಿ ಈಗಾಗಲೇ ಕನ್ನಡಿಗರ ಮನಸ್ಸು ಗೆದ್ದಿದೆ. ಸದ್ಯ ಈ ಜೊತೆ ಜೊತೆಯಲಿ ಧಾರವಾಹಿ ಮೂಲಕ ಮನೆಮಾತಾಗಿರುವ ಸೀರಿಯಲ್ ನ ಮೇಘಾ ಶೆಟ್ಟಿಯ (Megha Shetty) ಅಂತಿಮ ದೃಶ್ಯಗಳನ್ನು ಚಿತ್ರೀಕರಿಸಲು ತಯಾರಿ ನಡೆಯುತ್ತಿದ್ದು, ಜೊತೆಜೊತೆಯಲಿ ಸೀರಿಯಲ್ ನಟಿ ಮೇಘಾ ಶೆಟ್ಟಿ ಭಾವುಕರಾಗಿದ್ದಾರೆ.

ಹೌದು, ಜೊತೆ ಜೊತೆಯಲ್ಲಿ ಕೌಟುಂಬಿಕ ಧಾರಾವಾಹಿ ಮೂಲಕ ಮನೆಮಾತಾಗಿರುವ ನಟಿ ಮೇಘಾ ಶೆಟ್ಟಿ ಕಿರುತೆರೆ ಧಾರಾವಾಹಿ ಮತ್ತು ಕಿರುತೆರೆಗೆ ವಿದಾಯ ಹೇಳಲು ಸಜ್ಜಾಗಿದ್ದಾರೆ.

ಮೇಘಾ ಅವರು, ಜೊತೆ ಜೊತೆಯಲಿ ನನ್ನ ನಾಲ್ಕು ವರ್ಷಗಳ ಪಯಣ ಮುಗಿಯುತ್ತಿದೆ. ನಾನು ಇಡೀ ಸಿಬ್ಬಂದಿಯೊಂದಿಗೆ ಹತ್ತಿರ ಬಾಂಧವ್ಯವನ್ನು ಹೊಂದಿದ್ದೇನೆ. ಇದು ಎರಡನೇ ಕುಟುಂಬದಂತೆ ಇತ್ತು ಎಂದು ಮೇಘಾ ಶೆಟ್ಟಿ ಹೇಳಿದ್ದಾರೆ.

ಮುಖ್ಯವಾಗಿ ಕಿರುತೆರೆ ಪ್ರಯಾಣವು ನನಗೆ ಬಹಳಷ್ಟು ಕಲಿಸಿದೆ, ಇದರಿಂದ ನನಗೆ ಸಿನಿಮಾಗಳಲ್ಲಿ ಬ್ರೇಕ್ ಸಿಕ್ಕಿದೆ. ಈ ಪ್ರಯಾಣದಲ್ಲಿ ಅಪಾರ ಬೆಂಬಲ ನೀಡಿದ ತನ್ನ ಅಭಿಮಾನಿಗಳಿಗೆ ಧನ್ಯವಾದವನ್ನೂ ಈ ಮೂಲಕ ತಿಳಿಸುತ್ತೇನೆ ಎಂದಿದ್ದಾರೆ.

ಈಗಾಗಲೇ ಗಣೇಶ್ ಜೊತೆ ಟ್ರಿಬಲ್ ರೈಡಿಂಗ್ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಮೇಘಾ ನಂತರ ಕೃಷ್ಣ ಜೊತೆ ದಿಲ್ ಪಸಂದ್ ಚಿತ್ರದಲ್ಲಿ ನಟಿಸಿದರು. ಈಗ, ಅವರು ಜಯತೀರ್ಥ ನಿರ್ದೇಶನದ ಧನ್ವೀರರ ಕೈವಾ ಬಿಡುಗಡೆಗೆ ಕಾಯುತ್ತಿದ್ದಾರೆ.

ಸದ್ಯಕ್ಕೆ ಕವೀಶ್ ಶೆಟ್ಟಿ ನಾಯಕರಾಗಿ ಮತ್ತು ಶ್ರವಣ್ ರಾಘವೇಂದ್ರ ನಿರ್ದೇಶನದ ನಂತರ ಆಪರೇಷನ್ ಲಂಡನ್ ಕೆಫೆಯ ಅಂತಿಮ ಶೆಡ್ಯೂಲ್ ಪೂರ್ಣಗೊಳಿಸುತ್ತಿದ್ದಾರೆ.

ಇದಲ್ಲದೆ, ಮೇಘಾ ಅವರು ಪ್ರಸ್ತುತ ಹಲವು ನಿರ್ದೇಶಕರೊಂದಿಗೆ ಮುಂದಿನ ಸಿನಿಮಾಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ಈಗ ಧಾರಾವಾಹಿ ಮುಗಿದಿರುವುದರಿಂದ ಸಿನಿಮಾದತ್ತ ಮಾತ್ರ ಗಮನ ಹರಿಸುತ್ತೇನೆ ಎಂದು ಹೇಳಿದ್ದಾರೆ. ಪ್ರಸ್ತುತ ನನಗೆ ಸಾಕಷ್ಟು ಆಫರ್ ಗಳು ಬರುತ್ತಿದ್ದು, ತನ್ನ ಸಿನಿಮಾ ವೃತ್ತಿಜೀವನದತ್ತ ಗಮನ ಹರಿಸಲು ಕಿರುತೆರೆಗ ವಿದಾಯ ಹೇಳುತ್ತಿದ್ದಾರೆ.

ಇದನ್ನೂ ಓದಿ:ಅಂಚೆಕಚೇರಿಯಿಂದ ಹೊಸ ಸೇವೆ! ಎಲ್ಲಾ ಅಗತ್ಯ ಸೇವೆ ನಿಮ್ಮ ಬಾಗಿಲಿದೆ, ONDCಯೊಂದಿಗೆ ಒಪ್ಪಂದ!!

You may also like

Leave a Comment