Home » Adah Sharma Networth: ‘ದಿ ಕೇರಳ ಸ್ಟೋರಿ’ ಖ್ಯಾತಿಯ ಅದಾ ಶರ್ಮಾ ಎಷ್ಟು ಕೋಟಿ ಒಡತಿ ಗೊತ್ತಾ?

Adah Sharma Networth: ‘ದಿ ಕೇರಳ ಸ್ಟೋರಿ’ ಖ್ಯಾತಿಯ ಅದಾ ಶರ್ಮಾ ಎಷ್ಟು ಕೋಟಿ ಒಡತಿ ಗೊತ್ತಾ?

by Mallika
0 comments
Adah Sharma Networth

Adah Sharma Networth: ಬಹುಭಾಷಾ ನಟಿ ಅದಾ ಶರ್ಮಾ (Actress Adah Sharma) ’ದಿ ಕೇರಳ ಸ್ಟೋರಿ’ (The Kerala story) ಸಿನಿಮಾದ ಮೂಲಕ ದೇಶದಾದ್ಯಂತ ಭಾರೀ ಸುದ್ದಿಯಲ್ಲಿದ್ದಾರೆ. ಚಿತ್ರದಲ್ಲಿ ನಟಿ ಅದಾ ಅದ್ಭುತವಾಗಿ ನಟಿಸಿದ್ದಾರೆ. ನಟಿಯ ನಟನೆಗೆ ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೇ 5ರಂದು ಈ ಸಿನಿಮಾ ಬಿಡುಗಡೆ ಆಗಿದ್ದು, ಬಾಕ್ಸ್ ಆಫೀಸ್ ಕೊಳ್ಳೆ ಹೊಡಿತಿದೆ. ಎಲ್ಲೆಡೆ ವಿವಾಧದ ಮಧ್ಯೆಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸದ್ಯ ನಟಿ ಅದಾ ಶರ್ಮಾ ಆಸ್ತಿ ಮೌಲ್ಯ (Adah Sharma Networth) ಎಷ್ಟು ಗೊತ್ತಾ? ಈಕೆ ಸಿನಿಮಾಗೆ ಪಡೆಯುವ ಸಂಭಾವನೆ (Actress Adah Sharma Salary) ಎಷ್ಟು? ಸಂಪೂರ್ಣ ಮಾಹಿತಿ ಇಲ್ಲಿದೆ.

ಅದಾ ಶರ್ಮಾ ಮುಂಬೈನ (Mumbai) ಹಿಂದೂ ಕುಟುಂಬದಲ್ಲಿ ಜನಿಸಿದರು. ಆಕೆಯ ತಂದೆ ಭಾರತೀಯ ಮರ್ಚೆಂಟ್ ನೇವಿಯಲ್ಲಿ ಕ್ಯಾಪ್ಟನ್. ತಾಯಿ ಶಾಸ್ತ್ರೀಯ ನೃತ್ಯಗಾರ್ತಿ. ನಟಿ ಅದಾ ಶರ್ಮಾ ಐಷಾರಾಮಿ ಜೀವನ ಹೊಂದಿದ್ದಾರೆ. ಈಕೆಯ ಬಳಿ ಅನೇಕ ಐಷಾರಾಮಿ ಕಾರುಗಳು ಇವೆ. ಭಾರತದಲ್ಲಿರುವ ದುಬಾರಿ ಕಾರುಗಳನ್ನು ನಟಿ ಖರೀದಿಸಿದ್ದಾರೆ.

ಶರ್ಮಾ ಮುಂಬೈನಲ್ಲಿ ಐಷಾರಾಮಿ ಮನೆ ಕೂಡ ಹೊಂದಿದ್ದಾರೆ. ಈ ಬಂಗಲೆ ಕೋಟಿ ಕೋಟಿ ಬೆಲೆಬಾಳುತ್ತದೆ. ಅದಾ ಶರ್ಮಾ ಸುಮಾರು 10 ಕೋಟಿಗಳಷ್ಟು ನಿವ್ವಳ ಆಸ್ತಿ ಹೊಂದಿದ್ದಾರೆ. ಈಕೆ ‘ದಿ ಕೇರಳ ಸ್ಟೋರಿ’ ಸಿನಿಮಾ ಮಾಡಲು 1 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದೆ.

ಅದಾ ಶರ್ಮಾ ಅವರು 2008ರಲ್ಲಿ ರಿಲೀಸ್ ಆದ ‘1920’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ಅವರಿಗೆ ಹಲವು ಆಫರ್​ಗಳು ಬಂದವು. ನಟಿ ಕನ್ನಡದಲ್ಲಿ ಪುನೀತ್ ರಾಜ್​ಕುಮಾರ್ (Puneeth Rajkumar) ಜೊತೆ ‘ರಣವಿಕ್ರಮ’ ಸಿನಿಮಾದಲ್ಲಿ ನಟಿಸಿ, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇನ್ನು ಇತ್ತೀಚೆಗೆ ಬಿಡುಗಡೆಯಾದ ಕೇರಳ ಸ್ಟೋರಿಯಲ್ಲಿ ಶಾಲಿನಿ ಉನ್ನಿಕೃಷ್ಣನ್ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಅದಾ ಶರ್ಮಾ ತಮ್ಮ ಮುಂದಿನ ಚಿತ್ರ ‘ದಿ ಗೇಮ್ ಆಫ್ ಗಿರ್ಗಿಟ್’ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾ ನಟಿ ಸದಾ ಖಡಕ್ ಪೊಲೀಸ್ ಆಫೀಸರ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:B.M Sukumar Shetty: ಕುಂದಾಪುರ ಶಾಸಕ ಸುಕುಮಾರ ಶೆಟ್ಟಿ ಬಿಜೆಪಿಯಿಂದ ಉಚ್ಚಾಟನೆ ; ಸುಳ್ಳು ಸುದ್ದಿ ಹರಡಿದ ಕಿಡಿಗೇಡಿಗಳು!!

You may also like

Leave a Comment