Home » Election: ಕರ್ನಾಟಕದ ಜನರು 10 ತಿಂಗಳಿನಲ್ಲಿ ಮತ್ತೆ ಚುನಾವಣೆಗೆ ಸಿದ್ಧರಾಗಿ!

Election: ಕರ್ನಾಟಕದ ಜನರು 10 ತಿಂಗಳಿನಲ್ಲಿ ಮತ್ತೆ ಚುನಾವಣೆಗೆ ಸಿದ್ಧರಾಗಿ!

0 comments
Election

Election: ಕೆಲವೇ ದಿನಗಳ ಹಿಂದೆ ಅಂದರೆ ಮೇ 10 ರಂದು ಕರ್ನಾಟಕ ವಿಧಾನಸಭೆ ಚುನಾವಣೆ (Election) ಪೂರ್ಣಗೊಂಡಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಿದೆ. ಸದ್ಯ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡಲಿದ್ದು ಯಾರಿಗುಂಟು ಯಾರಿಗಿಲ್ಲ ಎಂಬ ಗೇಮ್ ಶುರುವಾಗಿದೆ, ಇನ್ನೇನು ಮಾನ್ಯ ಮುಖ್ಯ ಮಂತ್ರಿಗಳ ನೇಮಕ ಆಗಲಿದೆ. ಸದ್ಯ 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಇದಕ್ಕೂ ಮೊದಲು ರಾಜ್ಯದ ಜನರು ಸಾಲು-ಸಾಲು ಚುನಾವಣೆ ಎದುರಿಸಬೇಕಿದೆ.

ಹೌದು, ಈಗಾಗಲೇ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡಿದೆ. ಆದರೆ ಈಗ ಬೆಂಗಳೂರು ನಗರದ ಜನರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಸಿದ್ಧವಾಗಬೇಕು. ಉಳಿದ ಜಿಲ್ಲೆಗಳ ಜನರು ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗೆ ಮತದಾನ ಮಾಡಬೇಕು.

ಈಗಾಗಲೇ 2021ರ ಏಪ್ರಿಲ್‌ಗೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಅವಧಿ ಮುಕ್ತಾಯಗೊಂಡಿದೆ. ವಿವಿಧ ಕಾರಣಗಳನ್ನು ನೀಡಿ ಚುನಾವಣೆಯನ್ನು ಮುಂದೂಡಲಾಗಿತ್ತು. ಈಗ ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಚುನಾವಣೆಗಳನ್ನು ನಡೆಸಲು ರಾಜ್ಯ ಚುನಾವಣಾ ಆಯೋಗ ಸಿದ್ಧತೆ ಕೈಗೊಂಡಿದೆ.

ಸದ್ಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ಸಹ ನಡೆಯಬೇಕಿದೆ. 2020ರ ಸೆಪ್ಟೆಂಬರ್‌ನಲ್ಲಿಯೇ ಪಾಲಿಕೆ ಅವಧಿ ಅಂತ್ಯಗೊಂಡಿದೆ. ಬಳಿಕ ಆಡಳಿತಾಧಿಕಾರಿ ನೇಮಕ ಮಾಡಿ ಬೆಂಗಳೂರಿನ ಆಡಳಿತ ನೋಡಿಕೊಳ್ಳಲಾಗುತ್ತಿದೆ. ಅದಲ್ಲದೆ ಕರ್ನಾಟಕ ಸರ್ಕಾರ ಬಿಬಿಎಂಪಿಯ ವಾರ್ಡ್‌ಗಳ ಸಂಖ್ಯೆಯನ್ನು 198 ರಿಂದ 243ಕ್ಕೆ ಏರಿಕೆ ಮಾಡಿದೆ. ಇದರಿಂದಾಗಿ ಪಾಲಿಕೆ ಚುನಾವಣೆ ವಿಳಂಬವಾಗಿದೆ. ಆದ್ದರಿಂದ ಬಿಬಿಎಂಪಿಗೆ ಸಹ ಚುನಾವಣೆ ನಡೆಯಬೇಕಿದೆ.

ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ, ಬಿಬಿಎಂಪಿ ಚುನಾವಣೆ ಮುಗಿಯುವ ಹೊತ್ತಿಗೆ ಲೋಕಸಭೆ ಚುನಾವಣೆ ಎದುರಾಗಲಿದೆ. 2019ರಲ್ಲಿ ಲೋಕಸಭೆ ಚುನಾವಣೆ ನಡೆದಿತ್ತು, 2024ರ ಏಪ್ರಿಲ್-ಮೇ ತಿಂಗಳಿನಲ್ಲಿ ಮತ್ತೆ ಚುನಾವಣೆ ನಡೆಯಲಿದೆ.

2019ರ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 25ರಲ್ಲಿ ಬಿಜೆಪಿ ಜಯಗಳಿಸಿತ್ತು. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷದ ಮುನ್ನಡೆ ಆಗಲಿದೆ ಎಂದು ಕಾದುನೋಡಬೇಕಿದೆ.

 

ಇದನ್ನು ಓದಿ: 7th Pay Commission: 7ನೇ ವೇತನ ಆಯೋಗದ ಅವಧಿ 6 ತಿಂಗಳು ವಿಸ್ತರಣೆ!! 

You may also like

Leave a Comment