CM of Karnataka: ರಾಜ್ಯದಲ್ಲಿ ಬಹುಮತ ಪಡೆದ ಬಳಿಕ ಇದೀಗ ಸಿಎಂ(CM of Karnataka) ಆಯ್ಕೆ ಕಸರತ್ತು ಆರಂಭವಾಗಿದೆ. ಯಾರಾಗ್ತಾರೆ ಸಿಎಂ ಡಿಕೆಶಿನಾ?, ಸಿದ್ದರಾಮಯ್ಯನಾ? ಎಂಬೆಲ್ಲ ಪ್ರಶ್ನೆಗಳು ಇದೀಗ ಎದ್ದಿವೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಹಾಗೂ ಕೆಪಿಸಿಸಿ(KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್(D K Shivkumar) ಇಬ್ಬರೂ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ. ಆದರೆ ಈ ಇಬ್ಬರಿಗೂ ಇದೀಗ ಕಾಂಗ್ರೆಸ್ ಶಾಸಕರು ಶಾಕ್ ನೀಡಿದ್ದಾರೆ.
ಹೌದು, ನಿನ್ನೆ ನಡೆದ ಶಾಸಕಾಂಗ ಪಕ್ಷದ ಮಹತ್ವದ ಸಭೆಯಲ್ಲಿ ಸಿಎಲ್ ಪಿ(CLP) ನಾಯಕನಾಗಿ ಯಾರನ್ನು ಆಯ್ಕೆ ಮಾಡಬೇಕು, ಹಾಗೂ ನೂತನ ಸಿಎಂ ಯಾರು ಎನ್ನುವ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ ಈ ಹಮತ್ವದ ಸಭೆಗೆ ಕಾಂಗ್ರೆಸ್ ನ ಅನೇಕ ಶಾಸಕರು ಗೈರಾಗಿದ್ದರು. ಅಲ್ಲದೆ ಸಿಎಂ ಆಯ್ಕೆ ವಿಚಾರವಾಗಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ರಾತ್ರೋ ರಾತ್ರಿ ಎಐಸಿಸಿ(AICC) ವೀಕ್ಷಕರು ಶಾಸಕರಿಂದ ಮೌಖಿಕ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ವೀಕ್ಷಕರ ವಿರುದ್ಧವೇ ತಿರುಗಿಬಿದ್ದ ಶಾಸಕರು ಮೌಖಿಕ ಅಭಿಪ್ರಾಯ ಸಂಗ್ರಹ ಬೇಡವೆಂದು ಹೇಳಿದ್ದರು. ನಂತರ ಗುಪ್ತ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಅಂತೆಯೇ ರಾಜ್ಯದ ಮುಂದಿನ ಸಿಎಂ ಯಾರಾಗ್ಬೇಕು ಎಂದು ಕಾಂಗ್ರೆಸ್ ಶಾಸಕರಿಗೆ ಗುಪ್ತ ಮತದಾನದ ಮೂಲಕ ಅಭಿಪ್ರಾಯ ಪಡೆಯಲಾಗಿದೆ. ಆದರೆ ಶಾಸಕರ ನಡೆಯಿಂದ ಸಿದ್ದರಾಮಯ್ಯ(Siddaramaiah) ಮತ್ತು ಡಿಕೆಶಿಗೆ ಶಾಕ್ ಆಗಿದೆ. ಏಕೆಂದರೆ, ಯಾರ ಪರವಾಗಿಯೂ ಮತ ಹಾಕದ ಶೇಕಡಾ 50% ಹೆಚ್ಚು ಶಾಸಕರು ಲೆಫ್ಟ್ ಟು ಹೈಕಮಾಂಡ್ (Left to Highcommand) ಅಂತ ಬರೆದಿದ್ದು, ಈ ಮೂಲಕ ಅನಗತ್ಯ ಗೊಂದಲ ಬೇಡ ಅನ್ನೋ ನಿಲುವಿಗೆ ಬಂದಿದ್ದಾರೆ. ಅಲ್ಲದೆ, ಹೈಕಮಾಂಡ್ ಹೇಳಿದಂತೆ ಆಗಲಿ ಎಂದೂ ಹೇಳಿದ್ದಾರೆ. ಇನ್ನೊಂದೆಡೆ, ಎಐಸಿಸಿ(AICC) ವೀಕ್ಷಕರು ಶಾಸಕರ ಅಭಿಪ್ರಾಯ ಪಡೆದು ದೆಹಲಿಗೆ ಹೋಗಿದ್ದಾರೆ.
ಈ ಮೂಲಕ ಕರ್ನಾಟಕ ಸಿಎಂ ಆಯ್ಕೆ ವಿಚಾರ ಇದೀಗ ಹೈಕಮಾಂಡ್ ಅಂಗಳಕ್ಕೆ ತಲುಪಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ ಸದ್ಯ ಇದೀಗ ಸಿದ್ದು ಮತ್ತು ಡಿಕೆಶಿ ತಾವೇಕೆ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂಬ ವಾದವನ್ನು ಮುಂದಿಟ್ಟು ಒಬ್ಬರಿಗೊಬ್ಬರು ಸವಾಲು ಹಾಕಿದ್ದಾರೆ.
ಇದನ್ನು ಓದಿ: Viral post: ಕಟೀಲರನ್ನು ವಿಶ್ವಸಂಸ್ಥೆಯ ಅಧ್ಯಕ್ಷರನ್ನಾಗಿ ಮಾಡಿ, ಆದ್ರೆ ದಕ್ಷಿಣ ಕನ್ನಡದ ಎಂಪಿ ಮಾಡ್ಬೇಡಿ: ಶ್ರದ್ಧಾಂಜಲಿ ಬ್ಯಾನರ್ ಬೆನ್ನಲ್ಲೇ ನಳಿನ್ ವಿರುದ್ಧ ಮತ್ತೊಂದು ಪೋಸ್ಟರ್ !
