Home » Jharkhand: ಮದುವೆ ಬೇಡ ಅಂದದಕ್ಕೆ ಯುವತಿಯ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ!

Jharkhand: ಮದುವೆ ಬೇಡ ಅಂದದಕ್ಕೆ ಯುವತಿಯ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ!

by ಹೊಸಕನ್ನಡ
0 comments
Jharkhand

Jharkhand: ಮದುವೆ(Marriage) ಎಂದರೆ ಸಂಭ್ರಮ ಸಡಗರ ಎನ್ನುವ ಕಾಲವಿತ್ತು. ಆದರೆ ಇಂದಿನ ದಿನಗಳಲ್ಲಿ ಒಂದು ಮದುವೆಗೆ ಸಾವಿರಾರು ಸಮಸ್ಯೆಗಳು ಬರುತ್ತವೆ. ಗಂಡು-ಹೆಣ್ಣು ಒಪ್ಪಿದರೆ ಅವರ ಕುಟುಂಬದಿಂದಲೇ ಸಮಸ್ಯೆ ಇರುತ್ತದೆ. ಅಂತೆಯೇ ಇಲ್ಲೊಬ್ಬಳು ಯುವತಿ ಮದುವೆಯಾಗಲು ಒಪ್ಪಿಲ್ಲ ಎನ್ನುವ ಕಾರಣಕ್ಕೆ ಆಕೆಯ ತಲೆ ಕೂದಲು ಬೋಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ಅಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

ಹೌದು, ಜಾರ್ಖಂಡ್(Jharkhand)ರಾಜಧಾನಿ ರಾಂಚಿಯಿಂದ (Ranchi) 185 ಕಿಲೋ ಮೀಟರ್ ದೂರದಲ್ಲಿರುವ ಹಳ್ಳಿಯಲ್ಲಿ ತನ್ನ ಒಪ್ಪಿಗೆ ಇಲ್ಲದೇ ಕುಟುಂಬ ಸದಸ್ಯರು ಗೊತ್ತುಪಡಿಸಿದ ಯುವಕನೊಂದಿಗೆ ಮದುವೆ ಧಿಕ್ಕರಿಸಿದ ಯುವತಿಯನ್ನು ಥಳಿಸಿ, ಆಕೆಯ ತಲೆಕೂದಲನ್ನು ಬೋಳಿಸಿ ಮೆರವಣಿಗೆ ಮಾಡಿಸಿರುವ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹುಡುಗಿಯ ಅತ್ತಿಗೆ, ಮೂವರು ಪಂಚಾಯತ್ ಸದಸ್ಯರು ಸೇರಿದಂತೆ ಒಟ್ಟು ನಾಲ್ವರನ್ನು ವಿಚಾರಣೆಗಾಗಿ ಪೊಲೀಸರು(Police) ಬಂಧಿಸಿದ್ದಾರೆ.

ಅಂದಹಾಗೆ ಯುವತಿಯ ಮದುವೆಯನ್ನು ಏಪ್ರಿಲ್ 20ಕ್ಕೆ ನಿಗದಿಪಡಿಸಲಾಗಿತ್ತು. ಆದರೆ, ಆಕೆ ಮದುವೆಯಾಗಲು ನಿರಾಕರಿಸಿದಳು. ನಂತರ ಯುವತಿ ಸುಮಾರು 20 ದಿನಗಳ ಕಾಲ ನಾಪತ್ತೆಯಾಗಿದ್ದಳು. ಅವಳು ಹಿಂದಿರುಗಿದ ನಂತರ, ಆಕೆಯನ್ನು ಗ್ರಾಮ ಪಂಚಾಯತಿಗೆ ಕರೆಯಲಾಯಿತು. ಆಕೆಯ ಕುಟುಂಬದ ಸದಸ್ಯರು ಮತ್ತು ಇತರ ಸಂಬಂಧಿಕರು ಕೂಡ ಪಂಚಾಯತ್‌ನಲ್ಲಿ ಹಾಜರಿದ್ದರು. ಪಂಚಾಯತ್ ಸದಸ್ಯರ ನಿರ್ಧಾರದ ಆಧಾರದ ಮೇಲೆ, ಆಕೆಯ ಕೂದಲನ್ನು ಕತ್ತರಿಸಿ ಥಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.

ಈ ಯುವತಿಗೆ ಪೋಷಕರಿಲ್ಲ, ಆಕೆಯ ಮೂವರು ಸಹೋದರಿಯರಿಗೆ ವಿವಾಹವಾಗಿದ್ದು, ಒಬ್ಬ ವಿಕಲಾಂಗ ಸಹೋದರ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾನೆ. ಹೀಗೆ ಸಂಬಂಧಿಗಳಿಂದಲೇ ಅವಮಾನಿತಳಾದ ಹುಡುಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದು, ಆಕೆಗೆ ಮೇದಿನಿಗರದ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

 

ಇದನ್ನು ಓದಿ: Working Women: ಸದಾ ಬ್ಯುಸಿ ಇರುವ ಮಹಿಳೆಯರೇ ಇಲ್ಲಿ ಗಮನಿಸಿ, ಈ ಟಿಪ್ಸ್​ ಫಾಲೋ ಮಾಡಿ 

You may also like

Leave a Comment