Jr NTR: ಜೂನಿಯರ್ ಎನ್‌ಟಿಆರ್ (Jr NTR) ಅವರು ಈಗ ಪ್ಯಾನ್ ಇಂಡಿಯಾ ಸ್ಟಾರ್. ಎನ್ಟಿಆರ್ ನಟನೆಯ ಆರ್ಆರ್ಆರ್ (RRR) ಸಿನಿಮಾ ವಿಶ್ವಾದ್ಯಂತ ಸಖತ್ ಸದ್ದು ಮಾಡಿದ್ದು, ಆಸ್ಕರ್ ಪ್ರಶಸ್ತಿ ಮುಡಿಗೇರಿಸಿದೆ. ಇದೀಗ ನಟನಿಗೆ ಬೇಡಿಕೆಯೂ ಹೆಚ್ಚಾಗಿದೆ. ಸದ್ಯ ಮುಂದಿನ ಸಿನಿಮಾದ ಕಡೆಗೆ ಗಮನಹರಿಸಿರುವ ನಟ ವಿಶ್ವ ವಿಖ್ಯಾತಿ ಪಡೆದಿರುವ ಮೆಕ್ ಡೊನಾಲ್ಡ್ (Jr NTR- Mcdonalds) ಕಂಪನಿಗೆ ಪ್ರಚಾರಕ್ಕೆ ರಾಯಭಾರಿಯಾಗಿ ಆಯ್ಕೆ ಆಗಿದ್ದಾರೆ.
ಆಸ್ಕರ್ 2023 ಪ್ರಶಸ್ತಿ ಬಳಿಕ ದಕ್ಷಿಣ ಭಾರತದ ಸೂಪರ್ ಸ್ಟಾರ್ ಜೂನಿಯರ್ ಎನ್ಟಿಆರ್ ಜನಪ್ರಿಯತೆ ಹೆಚ್ಚುತ್ತಿದೆ. ದೇಶ, ಸಾಗರದಾಚೆಗೂ ಅಭಿಮಾನಿಗಳ ಸಂಖ್ಯೆ ದ್ವಿಗುಣಗೊಂಡಿದೆ. ಆರ್ಆರ್ಆರ್ ಎಂಬ ಸೂಪರ್ ಹಿಟ್ ಚಿತ್ರದಲ್ಲಿ ಅಮೋಘ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಸೆಳೆದಿರುವ ಇವರು ಮುಂದಿನ ಪ್ರೊಜೆಕ್ಟ್ಗಳಲ್ಲಿ ಬ್ಯುಸಿಯಾಗಿದ್ದಾರೆ.
ಜೂ.ಎನ್‌ಟಿಆರ್ ಅಭಿನಯದ ಮುಂದಿನ ‘ಎನ್‌ಟಿಆರ್ 30’ (NTR 30) ಸಿನಿಮಾದ ಮುಹೂರ್ತ ಕಾರ್ಯಕ್ರಮ ಇತ್ತೀಚೆಗಷ್ಟೇ ನಡೆಯಿತು. NTR30 ಎಂಬ ತಾತ್ಕಾಲಿಕ ಶೀರ್ಷಿಕೆಯುಳ್ಳ ಚಿತ್ರಕ್ಕೆ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ನಾಯಕಿ. ಕೊರಟಾಲ ಶಿವ ಆ್ಯಕ್ಸನ್ ಕಟ್ ಹೇಳಲಿದ್ದಾರೆ.
ಬಾಲಿವುಡ್ ಖ್ಯಾತ ನಟ ಹೃತಿಕ್ ರೋಷನ್ ಅಭಿನಯದ ವಾರ್ 2 ಸಿನಿಮಾದಲ್ಲಿ ಜೂ.ಎನ್‌ಟಿಆರ್ ಅಭಿನಯಿಸಲಿದ್ದಾರೆ. ಈ ಸಿನಿಮಾಕ್ಕೆ ಯರಾಜ್ ಫಿಲ್ಡ್ ಬಂಡವಾಳ ಹೂಡಲಿದ್ದು, ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಲಿದ್ದಾರೆ. ನಟ ಜೂನಿಯರ್ ಎನ್‌ಟಿಆರ್ ‘ವಾರ್-2’ ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಲು ಬರೋಬ್ಬರಿ 30 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:Retirement Age: ಇನ್ನು ಸರ್ಕಾರಿ ಉದ್ಯೋಗಿಗಳ ನಿವೃತ್ತಿ ವಯಸ್ಸು 5 ವರ್ಷ ಹೆಚ್ಚಳ ; ಕಾರಣವೇನು?!
