Home » Niveditha Gowda Birthday: ನಿವಿ ಗೊಂಬೆಯ ಹುಟ್ಟುಹಬ್ಬಕ್ಕೆ ಚಂದನ್‌ ಶೆಟ್ಟಿ ನೀಡಿದ ದುಬಾರಿ ಗಿಫ್ಟ್‌ ಯಾವುದು ಗೊತ್ತೇ?

Niveditha Gowda Birthday: ನಿವಿ ಗೊಂಬೆಯ ಹುಟ್ಟುಹಬ್ಬಕ್ಕೆ ಚಂದನ್‌ ಶೆಟ್ಟಿ ನೀಡಿದ ದುಬಾರಿ ಗಿಫ್ಟ್‌ ಯಾವುದು ಗೊತ್ತೇ?

0 comments
Niveditha Gowda Birthday

Niveditha Gowda Birthday: ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ (Niveditha Gowda) ಹಾಗೂ ಗಾಯಕ ಚಂದನ್​ ಶೆಟ್ಟಿ (Chandan Shetty) ಕಿರುತೆರೆಯ ಸ್ಟಾರ್​ ಜೋಡಿಯಾಗಿದ್ದಾರೆ. ಮೊದಲಿಗೆ ಟಿಕ್​ ಟಾಕ್ ಸ್ಟಾರ್ ಆಗಿದ್ದ ನಿವೇದಿತಾ ಗೌಡ ಈಗ ಕನ್ನಡಿಗರು ಮಾತ್ರವಲ್ಲದೆ ಎಲ್ಲೆಡೆಯಿಂದ ವಿಶೇಷ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಎಲ್ಲಿಗೆ ಹೋದರೂ, ಬಂದರೂ ಸಹ ರೀಲ್ಸ್ ಮಾಡುತ್ತಾರೆ. ಅವರು ಒಂದು ಯೂಟ್ಯೂಬ್ (YouTube ) ಚಾನೆಲ್ ಕೂಡ ಮಾಡಿಕೊಂಡಿದ್ದು, ಅದರಲ್ಲಿ ತಮ್ಮ ಎಲ್ಲಾ ವಿಡಿಯೋಗಳನ್ನು ಮಾಡಿ ಹಾಕುತ್ತಾರೆ. ನಿವೇದಿತಾ ಕಿರುತೆರೆಯಲ್ಲಿ ಕೂಡಾ ಬ್ಯುಸಿ ಇರುವ ನಟಿ ಎನ್ನಬಹುದು. ಒಟ್ಟಾರೆಯಾಗಿ ಅವರು ಎಲ್ಲಾ ಕಡೆ ಫೇಮಸ್​.

ಬಿಗ್ ಬಾಸ್ ಎಂಟ್ರಿ ಕೊಟ್ಟ ನಿವಿಗೆ ಚಂದನ್ ಶೆಟ್ಟಿ ಜೊತೆ ಪ್ರೇಮಾಂಕುರವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಒಟ್ಟಿನಲ್ಲಿ ಚಂದನ್, ತಮ್ಮ ಸಂಗೀತ ಸಂಯೋಜನೆಯಿಂದ ಸ್ಯಾಂಡಲ್‌ವುಡ್‌ನಲ್ಲಿ ಮೋಡಿ ಮಾಡ್ತಿದ್ರೆ, ನಿವಿ ‘ಗಿಚ್ಚಿ ಗಿಲಿ ಗಿಲಿ ಶೋ’ ಮೂಲಕ ಸದ್ದು ಮಾಡ್ತಿದ್ದಾರೆ.

ಇದೀಗ ನಿವೇದಿತಾ ಗೌಡ (Niveditha Gowda Birthday) ಅವರು ತಮ್ಮ 25ನೇ ವರ್ಷದ ಹುಟ್ಟುಹಬ್ಬವನ್ನು(Birthday) ಆಚರಿಸಿಕೊಂಡಿದ್ದಾರೆ. ಸದ್ಯ ಬರ್ತ್‌ಡೇ 2 ದಿನ ಮುಂಚಿತವಾಗಿಯೇ ಚಂದನ್ ಶೆಟ್ಟಿ ವಿಶೇಷ ಗಿಫ್ಟ್ (Gift) ಸಹ ನೀಡಿದ್ದಾರೆ. ಅದಲ್ಲದೆ ಪತ್ನಿಗೆ ರೊಮ್ಯಾಂಟಿಕ್ ಆಗಿ ಚಂದನ್ ವಿಶ್ ಮಾಡಿದ್ದಾರೆ.

