Home » Kadri Temple: ಮಂಗಳೂರು: ಕದ್ರಿ ದೇವಸ್ಥಾನಕ್ಕೆ ಬೈಕ್ ನೊಂದಿಗೆ ನುಗ್ಗಿದ ಮುಸ್ಲಿಂ ಯುವಕರು! ಪೊಲೀಸರಿಂದ ತೀವ್ರ ವಿಚಾರಣೆ!!!

Kadri Temple: ಮಂಗಳೂರು: ಕದ್ರಿ ದೇವಸ್ಥಾನಕ್ಕೆ ಬೈಕ್ ನೊಂದಿಗೆ ನುಗ್ಗಿದ ಮುಸ್ಲಿಂ ಯುವಕರು! ಪೊಲೀಸರಿಂದ ತೀವ್ರ ವಿಚಾರಣೆ!!!

by Mallika
0 comments
Kadri Temple

Kadri Shree Manjunatha Temple: ಮಂಗಳೂರಿನ ಪ್ರಸಿದ್ಧ ದೇವಸ್ಥಾನ ಕದ್ರಿ ದೇವಾಲಯಕ್ಕೆ( Kadri Shree Manjunatha Temple) ಅಪರಿಚಿತ ಯುವಕರು ಬೈಕ್ ನೊಂದಿಗೆ ನುಗ್ಗಿರುವ ಘಟನೆಯೊಂದು ನಡೆದಿದೆ. ಈ ಮೂವರು ಯುವಕರನ್ನು ಸ್ಥಳೀಯರು ವಶಕ್ಕೆ ಪಡೆದು, ಪೊಲೀಸರಿಗೆ ಒಪ್ಪಿಸಿದ್ದಾರೆ.

ವಶಕ್ಕೆ ಪಡೆದವರನ್ನು ಅಸೈಗೋಳಿ ನಿವಾಸಿಗಳಾದ ಹಸನ್ ಶಾಹಿನ್, ಜಾಫರ್, ಫಾರೂಕ್ ಎಂದು ಗುರುತಿಸಲಾಗಿದ್ದು, ಕದ್ರಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸ್ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಕದ್ರಿ ಠಾಣೆಯಲ್ಲಿ ವಶಕ್ಕೆ ಪಡೆದಿರುವವರ ಕುರಿತು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇದಕ್ಕೂ ಮೊದಲು ಶಂಕಿತ ಉಗ್ರ ಶಾರಿಕ್ ಕದ್ರಿ ದೇಗುಲ ಟಾರ್ಗೆಟ್ ಮಾಡಿದ್ದ. ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ. ಹಾಗಾಗಿ ಪೊಲೀಸರು ಕೂಡಾ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಇದನ್ನೂ ಓದಿ:Maharastra: ಮಗಳ ಮದ್ವೆಯಲ್ಲಿ 10 ಸಾವಿರ ಜನರನ್ನು ಸೇರಿ, 5 ಸಾವಿರ ದನಕರಗಳಿಗೂ ಊಟ ಹಾಕಿಸಿದ ರೈತ!

You may also like

Leave a Comment