Karnataka Weather: ಈ ಬಾರಿ ಮಳೆರಾಯ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದಾನೆ. ಹೋದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸ್ವಲ್ಪ ಮಳೆ ಕಡಿಮೆ ಎಂದೇ ಹೇಳಬಹುದು. ಇದೀಗ ಹವಾಮಾನ ಇಲಾಖೆ (Karnataka Weather) ಹಲವು ಕಡೆ ಗುಡುಗು ಸಹಿತ ಬಿರುಗಾಳಿಯಿಂದ ಕೂಡಿದ ಮಳೆಯಾಗಲಿದೆ ಎಂಬ ಮುನ್ಸೂಚನೆಯನ್ನು ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗದಲ್ಲಿ ಮುಂದಿನ 2 ದಿನ ಗುಡುಗು ಸಹಿತ ಮಳೆಯಾಗಲಿದೆ. ಅಂದ ಹಾಗೆ ಪುತ್ತೂರು, ಕುಂದಾಪುರ, ಮಾಣಿ, ಕಾರ್ಕಳ, ಭಾಗಮಂಡಲ, ಕೋಟ, ಪಣಂಬೂರು, ಹುಣಸೂರು, ತುಮಕೂರಿನಲ್ಲಿ ಉತ್ತಮ ಮಳೆಯಾಗಿದೆ. ಕಲಬುರಗಿಯಲ್ಲಿ 41 ಡಿಗ್ರಿ ಸೆಲ್ಸಿಯಸ್ ಅತಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ.
ಇಂದು ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಮಳೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಮೋಚಾ ಚಂಡಮಾರುತದ ಪ್ರಭಾವದಿಂದ ಮಳೆ ಹಲವು ಕಡೆ ಅಬ್ಬರಿಸುತ್ತಿದೆ. ಈ ಮೋಚಾ ಪ್ರಭಾವಕ್ಕೆ ಹಲವು ಕಡೆ ಬೆಟ್ಟಗುಡ್ಡಗಳು ಕುಸಿದಿದೆ. ಕೃಷಿಭೂಮಿಗಳು ಜಲಾವೃತ ಆದ ಘಟನೆಗಳು ನಡೆದಿದೆ. ಹವಾಮಾನ ಇಲಾಖೆ ಕರಾವಳಿ ಭಾಗದ ಮೀನುಗಾರರಿಗೆ ಎಚ್ಚರಿಕೆ ಸಂದೇಶವನ್ನು ನೀಡಿದೆ.
SC ST ದೌರ್ಜನ್ಯ ತಡೆಯಂತಹಾ ಕಠಿಣ ಪ್ರಕರಣ ದಾಖಲು ಮಾಡುವ ಮೊದಲು ವಾಸ್ತವ ಪರಿಶೀಲನೆ ಅಗತ್ಯ: ಪೊಲೀಸರಿಗೆ ಸುಪ್ರೀಂ ಸೂಚನೆ
