Dowry: ಇಲ್ಲೊಬ್ಬ ಬೈಕ್ ಪ್ರೇಮಿ ಸರಿಯಾದ ಸಮಯಕ್ಕೆ ವರದಕ್ಷಿಣೆ ಏನೋ ಕೇಳಿದ್ದಾನೆ. ಆದರೆ ಮುಂದೆ ಎದುರಿಸಬೇಕಾದ ಸಮಸ್ಯೆ ಏನು ಅನ್ನೋದು ಮರೆತು ಹೋಗಿದ್ದನೋ ಏನೋ! ಹೌದು, ಇಲ್ಲೊಬ್ಬ ವರ, ವಧುವಿನ ಕುಟುಂಬದವರ ಬಳಿ ವರದಕ್ಷಿಣೆಯಾಗಿ (Dowry) ಬೈಕ್ ಕೇಳಿದ್ದು, ಅಲ್ಲೇ ಇದ್ದ ವರನ ತಂದೆ ಆತನಿಗೆ ಹಿಗ್ಗಾಮುಗ್ಗಾ ಬಾರಿಸಿದ್ದಾರೆ.
ಭಾರತದಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ 1961ರ ಪ್ರಕಾರ ಡೌರಿ ಕೊಡುವುದು ಹಾಗೂ ಕೊಳ್ಳುವುದು ಅಪರಾಧವಾಗಿದೆ. ಆದರೂ ಅಲ್ಲೊಂದು ಇಲ್ಲೊಂದು ಗೌಪ್ಯವಾಗಿ ಗಂಡು ಹೆಣ್ಣು ಎರಡು ಸಂಬಂಧ ಒಪ್ಪಂದ ಮೇರೆಗೆ ಉಡುಗೊರೆ ರೂಪವಾಗಿ ಡೌರಿ ಕೊಡುವುದು ಹಾಗೂ ಕೊಳ್ಳುವುದು ನಡೆಯುತ್ತದೆ. ಕೆಲವರು ಗಿಫ್ಟ್ ಅನ್ನೋ ಹೆಸರಿನಲ್ಲಿ, ಮತ್ತೆ ಕೆಲವರು ಸಂಪ್ರದಾಯ ಅನ್ನೋ ಹೆಸರಿನಲ್ಲಿ ವರದಕ್ಷಿಣೆ ಪದ್ಧತಿಯನ್ನು ಮುಂದುವರಿಸಿದ್ದಾರೆ.
ಹಾಗೆಯೇ ಇಲ್ಲೊಂದು ಮದುವೆ (Marriage) ಮನೆಯಲ್ಲಿ ವರ, ವಧುವಿನ ಕುಟುಂಬದವರಲ್ಲಿ ವರದಕ್ಷಿಣೆ ರೂಪದಲ್ಲಿ ಬೈಕ್ ಕೇಳಿದ್ದು, ವರನ ತಂದೆಯೇ ಆತನಿಗೆ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಬಾರಿಸಿದ್ದಾರೆ. ಈ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್ ಆಗ್ತಿದೆ. ಹಸ್ನಾ ಜರೂರಿ ಹೈ ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ವೀಡಿಯೋದಲ್ಲಿ, ವಯಸ್ಸಾದ ವ್ಯಕ್ತಿಯೊಬ್ಬರು ವರನ ಕೊರಳಪಟ್ಟೆಯನ್ನು ಹಿಡಿದು ಆತನಿಗೆ ಚಪ್ಪಲಿಯಿಂದ ಹೊಡೆಯುವುದನ್ನು ನೋಡಬಹುದು. ಇಷ್ಟೇ ಅಲ್ಲದೆ, ಹಿರಿಯ ವ್ಯಕ್ತಿ, ಮದುವೆಯಾದ ಬಳಿಕ ತನ್ನ ಹೆಂಡತಿಯನ್ನು ಸಂತೋಷವಾಗಿರಿಸಿಕೊಳ್ಳುವಂತೆ ಮಗನಿಗೆ ಎಚ್ಚರಿಕೆ ನೀಡುತ್ತಾನೆ. ಇಲ್ಲದಿದ್ದರೆ ನನ್ನ ಕೋಪವನ್ನು ಎದುರಿಸಬೇಕಾಗುತ್ತದೆ ಎಂದು ಹೇಳುತ್ತಾನೆ. ಅದಲ್ಲದೆ ನಾನು ನನ್ನ ಜಮೀನು ಮಾರಿ ನಿನಗೆ ಮೋಟಾರ್ ಸೈಕಲ್ ಕೊಡುತ್ತೇನೆ. ನೀನು ನನ್ನ ಸೊಸೆಯನ್ನು ಕರೆದುಕೊಂಡು ಮನೆಗೆ ಬಾ ಎಂದು ವರನ ತಂದೆ ಹೇಳುವುದನ್ನು ವೀಡಿಯೋದಲ್ಲಿ ನೋಡಬಹುದು.
ಅಳುತ್ತಲೇ ವರನೂ ಈ ಷರತ್ತನ್ನು ಒಪ್ಪಿಕೊಳ್ಳುತ್ತಾನೆ. ಅಂತಿಮವಾಗಿ, ವಧುವಿನ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ವಧುವಿಗೆ ನಗು ನಗುತ್ತಲೇ ಹಾಡಿನ ಮೂಲಕ ವಿದಾಯ ಕೋರುತ್ತಾರೆ.
ಟ್ವಿಟರ್‌ನಲ್ಲಿ ವೈರಲ್ ಆಗಿರುವ ಈ ವೀಡಿಯೋವನ್ನು ಈವರೆಗೆ 90 ಸಾವಿರ ಬಾರಿ ವೀಕ್ಷಿಸಲಾಗಿದೆ. ಈ ವಿಡಿಯೋ ಅನೇಕರನ್ನು ಆಕರ್ಷಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲವಾರು ಬಳಕೆದಾರರು ವರದಕ್ಷಿಣೆ ಬೇಡಿಕೆಯ ವಿರುದ್ಧ ತಕ್ಷಣದ ಕ್ರಮವನ್ನು ಶ್ಲಾಘಿಸಿದರೆ. ಒಟ್ಟಿನಲ್ಲಿ ಇಂತಹ ಮಾವನನ್ನು ಪಡೆಯಲು ಸೊಸೆ ಅದೃಷ್ಟವೇ ಮಾಡಿರಬೇಕು ಅನಿಸುತ್ತೆ.
https://twitter.com/HasnaZarooriHai/status/1655504517801328641?ref_src=twsrc%5Etfw%7Ctwcamp%5Etweetembed%7Ctwterm%5E1655504517801328641%7Ctwgr%5Eec7c4388a6077ea85cf9c0c0277b89848a8489ee%7Ctwcon%5Es1_c10&ref_url=https%3A%2F%2Fm.dailyhunt.in%2Fnews%2Findia%2Fkannada%2Fsuvarnanewstv-epaper-dh161e333039824748ba6e915b443e0ba8%2Fvaradakshineyaagibaikkelidhamaganigechappaliyallihiggaamuggabaarisidhatande-newsid-n498598940
