Home » The Kerala Story: ದಿ ಕೇರಳ ಸ್ಟೋರಿ ತಂಡದವರಿಗೆ ಅಪಘಾತ! ನಟಿ ಅದಾ ಶರ್ಮಾಗೆ ಪೆಟ್ಟು

The Kerala Story: ದಿ ಕೇರಳ ಸ್ಟೋರಿ ತಂಡದವರಿಗೆ ಅಪಘಾತ! ನಟಿ ಅದಾ ಶರ್ಮಾಗೆ ಪೆಟ್ಟು

0 comments
Adah Sharma

The Kerala Story: ‘ದಿ ಕೇರಳ ಸ್ಟೋರಿ (The Kerala Story), ಕೇರಳದಲ್ಲಿ ಬಲವಂತವಾಗಿ ಯುವತಿಯರನ್ನು ಮತಾಂತರ ಮಾಡಿ ಭಯೋತ್ಪಾದನೆ ಚಟುವಟಿಕೆ ನೂಕುತ್ತಿದೆ ಎನ್ನುವ ವಿಚಾರವನ್ನಿಟ್ಟುಕೊಂಡು ಸಿನಿಮಾ ಮಾಡಿದ್ದು, ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ವೀಕೆಂಡ್ ವಾರದ ದಿನ ಸಿನಿಮಾ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದೆ. ದೇಶಾದ್ಯಂತ ಅದ್ಭುತ ಪ್ರದರ್ಶನ ಕಾಣುತ್ತಿದ್ದು, 100 ಕೋಟಿ ಕ್ಲಬ್ ಸೇರಿ ದಾಖಲೆ ಬರೆದಿದೆ. ಸದ್ಯ ಚಿತ್ರತಂಡ ಸಕ್ಸಸ್ ಸಂಭ್ರಮದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಿದೆ.

ಇದೀಗ ನಿರ್ದೇಶಕ ಸುದಿಪ್ರೋ ಸೇನ್, ನಟಿ ಅದಾ ಶರ್ಮಾ, ತಂಡದ ಮತ್ತಿತರರಿಗೆ ರಸ್ತೆ ಅಪಘಾತವಾದ ಸುದ್ದಿ ದೊರಕಿದೆ. ಹೌದು, ಮುಂಬೈನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಹೋಗುವಾಗ ತಂಡ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ.

ನಿನ್ನೆ(ಮೇ 14) ಚಿತ್ರತಂಡ ಮುಂಬೈನಲ್ಲಿ ಕಾರ್ಯಕ್ರಮ ಮುಗಿಸಿ ತೆಲಂಗಾಣದ ಕರೀಂ ನಗರಕ್ಕೆ ತೆರಳಬೇಕಿತ್ತು. ಅಪಘಾತವಾದ ಕಾರಣ ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ. ಇನ್ನು ‘ದಿ ಕೇರಳ ಸ್ಟೋರಿ’ ತಂಡಕ್ಕೆ ಅಪಘಾತವಾಗಿದೆ ಎಂಬ ಸುದ್ದಿ ಕುರಿತು ಅಭಿಮಾನಿಗಳ ಗೊಂದಲಕ್ಕೆ, ಚಿತ್ರತಂಡವೇ ಈ ಬಗ್ಗೆ ಪ್ರತಿಕ್ರಿಯೆ ನೀಡಿ ಬ್ರೇಕ್ ಹಾಕಿದೆ.

ನಿರ್ದೇಶಕ ಸುದಿಪ್ರೋ ಸೇನ್, ಅದಾ ಶರ್ಮಾ ಇಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.”ನಾನು ಚೆನ್ನಾಗಿದ್ದೇನೆ. ನಮ್ಮ ಅಪಘಾತದ ಬಗ್ಗೆ ಹರಿದಾಡುತ್ತಿರುವ ಸುದ್ದಿಯಿಂದಾಗಿ ನನಗೆ ಸಾಕಷ್ಟು ಸಂದೇಶಗಳು ಬರುತ್ತಿವೆ. ಇಡೀ ತಂಡ, ಚೆನ್ನಾಗಿದ್ದೇವೆ, ಗಂಭೀರವಾದದ್ದೇನೂ ಇಲ್ಲ, ಆದರೆ ನಿಮ್ಮೆಲ್ಲರ ಕಾಳಜಿಗೆ ಧನ್ಯವಾದ” ಎಂದು ಅದಾ ಶರ್ಮಾ ಟ್ವಿಟ್ ಮಾಡಿದ್ದಾರೆ.

ನಿರ್ದೇಶಕ ಸುದಿಪ್ರೋ ಸೇನ್ ಟ್ವಿಟ್ ಮಾಡಿ “ಇಂದು ನಾವು ನಮ್ಮ ಚಿತ್ರದ ಬಗ್ಗೆ ಮಾತನಾಡಲು ಕರೀಂನಗರಕ್ಕೆ ಭೇಟಿ ನೀಡಬೇಕಾಗಿತ್ತು. ದುರದೃಷ್ಟವಶಾತ್ ತುರ್ತು ಆರೋಗ್ಯ ಸಮಸ್ಯೆಯಿಂದಾಗಿ ನಮಗೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ. ಕರೀಂನಗರದ ಜನತೆಗೆ ಈ ಸಿನಿಮಾ ಮಾಡಿದ್ದೇವೆ. ನಮ್ಮ ಹೆಣ್ಣು ಮಕ್ಕಳನ್ನು ರಕ್ಷಿಸಲು ಈ ಸಿನಿಮಾ ಮಾಡಿದ್ದೇವೆ. ದಯವಿಟ್ಟು ನಮ್ಮನ್ನು ಬೆಂಬಲಿಸಿ” ಎಂದು ಬರೆದಿದ್ದಾರೆ.

ಅಪಘಾತದ ವಿಚಾರ ವೈರಲ್ ಆಗುತ್ತಿದ್ದಂತೆ ಮತ್ತೊಂದು ಟ್ವಿಟ್ ಮಾಡಿದ ನಿರ್ದೇಶಕರು “ಆರೋಗ್ಯದ ಬಗ್ಗೆ ನಿಮ್ಮ ಕಾಳಜಿಗಾಗಿ ಧನ್ಯವಾದಗಳು. ನಿಮ್ಮ ಕರೆಗಳು ಮತ್ತು ಕಾಳಜಿಯ ಸಂದೇಶಗಳಲ್ಲಿ ನಾವು ಮುಳುಗಿದ್ದೇವೆ. ನಾವು ಸಂಪೂರ್ಣವಾಗಿ ಚೆನ್ನಾಗಿದ್ದೇವೆ. ನಾಳೆ ನಾವು ನಮ್ಮ ಪ್ರಚಾರ ಕಾರ್ಯಕ್ರಮಗಳನ್ನು ಪುನರಾರಂಭಿಸುತ್ತೇವೆ. ದಯವಿಟ್ಟು ನಮ್ಮನ್ನು ಬೆಂಬಲಿಸುವುದನ್ನು ಮುಂದುವರಿಸಿ ಎಂದು ಬರೆದಿದ್ದಾರೆ.

 

ಇದನ್ನೂ ಓದಿ:ಕುಡಿದ ಮತ್ತಿನಲ್ಲಿ ಸ್ನೇಹಿತನಿಂದ ಕಾರು ಚಾಲನೆ, ಬಿಎಂಡಬ್ಲ್ಯೂ ಕಾರು-ಬಿಎಂಸಿ ಟ್ರಕ್‌ಗೆ ಡಿಕ್ಕಿ! ಗಗನಸಖಿ ದಾರುಣ ಸಾವು

You may also like

Leave a Comment