ಹೌದು, ಮೇ 12ರಂದು ಪತ್ನಿ ಹುಟ್ಟುಹಬ್ಬಕ್ಕೆ ಸ್ಪೆಷಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ದಾರೆ. ಪತ್ನಿ ಹುಟ್ಟುಹಬ್ಬದ ಪ್ರಯುಕ್ತ 58 ಲಕ್ಷ ರೂಪಾಯಿಯ ಟೊಯೊಟಾ ಫಾರ್ಚುನರ್ ಲೆಜೆಂಡರ್ ಕಾರ್‌ ಚಂದನ್ ಖರೀದಿಸಿದ್ದಾರೆ. ಪತ್ನಿ ಮತ್ತು ತಾಯಿಯ ಜೊತೆ ದೇವಸ್ಥಾನಕ್ಕೆ ತೆರಳಿ ಕಾರಿಗೆ ಪೂಜೆ ಮಾಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ, ಹುಟ್ಟುಹಬ್ಬದ ಶುಭಾಶಯಗಳು. ಇಂದು ನೀನು ನಿನ್ನ ಜನ್ಮದಿನ ಆಚರಿಸುತ್ತಿರುವೆ, ನಿನಗೆ ಒಳ್ಳೆಯದಾಗಲಿ ಎಂದು ಬಯಸುವೆ. ನಾನು ನನ್ನ ಜೀವನದಲ್ಲಿ ಭೇಟಿ ಆಗಿರುವ ಅದ್ಭುತ, ವ್ಯಕ್ತಿ ನೀನು. ನನ್ನ ಜೀವನದಲ್ಲಿ ನಿನ್ನನ್ನು ಪಡೆದಿರೋದಿಕ್ಕೆ ತುಂಬ ಪುಣ್ಯ ಮಾಡಿದ್ದೇನೆ. ಮುಖ್ಯವಾಗಿ ನಿನ್ನ ನಗು ನನ್ನ ಜೀವನವನ್ನು ಬೆಳಕಾಗಿಸುತ್ತದೆ, ನಿನ್ನ ನಗು ನನ್ನ ಹೃದಯಕ್ಕೆ ಸಂತೋಷ ನೀಡುತ್ತದೆ. ನಿನ್ನ ಪ್ರೀತಿ ಜೀವನದಲ್ಲಿ ಎದುರಾಗುವ ಎಲ್ಲ ಸವಾಲುಗಳನ್ನು ಎದುರಿಸಲು ಶಕ್ತಿ ನೀಡುತ್ತದೆ. ಇಂದು ನಾವು ಒಟ್ಟಾಗಿ ಕಳೆದ ಸಮಯವನ್ನೆಲ್ಲ ನೆನಪಿಸಿಕೊಂಡು ಸಂಭ್ರಮಿಸೋಣ. ನಿನ್ನ ಕನಸುಗಳು ಈಡೇರಲಿ, ನನ್ನ ಸುಂದರ ಪತ್ನಿಗೆ ಹುಟ್ಟುಹಬ್ಬದ ಶುಭಾಶಯಗಳು. ಪದಗಳಲ್ಲಿ ಹೇಳಲಾಗದಷ್ಟು ನಾನು ನಿನ್ನ ಪ್ರೀತಿಸುವೆ ಎಂದು ಬರೆದುಕೊಂಡಿದ್ದಾರೆ.

ಸದ್ಯ ಚಂದನ್ ಹಾರೈಕೆಗೆ ನಿವಿ ಧನ್ಯವಾದಗಳು ‘ಐ ಲವ್ ಯೂ’ ಎಂದು ಕಾಮೆಂಟ್ ಮೂಲಕ ರಿಯಾಕ್ಟ್ ಮಾಡಿದ್ದಾರೆ.

ಇದನ್ನೂ ಓದಿ: Elephant: ಒಂಟಿ ಸಲಗದ ಜೊತೆ ಫೋಟೋ ಪೋಸ್! ಈತನ ಹುಚ್ಚಾಟ ವಿಡಿಯೋ ನೀವೇ ನೋಡಿ!

You may also like

Leave a Comment